ದರ್ಶನ್ – ಸುದೀಪ್ ಸಂಘರ್ಷಕ್ಕೆ ಸುಮಲತಾ ಅಂಬರೀಶ್ ಟ್ವೀಟ್ !

0
624

ಬೆಂಗಳೂರು: ನಟ ದರ್ಶನ್ ಹಾಗೂ ನಟ ಸುದೀಪ್ ಅವರ ನಡುವಿನ ವೈಮನಸನ್ನು ಬಗೆಹರಿಸುವಂತೆ ಅಂಬರೀಷ್ ಅವರಿಗೆ ಹೇಳಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್ ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು  ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಮತ್ತು ಸುದೀಪ್ ಅವರ ಜಗಳದಲ್ಲಿ ತಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿರುವ ಅವರು, ಅವರಿಬ್ಬರೂ ತಮ್ಮ ತಮ್ಮ ನಿರ್ಧಾರಗಳನ್ನು ಸ್ವಂತವಾಗಿಯೇ ತೆಗೆದುಕೊಳ್ಳುವಷ್ಟು ಪ್ರಬುದ್ಧರು. ಹೀಗಾಗಿ ಅವರ ನಿರ್ಧಾರಗಳನ್ನು ನಾವು ಗೌರವಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಮೆಜೆಸ್ಟಿಕ್ ಚಿತ್ರದಲ್ಲಿನ ದರ್ಶನ್ ಅವರ ಆಯ್ಕೆಗೆ ತಾವೇ ಕಾರಣ ಎಂಬ ಸುದೀಪ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ದರ್ಶನ್, ತಾವು ಮತ್ತು ಸುದೀಪ್ ಚಿತ್ರರಂಗದ ನಟರಷ್ಟೇ. ತಾವು ಸ್ನೇಹಿತರಲ್ಲ ಎಂದು ಹೇಳಿದ್ದರು.

ನಟ ದರ್ಶನ್, ನಾನು ಮತ್ತು ಸುದೀಪ್ ಇನ್ಮುಂದೆ ಗೆಳೆಯರಲ್ಲ, ಸ್ಯಾಂಡಲ್ ವುಡ್ ನ ನಟರು ಅಷ್ಟೇ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಿಚ್ಚ ಸುದೀಪ್, ಗಿವ್ ರೆಸ್ಪೆಕ್ಟ್ ಅಂಡ್ ಟೇಕ್ ರೆಸ್ಪೆಕ್ಟ್ ಎಂದು ತಿರುಗೇಟು ನೀಡಿದ್ದರು. ಇಬ್ಬರ ನಡುವಿನ ಸಂಬಂಧ ಹಳಸಿರುವುದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಸಂಧಾನ ನಡೆಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಂಬರೀಶ್ ಅವರನ್ನು ಅಭಿಮಾನಿಗಳು ಕೇಳಿಕೊಂಡಿದ್ದರು ಈ ಸಂಬಂಧವಾಗಿ ಸುಮಲತ ಅವರು ಈ ಕೆಗಿನಂತೆ ಟ್ವಿಟ್ ಮಾಡಿದ್ದಾರೆ.

ಅಂಬರೀಶ್ ಮಧ್ಯಸ್ಥಿಕೆ ವಹಿಸುವಂತೆ ಹೇಳಿ ಎಂಬ ಅಭಿಮಾನಿಯೊಬ್ಬರ ಟ್ವೀಟ್ ಗೆ ಅಂಬರೀಶ್ ಪತ್ನಿ ಸುಮಲತಾ ಅವರು ಟ್ವೀಟ್ ನಲ್ಲಿ ಈ ರೀತಿ ಉತ್ತರ ನೀಡಿದ್ದಾರೆ.