ಕಷ್ಟದಲ್ಲಿದ್ದ ಮಾನವ ಕಂಪ್ಯೂಟರ್ ಬಸವರಾಜ್ ಉಮ್ರಾನಿಗೆ ಸಹಾಯ ಮಾಡಿದ ಸುನಿತಾ ಮಂಜುನಾಥ್, ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ..

0
758

ಸಮಾಜ ನಮಗೆ ಏನು ಕೊಟ್ಟಿದೆ ಅನ್ನೋದು ಮುಖ್ಯ ಅಲ್ಲ, ನಾವು ಆ ಸಮಾಜಕ್ಕಾಗಿ ಏನು ಮಾಡುತ್ತಿದ್ದೇವೆ ಅನ್ನೋದು ತುಂಬ ಮುಖ್ಯ. ಹೌದು, ಈ ಮಾತು ನಮಗೆ ಎಷ್ಟೋ ಬಾರಿ ಸಿನೆಮಾಗಳಲ್ಲಿ ಕೇಳಿರುತ್ತೆ, ಸಿನಿಮಾದಲ್ಲಿ ನಟ-ನಟಿಯರು ಮಾಡೋ ಕೆಲಸಗಳಿಗೂ ಅವರು ನಿಜ ಜೀವನದಲ್ಲಿ ಇರೋ ವರ್ತನೆಗೂ ಭಾರಿ ವ್ಯತ್ಯಾಸವಿದೆ. ಆದರೆ ಇಲ್ಲೊಬ್ಬ ಯುವ ಮಹಿಳೆ ಇದ್ದಾರೆ, ನಿಜ ಜೀವನದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುತ್ತೆ ಎಲೆ ಮರೆಕಾಯಿಯಂತೆ ಬದುಕಿರೋ ಸುನೀತಾ ಮಂಜುನಾಥ್ ಬಗ್ಗೆ ನೀವು ಬಹಳ ಕಡಿಮೆ ಕೇಳಿರುತ್ತೀರಿ..

ಸುನೀತಾ ಮಂಜುನಾಥ್ ಮೂಲತಃ ಎಂಜಿನಿಯರಿಂಗ್ ಪದವಿಧರೆ, ಅಷ್ಟೆ ಅಲ್ಲ ತಮ್ಮದೇ ಆದ ಶಿಕ್ಷಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ. ಆದರೆ ಬರೀ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಅವರು ತಮ್ಮ ಸಾಮಾಜಿಕ ಕೆಲಸವನ್ನು ಮಾಡುತಿಲ್ಲ, ಬದಲಿಗೆ ಎಷ್ಟೂ ಜನರಿಗೆ ಸಹಾಯ ಹಸ್ತವನ್ನು ಚಾಚುವಲ್ಲಿ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಇತ್ತೀಚೆಗಷ್ಟೇ ನಡೆದ ಒಂದು ಉದಾಹರಣೆ ಕೊಡುತ್ತೇವೆ, ಬೆಳಗಾವಿಯ ಕರ್ನಾಟಕದ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಅಂದ ವ್ಯಕ್ತಿ ಬಸವರಾಜ್ ಉಮ್ರಾನಿಯವರಿಗೆ ಮಾಡಿರುವ ಸಹಾಯ. ಉಮ್ರಾನಿಯವರು ನೀವು ಹುಟ್ಟಿದ ದಿನಾಂಕ, ದಿವಸ ಸೇರಿದಂತೆ ಕೈಗೆ ವಾಚ್ ಕಟ್ಟದೇ ನಿಖರವಾಗಿ ಸಮಯ ಹೇಳುವ ಬುದ್ದಿವಂತಿಕೆ ಬಸವರಾಜ್ ಅವರಿಗೆ ಇದೆ.

ಬಡ ಕುಟುಂಬದಿಂದ ಬಂದಿದ್ದ ಉಮ್ರಾನಿಯವರಿಗೆ, ಹಣದ ಸಮಸ್ಯೆ ಹೆಚ್ಚಾಗಿ ಕಾಡುತ್ತಿತ್ತು. ಬಸವರಾಜ್ ಅವರ ಆರ್ಥಿಕ ಸಮಸ್ಯೆಗೆ ಬಗ್ಗೆ ಸುನೀತಾ ಮಂಜುನಾಥ್ ಅವರ ಗಮನಕ್ಕೆ ಕೂಡಲೇ ಬಸವರಾಜ್ ಉಮ್ರಾನಿ ಅವರು ಸಂಪರ್ಕ ಮಾಡಿ ಕೂಡಲೇ ಅವರಿಗೆ ಬೇಕಾದ ಅಗತ್ಯಗಳನ್ನು ತಿಳಿದುಕೊಂಡು ಸಹಾಯ ಮಾಡಿದರು.

ಇಂತಹ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಿರುವ ಸುನಿತಾರವರ ಕಾರ್ಯ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಇದಲ್ಲದೇ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಶಾಲಾ ಟ್ರಸ್ಟಿಗಳು ಫ಼ಂಡ್ ಸಂಗ್ರಹಿಸಿ ಬಂದ ಹಣ ನೇರವಾಗಿ ಬಸವರಾಜ್ ಅವರಿಗೆ ತಲುಪಿಸಿರುವ ಆತ್ಮತೃಪ್ತಿ ಸಹ ಸುನೀತ ಮಂಜುನಾಥ್ ಅವರಿಗಿದೆ.

ಪ್ರಸ್ತುತ ರಾಜಕೀಯದಲ್ಲೂ ಸುನೀತಾರವರು ಸಕೃವಾಗಿದ್ದರೆ, ಇವರು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಭಾಷಣಗಳ ಮೂಲಕ ಆಶ್ವಾಸನೆ ನೀಡುವ ಜನರ ಮಧ್ಯೆ, ಕೆಲಸಗಳನ್ನು ಮಾಡಿ ಮಿಕ್ಕೆಲ್ಲವರಿಗೆ ಮಾದರಿಯಾಗಿದ್ದಾರೆ.

ಸುನಿತರಿಂದ ಪ್ರೇರಿತರಾಗಿ ಇನ್ನಷ್ಟು ಹೆಣ್ಣು ಮಕ್ಕಳು ಸಮಾಜ ಕಾರ್ಯದಲ್ಲಿ ಸಕ್ರಿಯವಾಗಲಿ ಎಂದು ಆಶಿಸುತ್ತಾ, ಸುನಿತಾರವರಿಗೆ ಅಭಿನಂದನೆಗಳನ್ನು TheNewsism ತಂಡ ಸಲ್ಲಿಸುತ್ತದೆ.