ಬೇಸಿಗೆಯಲ್ಲಿ ಆರೋಗ್ಯದಿಂದಿರಲು ಸೇವಿಸಬೇಕಾದ 5 ಆಹಾರಗಳು ಇಲ್ಲಿವೆ ನೋಡಿ

0
1104

Kannada News | Health tips in kannada

ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು‌ ತಡೆಯುವುದಲ್ಲದೇ ಕಾಯಿಲೆಗಳ ಕಿರಿಕಿರಿಯನ್ನು ತಡೆಯಬೇಕಿದೆ.. ಇದಕ್ಕೆ ಮುಖ್ಯವಾದ ಕಾರಣ ನಮ್ಮ ಆಹಾರಕ್ರಮ.. ಹದಗೆಟ್ಟ ಪರಿಸರ..‌ ಧೂಳಿನ ವಾತಾವರಣ..

ಇಂತಹ ಕಾಲದಲ್ಲಿ ದೇಹವನ್ನು ತಂಪಾಗಿ ಇಟ್ಟುಕೊಳ್ಳದಿದ್ದರೆ ಇನ್ನಷ್ಟು ತೊಂದರೆ ಕಟ್ಟಿಟ್ಟ ಬುತ್ತಿ‌… ಹೌದು ಬೇಸಿಗೆಯಲ್ಲಿ ನಾವು ಸೇವಿಸಬೇಕಾದ ಆಹಾರ ಪದಾರ್ಥಗಳ ಒಂದಷ್ಟು ಸಲಹೆ ನಿಮಗಾಗಿ..

1.ಕಲ್ಲಂಗಡಿ ಹಣ್ಣನ್ನು ಸೇವಿಸಿ

ಬೇಸಿಗೆಯಲ್ಲಿ ಅತಿ ಹೆಚ್ಚಾಗಿ ಬೆವರುವ ಪರಿಣಾಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಬಹುದು.. ಅದಕ್ಕಾಗಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸಿ.. ಇದರಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವುದರಿಂದ ದೇಹ ನಿರ್ಜಲೀಕರಣವಾಗುವುದನ್ನು ತಪ್ಪಿಸುತ್ತದೆ..

2.ಎಳನೀರು ಕುಡಿಯಿರಿ..

ಬೇಸಿಗೆಯ ಬಿಸಿಲಿನ ತಾಪಕ್ಕೆ ಎಳನೀರು ಒಂದು ಅಮೃತವಿದ್ದ ಹಾಗೆ.. ಸಾಧ್ಯವಾದಷ್ಟು ದಿನಕ್ಕೊಂದಾದರೂ ಎಳನೀರನ್ನು ಕುಡಿಯಿರಿ..

3.ರಾಗಿಯ ಅಂಬಲಿ ಕುಡಿಯಿರಿ..

ದೇಹಕ್ಕೆ ತಂಪು ಆರೋಗ್ಯಕ್ಕೆ ಇಂಪು‌.. ಈ ರಾಗಿ ಅಂಬಲಿ.. ಬೇಸಿಗೆಯಲ್ಲಿ ನಿಮ್ಮ ಬೆಳಗ್ಗಿನ ತಿಂಡಿ ಇದೇ ಆದರೆ ಇನ್ನೂ ಒಳ್ಳೆಯದು..

4.ಮಜ್ಜಿಗೆ ಕುಡಿಯಿರಿ..

ಬಸಿಲಿಗೆ ಆದಷ್ಟೂ ದ್ರವ ರೂಪದ ಆಹಾರವನ್ನು ಸೇವಿಸಿ.. ಅದೇ ರೀತಿಯಾಗಿ ದಿನಕ್ಕೆರೆಡು ಬಾರಿ ಮಜ್ಜಿಗೆಯನ್ನು ಕುಡಿಯಿರಿ.. ದೇಹವನ್ನು ತಂಪಾಗಿರಿಸಿಕೊಳ್ಳಿ..

5.ಮನೆಯ ಆಹಾರ ಸೇವಿಸಿ..

ಸಾದ್ಯವಾದಷ್ಟೂ ಮನೆಯ ಆಹಾರದ ಮೊರೆ ಹೋಗಿ.. ಅಕಸ್ಮಾತ್ ಹೊರಗೆ ತಿಂದರೂ ಶುಚಿಯಾದ ಆಹಾರವಾಗಿರಲಿ.. ರಸ್ತೆ ಬದಿಯ ಚಾಟ್ಸ್ ಗಳನ್ನು ಆದಷ್ಟೂ ಬೇಸಿಗೆಯಲ್ಲಿ ಅವಾಯ್ಡ್ ಮಾಡಿ.. ರೋಗಗಳಿಂದ ದೂರವಿರಿ.

Also read: ವಿಶ್ವದಲ್ಲಿ ನೀರು ಖಾಲಿಯಾಗುವ ನಗರಗಳಲ್ಲಿ ಉದ್ಯಾನ ನಗರಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ.

Watch: