ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಮುಖ್ಯಮಂತ್ರಿ ಪುತ್ರ ನಿಖಿಲ್ ವಿರುದ್ಧ ಸುಮಲತಾ ಅವರಿಗೆ ಬಾರಿ ಅಂತರದಲ್ಲಿ ಗೆಲುವು..

0
366

ಲೋಕಸಭಾ ಚುನಾವಣೆಯಲ್ಲಿ ಇಡಿ ದೇಶದ ತುಂಬೆಲ್ಲ ಸುದ್ದಿ ಹರಡಿಸಿದ ಮಂಡ್ಯದ ಚುನಾವಣೆಯ ಫಲಿತಾಂಶ ತಿಳಿದಿದ್ದು, ಸುಮಲತಾ ಅಂಬರೀಶ್ 98, ಸಾವಿರ ಬಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೈತ್ರಿ ಕೂಸು ನಿಖಿಲ್ ಕುಮಾರಸ್ವಾಮಿಗೆ ಸೋಲು ಕಂಡಿದ್ದು ಮೈತ್ರಿಯಲ್ಲಿ ಮತ್ತಷ್ಟು ಆಘಾತ ಮೂಡಿಸಿದೆ. ಈ ಚುನಾವಣೆಯಲ್ಲಿ HD ಕುಟುಂಬದ ಎರಡನೇ ಸೋಲು ಆಗಿದ್ದು ಜೆಡಿಎಸ್ ನಲ್ಲಿ ಒಂದೇ ಒಂದು ಅಭ್ಯರ್ಥಿ ಗೆಲುವು ಸಾಧಿಸಿದ್ದು, ಅದರಲ್ಲಿ ಮುಖ್ಯಮಂತ್ರಿಯ ಪುತ್ರ ಪಕ್ಷೇತರ ಅಭ್ಯರ್ಥಿ ವಿರುದ್ದ ಸೋಲು ಕಂಡಿರುವುದು ಆಘಾತಕಾರಿಯಾಗಿದೆ. ಇದರಲ್ಲಿ ಸುಮಲತಾ ಗೆಲುವು ಸಾಧಿಸಿರುವುದು ದೊಡ್ಡ ಮಟ್ಟದ ಸಾಧನೆಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೌದು ಚುನಾವಣೆ ಪ್ರಾರಂಭದಿಂದ ಹಿಡಿದು ಮತಎಣಿಕೆ ವರೆಗೆ ಬಾರಿ ಕುತೂಹಲ ಮೂಡಿಸಿರುವ ಮಂಡ್ಯ ಚುನಾವಣೆ ಕಣ ಕ್ಷಣ ಕ್ಷಣಕ್ಕೂ ಹೊಸ ಅಲೆಯನ್ನು ಮೂಡಿಸುತ್ತ ನಿಖಿಲ್ ಮತ್ತು ಸುಮಲತಾ ಅವರ ನಡುವೆ ಹಾವು ಏಣಿಯ ಆಟ ನಡೆಯುತ್ತಿತ್ತು. ಒಂದು ಹಂತದ ವರೆಗೆ ನಿಖಿಲ್ ಮುನ್ನಡೆಯನ್ನು ತೋರಿಸುತಿತ್ತು, ಎರಡು ಅಭ್ಯರ್ಥಿಗಳು ಕೂಡ ದೇವಿ ಚಾಮುಂಡೇಶ್ವರಿಗೆ ಮೊರೆಹೊಗಿದರು ಸುಮಲತಾ ದೇವಿಯಲ್ಲಿ ಬೇಡಿಕೊಳ್ಳುತ್ತಿದಂತೆ ಬಾರಿ ಮುನ್ನಡೆ ಕಂಡು ಬಂದಿತು ಅದನ್ನೆ ಮುಂದುವರೆಸಿಕೊಂಡು ಬಂದ ಸುಮಲತಾ 50,000 ಸಾವಿರ ಅಂತರದಲ್ಲಿ ಮುನ್ನಡೆ ಸಾಧಿಸುತ್ತಾ ಬಂದರು ಕೊನೆಯ 3 ಸುತ್ತಿನ ಮತ ಏಣಿಕೆ ತಲುಪಿದಾಗ 65,000 ಸಾವಿರ ಮುನ್ನಡೆ ಕಂಡು ಬಂದಿತು, ಈ ವೇಳೆಗೆ ಸುಮಲತಾ ಗೆಲುವು ಪಕ್ಕಾ ಎನ್ನುವ ಜನರು ಸಂಭ್ರಮಾಚರಣೆ ಮುಳುಗಿದರು.

