ಈ ವರ್ಷದ ಬೇಸಿಗೆಯ ತಾಪಮಾನ ಹೋದ ಸಲಕ್ಕಿಂತ ಜಾಸ್ತಿ ಇರಲಿದೆಯಂತೆ, ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ..

0
754

Kannada News | kannada Useful Tips

ಈ ವರ್ಷ ಪ್ರತಿ ಬಾರಿಗಿಂತಲೂ ಬೇಸಿಗೆ ಬಿಸಿ ಹೆಚ್ಚು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ, ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶ, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಕೇರಳ, ತಮಿಳುನಾಡು, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ 0.5 ಡಿಗ್ರಿ ತಾಪಮಾನ ಏರಿಕೆ ಕಂಡು ಬರಲಿದೆಯಂತೆ.

ಪೂರ್ವ ಮುಂಗಾರು ತಿಂಗಳ ಈ ವರ್ಷ, ಅಂದರೆ ಮಾರ್ಚ್, ಏಪ್ರಿಲ್ ಮತ್ತು ಮೇ, ಸಾಮಾನ್ಯಕ್ಕಿಂತಲೂ ಹೆಚ್ಚು ತಾಪಮಾನ ಇರಲಿದೆ ಮತ್ತು ವಿವಿಧ ಕಾರಣಗಳಿಂದಾಗಿ 16 ರಾಜ್ಯಗಳಿಗೆ ಬಿಸಿಗಾಳಿ ತಾಗಲಿದೆ ಎಂದು ಇಂಡಿಯನ್ ಮೆಟರೊಲಾಜಿಕಲ್ ಡಿಪಾರ್ಟ್ಮೆಂಟ್ (IMD) ಹೇಳಿದೆ.

ಹವಾಮಾನ ಮುನ್ಸೂಚನೆ ದೊಡ್ಡ ಪ್ರದೇಶಗಳು ಮತ್ತು ರಾಜ್ಯಗಳ ಮೇಲೆ ಕೇಂದ್ರೀಕರಿಸುತ್ತದೆ ಉದಾಹರಣೆಗೆ, ಕೇರಳವು ಒಂದು ಉಪವಿಭಾಗವಾಗಿದೆ, ಕರ್ನಾಟಕವು ಕರಾವಳಿ, ಉತ್ತರ ಆಂತರಿಕ ಮತ್ತು ದಕ್ಷಿಣ ಆಂತರಿಕ ಕರ್ನಾಟಕ ಸೇರಿದಂತೆ ಮೂರು ಉಪ-ವಿಭಾಗಗಳನ್ನು ಹೊಂದಿದೆ ಮತ್ತು ತಮಿಳುನಾಡು ಮತ್ತು ಪುದುಚೇರಿ ಒಂದು ಉಪವಿಭಾಗವಾಗಿದೆ.

ಈ ಮೂರು ಪ್ರದೇಶಗಳು ಸಾಮಾನ್ಯಕ್ಕಿಂತಲೂ ತಾಪಮಾನ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಉತ್ತರ ಭಾರತಕ್ಕೆ ಹೋಲಿಸಿದರೆ ಈ ಪ್ರದೇಶಗಳು ಸ್ವಲ್ಪ ತಂಪಾಗಿರುತ್ತದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಲಯಗಳು ಪೂರ್ವ ಮಾನ್ಸೂನ್ ಕಾರಣದಿಂದ ಮಳೆ ಬೀಳುವ ಸಂಭವವಿದೆ.

ನಾವು ಕಾಡು ನಾಶ, ನಗರಗಳಲ್ಲಿ ಇರುವ ಮರಗಳನ್ನು ಕಡೆದು ಗೃಹ ಪೀಠೋಪಕರಣಗಳನ್ನು ಮಾಡಿಕೊಂಡು. ರಿಯಲ್ ಎಸ್ಟೇಟ್ ಮಾಡಿ, ಕೆರೆ ಭಾವಿಗಳನ್ನು ಮುಚ್ಚಿ ಹಾಕಿ, ಸಿಕ್ಕ-ಸಿಕ್ಕ ಕಡೆಗಳಲ್ಲಿ ಬೋರಿಂಗ್ ಕೊರೆಸಿ ಅಂತರ್ಜಲ ಮಟ್ಟವನ್ನು ಕಡಿಮೆ ಮಾಡಿ, ಇಂಧನವನ್ನು ಹೆಚ್ಚಾಗಿ ಬಳಸಿದ ಕಾರಣ ತಾಪಮಾನ ಏರುತ್ತಿದೆ.

ಒಟ್ಟಿನಲ್ಲಿ ನಾವು ಬದಲಾಗದ್ದಿದ್ದರೆ ತಾಪಮಾನ ಏರಿಕೆ ಈ ಬಾರಿ ಮಾತ್ರವಲ್ಲ ಪ್ರತಿ ವರ್ಷವೂ ಹೆಚ್ಚುತ್ತಲೇ ಇರುತ್ತದೆ, ಯೋಚಿಸಿ ಬದಲಾಗಿ…!!

Also Read: ತೆಂಗಿನ ಬೆಳೆಗಾರರಿಗೆ ವರದಾನ ಈ ನೀರಾ, ಈ ರೈತ ನೀರಾದಿಂದ ಎಷ್ಟು ಲಾಭ ಮಾಡಿಕೊಳ್ಳುತ್ತಿದ್ದಾನೆ ಅಂಥ ಗೊತ್ತಾದ್ರೆ ಆಶ್ಚರ್ಯ ಪಡ್ತೀರ…

Watch: