ಸೂರ್ಯೋದಯ ನೋಡಲು 40 ದಿನ ಕಾಯುವ ಜನ!

0
682

ಸೂರ್ಯೋದಯದ ಜೊತೆಗೆ ನಿತ್ಯ ಎಲ್ಲರ ಬದುಕು ಆರಂಭವಾಗುತ್ತೆ. ಆದರೆ ಇಲ್ಲೊಂದು ಊರಲ್ಲಿ ಮಾತ್ರ ಸೂರ್ಯ ಉದಯಿಸೋದೇ 40 ದಿನಗಳ ಬಳಿಕ. ಸೂರ್ಯನ ಕಿರಣಗಳನ್ನು ನೋಡಲು ಈ ಊರಲ್ಲಿ ಜನ ಕಾದು ಕುಳಿತಿರುತ್ತಾರೆ.

ಉತ್ತರ ರಷ್ಯಾದ ಆರ್ಕ್ಟಿಕ್ ವೃತ್ತದ ಭಾಗದ ಮುರ್ಮಾನ್ಸ್ಕ್ ನಗರದ ಜನರು ಸುದೀರ್ಘ 40 ದಿನಗಳ ಬಳಿಕ ವರ್ಷದ ಮೊದಲ ಸೂರ್ಯನ ಬೆಳಕಿನ ಕಿರಣಗಳನ್ನು ಕಂಡಿದ್ದಾರೆ.. ಸೂರ್ಯನ ಬೆಳಕನು ಕಂಡು ಸಂಭ್ರಮಿಸಿದ್ದಾರೆ. ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆರ್ಕ್ಟಿಕ್ ಭಾಗದ ಕೆಲ ಪ್ರದೇಶಗಳಲ್ಲಿ ಡಿಸೆಂಬರ್ 2 ರಿಂದ ಜನವರಿ 11 ರ ರವರೆಗೆ 42 ದಿನಗಳ ಕಾಲ ಸೂರ್ಯನ ಬೆಳಕು ಕಾಣುವುದಿಲ್ಲ. ಹೀಗಾಗಿ ವರ್ಷದ ಮೊದಲ ಸೂರ್ಯೋದಯವನ್ನು ಕಾಣಲು ಈ ಪ್ರದೇಶ ಸ್ಥಳೀಯರು ಸನ್ ರೈಸ್ ಹಿಲ್ ಬಳಿ ಸೇರುತ್ತಾರೆ.

ಇನ್ನು ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶದಲ್ಲಿ ವರ್ಷದಲ್ಲಿ ಒಂದು ದಿನ ಸೂರ್ಯ ಮುಳುಗುವುದೇ ಇಲ್ಲ. 24 ಗಂಟೆ ಕಾಲ ಸೂರ್ಯ ಮುಳುಗೋದೇ ಇಲ್ವ. ಮತ್ತೆ 24 ಗಂಟೆ ಹುಟ್ಟೋದೇ ಇಲ್ಲ. ಹಗಲು ರಾತ್ರಿಗಳ ವ್ಯತ್ಯಾಸವಿರಲ್ಲ. ಹೀಗಾಗಿ ವರ್ಷದಲ್ಲಿ ಹಲವು ದಿನಗನ ಕಾಲ ನಿರಂತರ ಹಗಲು ನಿರಂತರ ರಾತ್ರಿ ಇರುತ್ತೆ. ಇಂಥಾವೊಂದು ಪ್ರದೇಶವಿದೆ ಅಂದ್ರೆ ಆಶ್ಚರ್ಯವಾಗುತ್ತೆ. ಆದ್ರೂ ಇದು ಸತ್ಯ.