ಬೇಸಿಗೆ ಶುರುವಾಗುತ್ತಿದೆ, ನಿಮ್ಮ ತ್ವಚೆಯ ಆರೈಕೆ ಹೀಗೆ ಇದ್ದರೆ ಬಿಸಿಲಿನ ತಾಪ ನಿಮ್ಮ ತ್ವಚೆಯನ್ನು ಹಾಲು ಮಾಡುವುದಿಲ್ಲ!!

0
1143

ಬೇಸಿಗೆ ಬಂತೆಂದರೆ ಸಾಕು ಸೂರ್ಯನ ಅತೀನೇರಳೆ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗಿ ಕಳೆಗುಂದುವ, ಮಂಕಾಗುವ ಸಮಸ್ಯೆ ಎದುರಾಗುತ್ತದೆ. ಕೊಂಚ ಕಾಳಜಿ ಮತ್ತು ಆರೈಕೆ ಮಾಡಿಕೊಳ್ಳುವುದರಿಂದ ಬೇಸಿಗೆಯಲ್ಲೂ ಸನ್ ಟ್ಯಾನ್, ಸನ್ ಬರ್ನ್ ಮುಂತಾದ ಸಮಸ್ಯೆಗಳಿಂದ ಬಿಡುಗಡೆ ಹೊಂದಬಹುದು.

ಟೊಮೆಟೊ ರಸ

ಟೊಮೆಟೊದಲ್ಲಿರುವ ಲ್ಯೂಕೋಪಿನ್ ಅಂಶ ಟ್ಯಾನಿಂಗ್‍ನಿಂದ ಚರ್ಮಕ್ಕೆ ರಕ್ಷಣೆ ನೀಡುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ. ಟೊಮೆಟೊ ರಸಕ್ಕೆ ಕಾಲು ಚಮಚ ಸಕ್ಕರೆ ಬೆರೆಸಿ ಮುಖಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಅಥವಾ ಚೆನ್ನಾಗಿ ಕಳಿತು ಹಣ್ಣಾದ ಟೊಮೆಟೊ ಬಿಲ್ಲೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಅರ್ಧಗಂಟೆ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಬಿಸಿಲಿನಿಂದ ಕಪ್ಪಾದ ಚರ್ಮ ಗೌರವರ್ಣ ಪಡೆಯುತ್ತದೆ.

ನಿಂಬೆರಸ

ನಿಂಬೆರಸದಲ್ಲಿರುವ ಎಸ್ಕಾರ್ಬಿಕ್ ಅಂಶ ಚರ್ಮದ ಡಿಟ್ಯಾನಿಂಗ್ ಮಾಡುತ್ತದೆ. ಸ್ನಾನಕ್ಕೂ ಮುನ್ನ ನಿಂಬೆರಸದಲ್ಲಿ ಗ್ಲೀಸರಿನ್ ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಅರ್ಧ ಗಂಟೆ ನಂತರ ಸ್ನಾನ ಮಾಡುತ್ತಾ ಬಂದರೆ ಮಂಕಾದ ಚರ್ಮ ಹೊಳೆಯಲಾರಂಭಿಸುತ್ತದೆ.ಆಲೂ-ನಿಂಬೆಆಲೂಗೆಡ್ಡೆ ತುರಿದು ರಸ ಹಿಂಡಿ ಅದರಲ್ಲಿ ನಿಂಬೆ ರಸ ಬೆರೆಸಿ ಮಿಶ್ರಣವನ್ನು ಮುಖ, ಕೈ ಮತ್ತು ಕಾಲುಗಳಿಗೆ ಹಚ್ಚಿ ಒಣಗಿದ ನಂತರ ಮುಖ ತೊಳೆಯುತ್ತಾ ಬನ್ನಿ. ಇದು ಬ್ಲೀಚಿಂಗ್‍ನಂತೆ ಕೆಲಸ ಮಾಡುವ ಮೂಲಕ ತ್ವಚೆಯ ಬಣ್ಣವನ್ನು ಬಿಳುಪಾಗಿಸುತ್ತದೆ.

