ಇಂದು ಸಂಪೂರ್ಣ ಸೂರ್ಯಗ್ರಹಣ – ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ..!!

0
705

ಇಂದು ಅಮೆರಿಕದಾದ್ಯಂತ ಕಾಣಿಸುವ ಸಂಪೂರ್ಣ ಸೂರ್ಯಗ್ರಹಣ ಭಾರತ ಹಾಗೂ ವಿಶ್ವದ ಇತರ ಅನೇಕ ಭಾಗಗಳಲ್ಲಿ ಕಾಣಿಸದು. ಇದು ವಲಯಾಕಾರದ ಗ್ರಹಣವಾಗಿದ್ದು, ದಕ್ಷಿಣ ಮತ್ತು ಪಶ್ಚಿಮ ಏಷ್ಯಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಂಟ್ಲಾಂಟಿಕ್, ಹಿಂದೂ ಮಹಾ ಸಾಗರದ ಭಾಗದಲ್ಲಿ ಈ ಗ್ರಹಣ ಗೋಚರಿಸಲಿದೆ.

ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಭಾರತದಲ್ಲಿ ಇದರ ಪರಿಣಾಮವಿರಲ್ಲ. ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ. 2 ನಿಮಿಷ 40 ಸೆಕೆಂಡ್‍ಗಳ ಕಾಲ ಸೂರ್ಯನನ್ನು ಚಂದ್ರ, ಭೂಮಿ ಸಂಪೂರ್ಣವಾಗಿ ಮರೆ ಮಾಡಲಿದೆ.

ಒಟ್ಟು ಸೂರ್ಯಗ್ರಹಣ ನಾಲ್ಕು ವಿಧದಲ್ಲಿ ನಡೆಯಲಿದೆ. ಇದರಲ್ಲಿ ಮೊದಲನೆಯದು ಪೂರ್ಣ ಸೂರ್ಯಗ್ರಹಣ. ಈ ಪೂರ್ಣ ಸೂರ್ಯಗ್ರಹಣ, ಅತ್ಯಂತ ಆಕರ್ಷಕವಾಗಿ ಗೋಚರವಾಗುವ ಜೊತೆಗೆ ಡೈಮಂಡ್ ರಿಂಗ್ ಕೂಡಾ ಗೋಚರವಾಗುವುದು ವಿಶೇಷ. ಇಂತಹ ಸಂದರ್ಭದಲ್ಲಿ ಭೂಮಿಯಲ ಮೇಲೆ ಚರಾಚರ, ಹಾವುಗಳ ಚಲನೆ ಹೆಚ್ಚಾಗುತ್ತದೆ ಎಂಬ ಪ್ರತೀತಿಯೂ ಇದೆ. ಎರಡನೆಯದು ವಲಯಾಕಾರದ ಸೂರ್ಯಗ್ರಹಣ. ಈ ಸೂರ್ಯಗ್ರಹಣ ಬಳೆಯ ಆಕಾರದಲ್ಲಿ ಗೋಚರವಾಗುತ್ತದೆ. ಮೂರನೆಯ ಮಾದರಿ ಹೈಬ್ರಿಡ್ ಸೂರ್ಯಗ್ರಹಣ. ಈ ಮಾದರಿಯಲ್ಲಿ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿರುವುದರಿಂದ ಸೂರ್ಯನ ವಿಕಿರಣಗಳು ಮಾತ್ರ ಕಾಣಸಿಗುತ್ತವೆ. ನಾಲ್ಕೇ ಮಾದರಿ ಖಂಡಗ್ರಾಸ (ಆಂಶಿಕ) ಸೂರ್ಯಗ್ರಹಣ. ಈ ಮಾದರಿಯ ಸೂರ್ಯಗ್ರಹಣದಲ್ಲಿ ಚಂದ್ರ ಸೂರ್ಯನ ಅರ್ಧಕ್ಕೆ ಬಂದಿರುವುದು ಕಂಡುಬರುತ್ತದೆ.

ಈ ದಿನದ ಸಂಪೂರ್ಣ ಸೂರ್ಯಗ್ರಹಣದ ವಿಶೇಷ

ಇಂದು ಅಮಾವಾಸ್ಯೆ, ಆದರೆ ಅಮಾವಾಸ್ಯೆಗಳಂದು ಕಾಣುವ ಈ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಖಗ್ರಾಸ್ ಆಗಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ. 1991ರಲ್ಲಿ ಕೊನೆಯ ಬಾರಿ ಅಮೆರಿಕದಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಿತ್ತು. ಆದರೆ ಆ ಸಲ ಇಡೀ ಅಮೆರಿಕದಲ್ಲಿ ಗ್ರಹಣ ಗೋಚರಿಸದೇ ಹವಾಯಿ ದ್ವೀಪಗಳಲ್ಲಿ ಮಾತ್ರ ಕಂಡಿತ್ತು.