ಜಗತ್ತಿನ ಅಂಧಕಾರ ನೀಗಿಸುವ ಸೂರ್ಯದೇವನ ಪುರಾಣ!!!

0
2563

Kannada News | Karnataka Temple History

ಸೂರ್ಯನಿಗೆ ಪುರಾಣಕಾಲದಿಂದಲೂ ಮಹಾ ಮರ್ಯಾದೆ. ಸೂರ್ಯ ಆರಾಧನೆಯ ಕುರಿತು ಪುರಾಣಕಾಲವೊಂದನ್ನು ಆಧಾರವಾಗಿಟ್ಟುಕೊಂಡರೆ ಎಷ್ಟೋ ಸಾವಿರ ವರ್ಷಗಳ ಹಿಂದಿನ ಇತಿಹಾಸಕ್ಕೆ ಮುಖಮಾಡಬೇಕಾಗುತ್ತದೆ. ಸೂರ್ಯ ದೇಗುಲಗಳು ಭಾರತದಾದ್ಯಂತ ಕಂಡುಬರುತ್ತವೆ. ಅರ್ಕ, ಮಿತ್ರ, ಮಾರ್ತಾಂಡ, ಭಾಸ್ಕರ, ರವಿ, ಆದಿತ್ಯ, ಭಾನು ಎನ್ನುವ ಮತ್ತಿಷ್ಟು ನಾಮಗಳು ಸೂರ್ಯನಿಗೆ.

ಸುಗ್ರೀವನ ತಂದೆ ಸೂರ್ಯನೆಂದೂ ಪುರಾಣಗಳು ಹೇಳುತ್ತವೆ. ಉತ್ತರಪ್ರದೇಶದಲ್ಲಿ ‘ಉತ್ತರಾರ್ಕ’, ‘ಬಾಲಾರ್ಕ’, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ‘ಅರ್ಕ’, ಗುಜರಾತ ಭಾಗದಲ್ಲಿ ‘ಮಿತ್ರ’ ಹೆಸರಿನ ಸೂರ್ಯ ದೇಗುಲಗಳು ಅಧಿಕ ಸಂಖ್ಯೆಯಲ್ಲಿವೆ. ಒಡಿಶಾದ ಕೋನಾರ್ಕ ದೇವಾಲಯ ಹೆಸರುವಾಸಿ.

Image result for sun god

ರಸಋಷಿ ಕುವೆಂಪುರವರ ಕವಿತೆಯಲ್ಲಿ ಸೂರ್ಯನಿಗೆ ಮಿತ್ರನೆಂದು ವಿಶೇಷಣ. ಈ ಮಿತ್ರ ಲೋಕದ ಚರಾಚರ ವಸ್ತುಗಳಿಗೆ ತಪ್ಪದೇ ದರ್ಶನ ನೀಡುವ ಅಪ್ತಮಯಿ ದಯಾಮಯಿ ಜೀವವಾಹಿ ಮತ್ತು ಜ್ಞಾನ, ನಿರಂತರತೆಗಳ ಸಂಕೇತ. ಋಗ್ವೇದ, ಮಾರ್ಕಂಡೇಯ ಪುರಾಣ, ವಿಷ್ಣುಪುರಾಣಗಳಲ್ಲಿ ಶರಣ್ಯು(ಸಂಜನಾ),ರಗ್ವಿ, ಪ್ರಭಾ, ಛಾಯಾ ಮುಂತಾಗಿ ಸೂರ್ಯನ ಪತ್ನಿಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಶರಣ್ಯುವಿನ ಮಕ್ಕಳು ವೈವಸ್ವತ ಮನು, ಯಮ, ಯಮಿ ಮತ್ತು ಅಶ್ವಿನಿ ಕುಮಾರರು. ರಗ್ವಿಯ ಮಗ ರೇವಂತ, ಪ್ರಭಾಳ ಮಗ ಪ್ರಭಾತ. ಛಾಯಾದೇವಿಗೆ ಸವರ್ಣಿಮನು ಮತ್ತು ಮನು ಎಂಬ ಗಂಡು ಮಕ್ಕಳು, ತಪ್ತಿ ಮತ್ತು ವಿಷ್ಟಿ ಎಂಬ ಹೆಣ್ಣುಮಕ್ಕಳು. ಸೂರ್ಯನ ಪ್ರಖರ ತೇಜಕ್ಕೆ ಬೇಸತ್ತ ಪತ್ನಿ ಶರಣ್ಯು ತನ್ನ ಅನುಪಸ್ಥಿತಿಯಲ್ಲಿ ಸೂರ್ಯನ ಪತ್ನಿಯಾಗಿರಲು ತನ್ನಂತಿರುವ ತದ್ರೂಪಿ ಯೊಬ್ಬಳನ್ನು ಸೃಷ್ಟಿಸುತ್ತಾಳೆ, ಆ ಸೃಷ್ಟಿಕಾಯವೇ ಛಾಯಾದೇವಿ.