ಮೊಟ್ಟೆ-ಜೇನು

ಮೊಟ್ಟೆಯ ಬಿಳಿಭಾಗದಲ್ಲಿ ಜೇನುತುಪ್ಪ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ತೆಳುವಾಗಿ ಲೇಪಿಸಿ. ಒಣಗಿದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಇದು ಪ್ಯಾಕ್‍ನಂತೆ ಕೆಲಸ ಮಾಡುವ ಕಾರಣ ಮುಖದ ಕಾಂತಿ ಹೆಚ್ಚುವುದರೊಂದಿಗೆ ಮುಖದ ಮೇಲೆ ಕಾಣಿಸಿಕೊಳ್ಳುವ ಸುಕ್ಕು, ನೆರಿಗೆ ಮತ್ತು ಗೆರೆಗಳು ಕ್ರಮೇಣ ಮಾಯವಾಗುತ್ತವೆ.

ಸೌತೆಕಾಯಿ

ಸೌತೆಕಾಯಿ ತುರಿದು ರಸ ಹಿಂಡಿ ಅದರಲ್ಲಿ ಮೊಸರು ಮತ್ತು ಹಾಲಿನಪುಡಿ ಬೆರೆಸಿದ ಮಿಶ್ರಣವನ್ನು ಹಗುರವಾಗಿ ಮಸಾಜ್ ಮಾಡಿ ಪ್ಯಾಕ್ ತರಹ ಹಾಕಿಕೊಳ್ಳಿ. ಇದರಿಂದ ಚರ್ಮದ ಜಿಡ್ಡಿನಂಶ ಕಡಿಮೆಯಾಗಿ ಮುಖದ ಕಾಂತಿ ದ್ವಿಗುಣವಾಗುತ್ತದೆ. ಕಡಲೆಹಿಟ್ಟುಕಡಲೆಹಿಟ್ಟಿನಲ್ಲಿ ಮೊಸರು ಬೆರೆಸಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಸ್ನಾನಕ್ಕೂ ಮುನ್ನ ಮುಖಕ್ಕೆ ಪ್ಯಾಕ್ ತರಹ ಹಾಕಿ. ಒಣಗಿದ ನಂತರ ನಯವಾಗಿ ಕೈಯಿಂದ ವರ್ತುಲಾಕಾರದಲ್ಲಿ ಸ್ಕ್ರಬ್ ತರಹ ಉಜ್ಜಿ. ನಂತರ ಸ್ನಾನ ಮಾಡಿ. ಇದರಿಂದ ಮಂಕಾದ ಚರ್ಮಕ್ಕೆ ಹೊಳಪು ಬರುತ್ತದೆ. ಕಳೆಗುಂದಿದ ತ್ವಚೆಯ ಬಣ್ಣ ತಿರುಗಿ ಬರುತ್ತದೆ.

ಪಪ್ಪಾಯಿ

ಚೆನ್ನಾಗಿ ಮಾಗಿದ ಪಪ್ಪಾಯಿ ಹಣ್ಣಿನ ಒಂದು ಹೋಳಿನಿಂದ ಮುಖದ ಮೇಲೆ ಹಗುರವಾಗಿ ಮಸಾಜ್ ಮಾಡಿ. ಈ ಹಣ್ಣಿನ ತಿರುಳಿಗೆ ಕೊಂಚ ಮುಲ್ತಾನಿ ಮಿಟ್ಟಿ ಬೆರೆಸಿ ಪ್ಯಾಕ್ ತರಹ ಹಾಕಿ. ಒಣಗಿದ ನಂತರ ತೊಳೆದುಕೊಳ್ಳಿ. ಇದರಿಂದ ಮುಖ ಥಳಥಳ ಹೊಳೆಯುತ್ತದೆ.