ಬೇಸಿಗೆ ಕಾಲ ಬಂದೇ ಬಿಟ್ಟಿತು.. ಆರೋಗ್ಯ ಕಾಪಾಡಿಕೊಳ್ಳಲು ನಮ್ಮದೊಂದಿಷ್ಟು ಸಲಹೆ..

0
1622

Kannada News | Health tips in kannada

ಬೇಸಿಗೆ ಕಾಲ ಬಂದೇ ಬಿಟ್ಟಿತು.. ಬೇಸಿಗೆ ಕಾಲದ ಜೊತೆಗೆ ರೋಗಗಳು ಕೂಡ ಹೇಳದೇ ಕೇಳದೇ ಬಂದೇ ಬಿಡುತ್ತವೆ.. ಹೌದು ಸಾಮಾನ್ಯವಾಗಿ ವಾತಾವರಣ ಬದಲಾದರೆ ಕಾಯಿಲೆಗಳ ಆಗಮನ ವಾಗುವುದು ಕನ್ಪರ್ಮ್.. ಈ ಸಮಯದಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಸಾಕು.. ಆರೋಗ್ಯದಿಂದಿರಬಹುದು..

ಮೈ ತುಂಬಾ ಬಟ್ಟೆ ಇರಲಿ.

ಬೇಸಿಗೆ ಕಾಲದಲ್ಲಿ ಮೈತುಂಬಾ ಬಟ್ಟೆ ಹಾಕಿಕೊಳ್ಳುವವರು ಕಡಿಮೆ ಎಂದೇ ಹೇಳಬಹುದು.. ಆದರೆ ಬೇಸಿಗೆಯಲ್ಲಿ ಅತಿಯಾಗುವ ಧೂಳಿನಿಂದಲೇ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ.. ಗಂಟಲು ನೋವು.. ಇನ್ಫೆಕ್ಷನ್ ಗಳು ಇತ್ಯಾದಿ.. ಅದಕ್ಕಾಗಿಯೇ ಮೈತುಂಬಾ ಬಟ್ಟೆಗಳನ್ನು ಬಳಸಿ..

ಸಾಧ್ಯವಾದಷ್ಟು ಕಾಟನ್ ಬಟ್ಟೆಗಳೆ ನಿಮ್ಮ ಉಡುಗೆಯಾಗಿರಲಿ

ಬೇಸಿಗೆಯಲ್ಲಿ ಸಾಧ್ಯವಾದಷ್ಟು ತೆಳ್ಳಗಿನ ಕಾಟನ್ ಬಟ್ಟೆಗಳನ್ನೇ ಬಳಸಿ.. ಇದರಿಂದ ಬೆವರು ಸಲೆ ಹಾಗೂ ಬೆನ್ನು ಮೇಲೆ ಬರುವ ಗುಳ್ಳೆಗಳಾಗಲಿ ಕಾಣಿಸಿಕೊಳ್ಳುವುದಿಲ್ಲ..

ಧೂಳಿನಿಂದ ದೂರವಿರಿ..

ಬೇಸಿಗೆಯಲ್ಲಿ ಧೂಳಿನಂತ ಅಪಾಯಕಾರಿ ಮತ್ತೊಂದಿಲ್ಲ.. ಇದು ಸಣ್ಣ ಸಣ್ಣ ಕಾಯಿಲೆಯಿಂದ ಹಿಡಿದು ದೊಡ್ಡ ರೋಗವನ್ನು ತಂದಿಟ್ಟು ಬಿಡುತ್ತದೆ.. ಮನೆಯಿಂದ ಹೊರ ಹೋಗಿ ದುಡಿಯುವವರು ಸಾದ್ಯವಾದಷ್ಟು ಬಾಯಿಯ ಮಾಸ್ಕ್ ಗಳನ್ನು ಬಳಸಿ..

ಎಳನೀರನ್ನು ಸೇವಿಸಿ..

ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ದೇಹವು ಬೇಗನೆ ನಿರ್ಜಲೀಕರಣ ವಾಗಿಬಿಡುತ್ತದೆ.. ಅದಕ್ಕಾಗಿಯೇ ಕೆಮಿಕಲ್ ಮಿಶ್ರಿತ ತಂಪು ಪಾನೀಯದ ಮೊರೆ ಹೋಗುವ ಬದಲು ಆರೋಗ್ಯಕರವಾದ ಎಳನೀರನ್ನು ಕುಡಿಯಿರಿ.. ನಮ್ಮ ರೈತರಿಗೂ ಸಹಾಯವಾಗಲಿ..

ರೋಡ್ ಸೈಡ್ ಆಹಾರವನ್ನು ಅವಾಯ್ಡ್ ಮಾಡಿ..

ಬೇಸಿಗೆಯಲ್ಲಿ ರೋಡ್ ಸೈಡ್ ಆಹಾರ ಸೇವಿಸಿ ಅನೇಕರು ವಾಂತಿ ಬೇದಿಗೆ ತುತ್ತಾಗುವುದು ಸರ್ವೇ ಸಾಮಾನ್ಯ.. ಅದಕ್ಕಾಗಿಯೇ ಆದಷ್ಟು ಶುಚಿಯಾದ ಆಹಾರವನ್ನು ಸೇವಿಸಿ..

ಪ್ರೀತಿಪಾತ್ರರ ಕಾಳಜಿ ನಿಮ್ಮ ಕೈಯಲ್ಲಿ.. ಶೇರ್ ಮಾಡಿ ಎಲ್ಲರಿಗೂ ತಿಳಿಯಲಿ..

Also Read: ನೀವು ಪ್ರೀತಿಸಿದ ಹೃದಯ ಯಾವತ್ತೂ ಮಿಸ್ ಆಗಲ್ಲ ಕಣ್ರೀ ಯಾಕೆ ಅಂತೀರಾ ಈ ಸ್ಟೋರಿ ನೋಡಿ…!