ಹೊಸ ವರ್ಷಕ್ಕೆ ಸನ್ನಿ ಲಿಯೋನ್-ನ ನೃತ್ಯ ಕಾರ್ಯಕ್ರಮಕ್ಕೆ ಹೋಗಬೇಕು ಅನ್ನೋರಿಗೆ ನಿರಾಸೆ?? ಸನ್ನಿ ಬರುತ್ತಾರ..?

0
364

ನ್ಯೂ ಇಯರ್ಗೆ ನಗರದಲ್ಲಿ ಸನ್ನಿ ಲಿಯೋನ್ ಬರ್ತಾಳೆಂದು ಹುಚ್ಚೆದ್ದು ಕುಣಿದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಬೆಂಗಳೂರಿನಲ್ಲಿ ಆಯೊಜಿಸಿದ್ದ `ಸನ್ನಿ ನೈಟ್ಸ್’ ವಿರುದ್ಧ ಸಿಲಿಕಾನ್ ಸಿಟಿ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ, ಪೊರಕೆ ಹಿಡಿದು ಸನ್ನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಆಕ್ರೋಶವನ್ನು ವ್ಯಕ್ತಪಡಿಸಿದೆ.

ಟೈಮ್ಸ್ ಕ್ರಿಯೆಷನ್ ಡಿಸೆಂಬರ್ 31 ರಂದು ರಾತ್ರಿ ಮಾನ್ಯತಾ ಟೆಕ್ ಪಾರ್ಕ್ ವೈಟ್ ಆರ್ಕಿಡ್ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಬಾರದು ಎಂದು ಆಗ್ರಹಿಸಲಾಗಿದ್ದು, ಕರವೇ ಯುವ ಸೇನೆ ಎಚ್ಚರಿಕೆ ನೀಡಿದೆ. ಕಾರ್ಯಕ್ರಮದ ಆಯೋಜಕರಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡುವಂತೆ ಮನವಿ ಕೊಡೋದಾಗಿ ಹೇಳಿದ್ದರು. ಸನ್ನಿ ಕಾರ್ಯಕ್ರಮ ನಡೆಸಿದರೆ ಕಪ್ಪು ಬಾವುಟ ಹಾರಿಸೋದಾಗಿ ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಪ್ರೇಮ್ ಕುಮಾರ್ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹೊಸ ವರ್ಷಚರಣೆಗೆ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಆಯೋಜಿಸಿದ್ದ ಸನ್ನಿ ನೈಟ್ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ಯಾಕಂದ್ರೆ ಸನ್ನಿಲಿಯೋನ್ ಕೇರಳಕ್ಕೆ ಬಂದಾಗ ಲಾಠಿ ಚಾರ್ಚ್ ನಡೆದು, ಗಲಾಟೆಯಾಗಿತ್ತು. ಇದೆಲ್ಲದ್ರ ಆಧಾರದ ಮೇಲೆ ಕಾರ್ಯಕ್ರಮ ನಿರ್ಬಂಧಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಿಲ್ಲ ಅಂತ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ..

ಇನ್ನು ಟೈಮ್ಸ್ ಕ್ರಿಯೇಷನ್ ಸಂಸ್ಥೆಯವ್ರು ಅನುಮತಿ ಇಲ್ಲದೆ, ಸನ್ನಿ ಲಿಯೋನ್ ಕರೆಸಿ ಕಾರ್ಯಕ್ರಮ ಮಾಡಿದ್ರೆ, ಆಗುವ ಅನಾಹುತಗಳಿಗೆ ಅವ್ರೆ ಜವಬ್ದಾರರಾಗುತ್ತಾರೆ. ಅಲ್ಲದೇ ನಗರದ ಎಮ್ ಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಸಾಕಷ್ಟು ಭದ್ರತೆ ನಿಯೋಜಿಸಲು ವ್ಯವಸ್ಥೆ ಮಾಡಲಾಗ್ತಿದೆ..

ಅಲ್ಲದೇ ಹೈಕೋರ್ಟ್ ನಿರ್ದೇಶನದಂತೆ, ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ಭದ್ರತೆ ಬಗ್ಗೆ ಸಿದ್ದತೆ ಮಾಡಿಕೊಳ್ಳಲಾಗುತ್ತದೆ ಪೊಲೀಸ್ ಆಯುಕ್ತರು ತಿಳಿಸಿದ್ರು.. ಅಲ್ಲದೇ ಈ ಹಿಂದೆ ಆಗಿದ್ದ ಅನಾಹುತಗಳನ್ನ ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಈ ಬಾರಿ ಮತ್ತಷ್ಟು ಭದ್ರತೆಗೆ ಮುಂದಾಗಿದೆ..ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಬರೋಬ್ಬರಿ 10, ಸಾವಿರ ಮಂದಿ ಪೊಲೀಸರು ಬಂದೋಬಸ್ತ್ಗೆ ನಿಯೋಜನೆಗೊಳ್ಳಲಿದ್ದಾರೆ.