ಈ ವೇಳೆ ಸುಮಲತಾ ಮಂಡ್ಯ ಜನತೆ ಎಂದಿಗೂ ತಮ್ಮ ಕೈ ಹಿಡಿದಿದ್ದು, ಈಗಲೂ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಫಲಿತಾಂಶ ಹೇಗೆ ಬಂದರೂ ಕೂಡ ಸಮಾನವಾಗಿ ಸ್ವೀಕಾರ ಮಾಡುವುದಾಗಿ ಸುಮಲತಾ ಹೇಳಿದ್ದಾರೆ. ಆದರೆ ಮಂಡ್ಯದ ಜನರು ಸುಮಲತಾ ಅವರನ್ನು ಅಭಿಮಾನದಿಂದ ಮತಗಳ ಹೊಳೆಯನ್ನು ಹರಿಸಿ ಗೆಲ್ಲಿಸಿದ್ದಾರೆ. ಈ ಕುರಿತು ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ಮಂಡ್ಯದ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಏನಾಯಿತು ಜೆಡಿಎಸ್?

ಹಾಸನ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಪ್ರತಿಸ್ಫರ್ಧಿ, ಬಿಜೆಪಿಯ ಎ.ಮಂಜು ಎದುರು 1,42,123 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ವೇಳೆ, ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಎದುರು 27 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದಾರೆ. ಮತ್ತೆ ಮುಖ್ಯಮಂತ್ರಿಯ ಪುತ್ರ ನಿಖಿಲ್ ಕೂಡ ಸುಮಲತಾ ವಿರುದ್ದ ತಲೆ ಬಾಗಿದ್ದು ಜೆಡಿಎಸ್-ನಲ್ಲಿ ಬಾರಿ ನಷ್ಟ ಅನುಭವಿಸಿದೆ ಅಷ್ಟ ಅಲ್ಲದೆ ಇದು ಅಜ್ಜ ಮೊಮ್ಮಕಳ ಫಲಿತಾಂಶವಾದರೆ ಇತ್ತ ಸಿಎಂ ಕುರ್ಚಿಯಲ್ಲಿರುವ ಕುಮಾರಸ್ವಾಮಿಯವರ ಸರ್ಕಾರ ಪತನವಾಗಿತ್ತೆ ಎನ್ನುವುದರ ಬಗ್ಗೆ ಸುದ್ದಿ ಹರಿದಾಡುತ್ತಿದೆ, ಇಷ್ಟೊಂದು ನಷ್ಟದಲ್ಲಿರುವ hd ಕುಟುಂಬ ಸಿಎಂ ಕುರ್ಚಿ ಕಳೆದುಕೊಂಡರೆ ಯಾವ ಹಂತಕ್ಕೆ ತಲುಪಬಹುದು ಎನ್ನುವುದು ಕಾದು ನೋಡಬೇಕಿದೆ.

ಏನಾಯಿತು ಸುಮಲತಾ ಹೆಸರಿನ HD ಪ್ಲಾನ್?

ಮುಖ್ಯಮಂತ್ರಿಯವರ ಮಗನ ವಿರುದ್ದ ಸುಮಲತಾ ಸ್ಪರ್ಧೆಗೆ ಇಳಿಯುವುದು ಮೈತ್ರಿ ಸರ್ಕಾರಕ್ಕೆ ಇಷ್ಟ ವಿಲ್ಲದ ಕಾರಣ ಸುಮಲತಾಗೆ ಸುಮಲತಾ ಹೆಸರಿನಿಂದ ತೊಡಕು ತೊಡಕು ಮಾಡಿದ ಪ್ಲಾನ್ ನಿಂದ ಕ್ರಮಸಂಖ್ಯೆ 19 ಸುಮಲತಾ 1188, ಕ್ರಮಸಂಖ್ಯೆ 21 ಸುಮಲತಾ ಎಂ 1061, ಕ್ರಮಸಂಖ್ಯೆ 22 ರ ಸುಮಲತಾಗೆ 367 ಮತಗಳು. ಒಟ್ಟು ಮತಗಳು – 2616. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸೋಲಿಸಲೆಂದೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಕೂಟ ಹೆಣೆದಿದ್ದ ತಂತ್ರದಂತೆ ಮೂವರು ಸುಮಲತಾ ಹೆಸರಿನವರನ್ನು ಕಣಕ್ಕಿಳಿಸಲಾಗಿತ್ತು. ಇದರಿಂದ ಅಲ್ಪ ಮಟ್ಟದ ಮತಗಳು ಮಾತ್ರ ಮಿಸ್ ಆದರೆ ಉಳಿದ ಸಾವಿರಾರು ಮತಗಳು ಸುಮಲತಾ ಅಂಬರೀಶ್ ಅವರಿಗೆ ಬಂದಿವೆ.