ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಹೇಗೆ???

0
1519

Kannada News | kannada Useful Tips

ಬೇಸಿಗೆಯಲ್ಲೂ ನಳನಳಿಸುತ್ತಿರಿ
ಈಗಷ್ಟೇ ರಥ ಸಪ್ತಮಿ ಮುಗಿದಿದ್ದು, ಸೂರ್ಯ ತನ್ನ ಪ್ರಖರತೆಯನ್ನು ಸಾರಲಾರಂಭಿಸಿದ್ದಾನೆ. ಬೇಸಗೆಯಲ್ಲಿ ಹೆಚ್ಚಾಗುವ ಧೂಳು ಮತ್ತು ಬಿಸಿಲಿನಿಂದಾಗಿ ಚರ್ಮದ ಆದ್ರ್ರತೆ ಕಡಿಮೆಯಾಗಿ, ಮುಖ ಮಂಕಾಗಿ ಕಾಣಲಾರಂಭಿಸುತ್ತದೆ. ಆದರೆ ಕೊಂಚ ಜಾಗರೂಕತೆ ಮತ್ತು ಆರೈಕೆ ಮೂಲಕ ಬೇಸಗೆಯಲ್ಲೂ ನಳನಳಿಸುತ್ತ ಇರಬಹುದು. ಹೀಗಿರಲಿ ದಿನಚರಿ ಬೇಸಗೆ ಆರಂಭವಾದೊಡನೆ ಬೆಳಿಗ್ಗೆ ಎದ್ದ ಕೂಡಲೇ ಮೊದಲು ಮಾಡಬೇಕಾದುದು ಕನಿಷ್ಟ ಮೂರರಿಂದ ನಾಲ್ಕು ಲೋಟ ನೀರು ಕುಡಿಯುವುದು.

Image result for summer skincare

ಇದರಿಂದ ಚರ್ಮ ತನ್ನ ಕೋಮಲತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಸೂರ್ಯನ ಪ್ರಖರ ಬಿಸಿಲಿನಲ್ಲಿರುವ ಅತೀ ನೇರಳೆ ಕಿರಣಗಳಿಂದಾಗಿ ಚರ್ಮದಲ್ಲಿ ಪಿಗ್‍ಮೆಂಟೇಷನ್ ಮತ್ತು ಸನ್ ಬರ್ನ್ ಸಮಸ್ಯೆಗಳೂ ಎದುರಾಗುತ್ತವೆ. ಇದಕ್ಕಾಗಿ ಆಗಾಗ್ಗೆ ತಣ್ಣೀರಿನಿಂದ ಮುಖ ತೊಳೆಯುವುದು, ಮಾಯಿಶ್ಚರೈಸರ್ ಹಚ್ಚುವುದು ಸೇರಿದಂತೆ ಟೋನಿಂಗ್, ಕ್ಲೀನಿಂಗ್‍ಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂದರ್ಭದಲ್ಲಿ ಹೊರ ಹೋಗುವಾಗ ಕೊಡೆ ಹಿಡಿದುಕೊಂಡು ಹೋಗುವುದರ ಜೊತೆಗೆ ಉತ್ತಮ ಗುಣಮಟ್ಟದ ಸನ್‍ಸ್ಕ್ರೀನ್ ಲೋಷನ್ ಮುಖ, ಕೈ ಮತ್ತು ಕಾಲುಗಳಿಗೆ ಮರೆಯದೇ ಹಚ್ಚುವುದರಿಂದ ಸನ್‍ಬರ್ನ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.

Image result for summer skincare india

ಸನ್‍ಸ್ಕ್ರೀನ್ ಪ್ರಯೋಗ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡಬಲ್ಲ ಉತ್ತಮ ಗುಣಮಟ್ಟದ ಸನ್‍ಸ್ಕ್ರೀನ್ ಲೋಷನ್ ಆಯ್ಕೆ ಮಾಡಿ. ಭಾರತೀಯರ ತ್ವಚೆಗನುಗುಣವಾಗಿ 30 ಎಸ್‍ಪಿಎಫ್ ಇರುವ ಸನ್‍ಸ್ಕ್ರೀನ್ ಅತ್ಯಂತ ಒಳ್ಳೆಯದು ಎನ್ನುವುದು ಸೌಂದರ್ಯ ತಜ್ಞರ ಅಭಿಪ್ರಾಯ. ಹೀಗಾಗಿ ಸನ್‍ಸ್ಕ್ರೀನ್ ಆಯ್ಕೆ ಮಾಡುವಾಗ 30 ಎಸ್‍ಪಿಎಫ್ ಇರುವುದನ್ನೇ ಖರೀದಿಸಿ. ಸನ್‍ಟ್ಯಾನ್‍ಗೆ ವಿದಾಯಸೂರ್ಯನ ಅತೀ ನೇರಳೆ ಕಿರಣಗಳು, ಪರಿಸರ ಮಾಲಿನ್ಯ ಮತ್ತು ಧೂಳಿನಿಂದಾಗಿ ಹೊರಗಡೆ ಹೋಗು ವವರಿಗೆ ಸನ್‍ಟ್ಯಾನ್ ಆಗುವ, ಮೊಡವೆ, ಗುಳ್ಳೆಗಳಾಗುವ ಸಾಧ್ಯತೆಗಳು ಈ ಕಾಲದಲ್ಲಿ ಹೆಚ್ಚು.