ಛಾಯೆಯನ್ನು ಸೃಷ್ಟಿಮಾಡಿದ ಶರಣ್ಯು ಅಶ್ವಿನಿ ರೂಪದಲ್ಲಿರುತ್ತಾಳೆ. ಇವಳ ಮಗ ಯಮನಿಗೂ ಛಾಯೆಗೂ ಒಂದು ದಿನ ವಾಗ್ವಾದ ನಡೆಯುತ್ತದೆ. ಯಮನಿಗೆ ಛಾಯೆಯಿಂದ ಕಡುಶಾಪ, ಯಮನಿಗೆ ದುರ್ದೆಸೆ ಪ್ರಾಪ್ತಿ. ಕಾರಣವನ್ನು ಅರಸಲು ಹೊರಟ ಸೂರ್ಯನಿಗೆ ಶರಣ್ಯುಳನ್ನು ಹುಡುಕಿತಂದಾಗಲೇ ಛಾಯೆಯ ನೈಜತೆ ಅರಿವಾಗುತ್ತದೆ.

Image result for sun god

ಛಾಯೆ ಕತ್ತಲು, ನೆರಳುಗಳ ಪ್ರತೀಕ. ಸೂರ್ಯನಿಗೆ ಮಹತ್ವ ನೀಡಿ ಸ್ಥಾವರಗಳನ್ನು ಕಟ್ಟಿಸಿದಂತೆಯೇ ನೆರಳಜನಕಿ ಛಾಯೆಗೂ ಸಹ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರದ ಹತ್ತಿರದ ಕೃಷ್ಣೆಯ ತಟದಲ್ಲಿರುವ ಭಗವತಿಯಲ್ಲಿ ದೇಗುಲ ನಿರ್ಮಿಸಲಾಗಿದೆ. ಈ ಸ್ಥಳಕ್ಕೆ ಛಾಯಾಭಗವತಿ ಹೆಸರಿನಿಂದ ಖ್ಯಾತಿ. ಗರ್ಭಗೃಹದೊಳಗಡೆ ಶಿವಲಿಂಗ ಮತ್ತು ಪಾದದ ಗುರುತುಗಳಿವೆ. ಈ ಶಿಲಾಪಾದಗಳು ದೇಗುಲದ ಮೂರು ಕಡೆಗಳಲ್ಲಿವೆ. ಬಿಲ್ವಪತ್ರೆ ,ಶ್ವೇತ ಪುಷ್ಪಗಳಿಂದ ಇವುಗಳಿಗೆ ನಿತ್ಯಪೂಜೆ.

ಏಪ್ರಿಲ್ ತಿಂಗಳಿನಲ್ಲಿ ಛಾಯಾದೇವಿಯ ಉತ್ಸವ ಭಕ್ತಾದಿಗಳ ಬಣ್ಣದೋಕುಳಿಯಿಂದ ಮತ್ತಷ್ಟು ಮೆರಗುತಂದುಕೊಳ್ಳುತ್ತದೆ. ಉತ್ಸವದಲ್ಲಿ ಬಳಕೆಯಾಗುವ ಬಣ್ಣದೋಕುಳಿ ಸೂರ್ಯನ ಸಪ್ತರಂಗುಗಳ ಸಂಕೇತ. ಛಾಯಾಭಗವತಿಯು ಕಲ್ಯಾಣಿ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಒಂದು ಅಗ್ರಹಾರವಾಗಿತ್ತೆಂದು ಸಂಶೋಧಕರ ಅಭಿಪ್ರಾಯವಿದೆಯಾದರೂ ಅದರ ಕುರುಹುಗಳು ಮಾತ್ರ ಅಲಭ್ಯ. ಈ ಪ್ರದೇಶದಲ್ಲಿಯೇ ಮಾತ್ರ ಛಾಯೆಯ ಪೂಜಾ ಸಂಪ್ರದಾಯ ಬೆಳೆದುಬರಲು ಕಾರಣಗಳಾದರೂ ಏನು ಎಂಬುದರ ಕಡೆಗೆ ಸಂಶೋಧನೆಯು ಗತಿಯನ್ನು ಬದಲಿಸಬೇಕಿದೆ. ಕಲ್ವಾಣಿ ಚಾಲುಕ್ಯರ ಕಾಲದಲ್ಲಿ ಗುಲಬರ್ಗಾ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಸಾಕಷ್ಟು ಸೋಮನಾಥ ದೇಗುಲಗಳ ನಿರ್ಮಿತಿ ಕಾರ್ಯ ನಿರಂತರವಾಗಿತ್ತು. ಛಾಯಾದೇಗುಲದ ರಚನೆ ಯಾವುದೇ ಶೈಲಿಯ ಕುರುಹುಗಳನ್ನು ಸ್ಪಷ್ಟೀಕರಿಸದು. ಹೀಗಾಗಿ ತಾರ್ಕಿಕ ಶಕ್ತಿಗೆ ತಡೆಯಾಗಿರುವುದು ಸತ್ಯ.

Also Read: ಮನೆಯಲ್ಲಿ ಗಡಿಯಾರದಿಂದ ಎಂತೆತಾ ಗಂಡಾಂತರ ಬರಬಹುದು ಗೊತ್ತಾ!!!