ಜೊತೆಗೆ ಮೊಡವೆ, ಮುಖ ಸುಕ್ಕುಗಟ್ಟುವಿಕೆ ಮತ್ತು ಕಪ್ಪು ಕಲೆಗಳಾ ಗುವುದೂ ಉಂಟು. ಹೀಗಾಗಿ ಮನೆಯಿಂದ ಹೊರ ಹೋಗುವಾಗ ಕೊಡೆಯ ಜೊತೆಗೆ ಕಪ್ಪು ಕನ್ನಡಕವನ್ನೂ ಮರೆಯದೇ ತೆಗೆದುಕೊಂಡು ಹೋಗಿ. ಹೊರಗೆ ಹೋಗುವ ಅರ್ಧ ಗಂಟೆ ಮುನ್ನವೇ ಸನ್‍ಸ್ಕ್ರೀನ್ ಲೋಷನ್ ಅನ್ನು ಕೈಕಾಲು ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಸನ್‍ಬರ್ನ್, ಸನ್‍ಟ್ಯಾನ್ ಜೊತೆಜೊತೆಗೆ ಮೊಡವೆ, ಕಲೆಗಳಿಂದಲೂ ಚರ್ಮವನ್ನು ಕಾಪಾಡಿಕೊಳ್ಳಬಹುದು.ಸ್ವಚ್ಛತೆಗೆ ಆದ್ಯತೆತ್ವಚೆಯನ್ನು ರೋಗಮುಕ್ತವನ್ನಾಗಿಸಲು ಪ್ರತಿದಿನ ಎರಡು ಬಾರಿ ಕ್ಲೆಂಜಿಗ್, ಟೋನಿಂಗ್ ಮತ್ತು ಮಾಯಿಶ್ಚರೈಸ್ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಆದರೆ ನೆನಪಿಡಿ ಮಾಯಿಶ್ಚರೈಸರ್ ಆಯ್ಕೆ ಮಾಡುವಾಗ ಆದಷ್ಟು ಆಯಿಲ್ ಫ್ರೀ (ತೈಲರಹಿತ) ಇರುವುದನ್ನೇ ಖರೀದಿಸಿ.

Image result for summer skincare india
Source: ZeeNews

ಇನ್ನು ಬೇಸಗೆಯಲ್ಲಿ ಟೋನರ್ ಬಳಸುವುದರಿಂದ ಚರ್ಮಕ್ಕೆ ಶೀತಲತೆ ಒದಗುವುದರ ಜೊತೆಗೆ ರೋಮಛಿದ್ರಗಳೂ ಮುಚ್ಚಿಕೊಳ್ಳುತ್ತವೆ. ಇದಕ್ಕಾಗಿ ಮನೆಯಲ್ಲೇ ದೊರಕುವ ರೋಸ್ ವಾಟರ್ ಅನ್ನು ಟೋನರ್ ಆಗಿಯೂ ಬಳಸಬಹುದಾಗಿದೆ.ಸ್ಕ್ರಬ್ ಬಳಸಿಬೇಸಗೆಯಲ್ಲಿ ಬಾಡಿದಂತಾದ ಮತ್ತು ಒಣಗಿದ ತ್ವಚೆ ಮತ್ತೆ ನಳನಳಿಸುವಂತೆ ಮಾಡುವಲ್ಲಿ ಸ್ಕ್ರಬ್ ತನ್ನದೇ ಆದ ಪಾತ್ರ ವಹಿಸುತ್ತದೆ.

ಪ್ರತೀ ದಿನ ಉತ್ತಮ ಗುಣಮಟ್ಟದ ಸ್ಕ್ರಬ್ ಅನ್ನು ಬಳಸಿ ಮುಖವನ್ನು ಹಗುರವಾಗಿ ಕೆಲ ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಇದರಿಂದ ಮೃತ ತ್ವಚೆ ಉದುರಿ ರಕ್ತಸಂಚಾರ ಹೆಚ್ಚಾಗಿ ಮುಖದ ಕೊಳೆ ಹೋಗಿ ಕಳೆ ಬರುತ್ತದೆ.ಪ್ರತಿದಿನ ಶಾಂಪೂ ಬೇಡಉರಿಯುತ್ತಿರುವ ಬಿಸಿಲಿನಿಂದಾಗಿ ತಲೆಗೂದಲು ಈ ಸಮಯದಲ್ಲಿ ಹೆಚ್ಚು ಬೇಗ ಜಿಡ್ಡು, ತೈಲೀಯ ಮತ್ತು ಕೊಳೆಯಾಗುತ್ತದೆ. ಇದಕ್ಕಾಗಿ ಪ್ರತಿನಿತ್ಯ ಶಾಂಪು ಬಳಸಿ ತಲೆಸ್ನಾನ ಮಾಡುವುದರಿಂದ ತಲೆಯ ಪ್ರಾಕೃತಿಕ ತೈಲ ಕಡಿಮೆಯಾಗಿ ಕೂದಲು ನಿರ್ಜೀವ ಮತ್ತು ಒಣಗಿದಂತಾಗುತ್ತವೆ. ಆದ್ದರಿಂದ ವಾರದಲ್ಲಿ ಎರಡು ಬಾರಿ ಮಾತ್ರ ಕೊಬ್ಬರಿಎಣ್ಣೆಯಿಂದ ಕೂದಲಿಗೆ ಹಗುರವಾಗಿ ಮಸಾಜ್ ಮಾಡಿ ನಂತರ ಸೌಮ್ಯ ಶಾಂಪು ಅಥವಾ ಸೀಗೆಕಾಯಿ ಬಳಸಿ ಸ್ನಾನ ಮಾಡಿ. ಇದರಿ ಇದರಿಂದ ಕೂದಲ ಆರೋಗ್ಯವೂ ಹೆಚ್ಚುತ್ತದೆ. ದಟ್ಟವಾಗಿಯೂ ಬೆಳೆಯುತ್ತವೆ.

Also read: ನೆಮ್ಮದಿಯ ಸುಖಿ ಜೀವನಕ್ಕೆ ಸುಲಭೋಪಾಯಗಳು!!!

Watch: