ಸೂರ್ಯನ ರಶ್ಮಿಯಿಂದ ಬರುವ ವಿಟಮಿನ್ ‘ಡಿ’ಯ ಉಪಯೋಗಗಳು

0
1414

ಸೂರ್ಯನ ರಶ್ಮಿಯಿಂದ ಬರುವ ವಿಟಮಿನ್ ‘ಡಿ’ಯ ಉಪಯೋಗಗಳು

ಸೂರ್ಯ ಸಮಸ್ತ ಶಕ್ತಿಯ ಕೇಂದ್ರಬಿಂದು. ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲಾ ಆಹಾರಗಳಿಗೂ ಪರೋಕ್ಷ ಸಂಪನ್ಮೂಲ ಸಹ ಸೂರ್ಯನೇ ಆದರೆ ಈ “ಡಿ” ವಿಟಮಿನ್ ಮಾತ್ರ ನೇರವಾಗಿ ಸೂರ್ಯನ ಶಕ್ತಿಯಿಂದ ಲಭಿಸುವುದು ಒಂದು ವಿಶೇಷವಾಗಿದೆ.

ವಿಟಮಿನ್ ಡಿಯು ಯಾವ ಯಾವ ಯಾವ ಪದಾರ್ಥಗಳಲ್ಲಿ ಎಷ್ಟೆಷ್ಟಿರುತ್ತದೆ:

ವಾಸ್ತವವಾದ ಆಹಾರ ಪದಾರ್ಥಗಳ ಮೂಲಕ ದೊರೆಯುವುದಕ್ಕಿಂತ ಸೂರ್ಯರಶ್ಮಿಯು ಸೋಕಿದಾಗ ಚರ್ಮದ ಕೆಳಗಿನ ಪರದಲ್ಲಿ ಇದರ ಉತ್ಪಾದನೆ ಇದರ ಉತ್ಪಾದನೆ ಹೆಚ್ಚು. ಆದರೂ ಕೆಲವು ಆಹಾರ ಪದಾರ್ಥಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಅದು ಲಭಿಸುತ್ತದೆ.

ಆಹಾರ ಪದಾರ್ಥ                  ಪ್ರಮಾಣ (ಮೈಕ್ರೋ ಗ್ರಾಂ.ಗಳಲ್ಲಿ)

*ಕಾಡ್ ಲಿವರ್ ಆಯಿಲ್       – 175

*ಶಾರ್ಕ್ ಲಿವರ್ ಆಯಿಲ್     – 50

*ಮೊಟ್ಟೆ                        – 1.5

ತುಪ್ಪ                           – 2.5

ವಿಟಮಿನ್ ಡಿಯ ಉಪಯೋಗಗಳು:

*ದೇಹವು ಕ್ಯಾಲ್ಷಿಯಂಅನ್ನು ಸ್ವೀಕರಿಸಲು ವಿಟಮಿನ್ ಡಿ ನೆರವಾಗುತ್ತದೆ.

*ಫಾಸ್ಟರಸ್ ನಂತಹ ಪದಾರ್ಥಗಳನ್ನು ಸ್ವೀಕರಿಸಲು ನೆರವಾಗುತ್ತದೆ.

*ರಕ್ತದೊಳಗಿನ ಕ್ಯಾಲ್ಸಿಯಂ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲು ನೆರವಾಗುವ ಪ್ಯಾರಾ ಥೈರಾಯಿಡ್ ಗ್ರಂಥಿಯು ಸಕ್ರಮವಾಗಿ ಕಾರ್ಯನಿರ್ವಹಿಸಲು ವಿಟಮಿನ್ ಡಿ ಬಹಳ ಅಗತ್ಯವಾಗಿದೆ.

*ಇದರ ಕೊರತೆಯಿಂದ ಎಲುಬುಗಳು ಬಾಗಿ ಸೊಟ್ಟಗಾಗುವುದರಿಂದ ಉಂಟಾಗುವ ದೋಷವನ್ನು ರಿಕೆಟ್ಸ್ ಎಂದು ಕರೆಯುವರು,

*ಪ್ರಾಪ್ತಿ ವಯಸ್ಕರು ಹಾಗೂ ದೊಡ್ಡವರಲ್ಲಿ ನಿವಾರಿಸಲು ಇದರ ಕೊರತೆಯುಂಟಾದರೆ ಅದನ್ನು ಅಸ್ಟ್ರೋಮಲೇಸಿಯಾ ಎಂದು ಕರೆಯುತ್ತಾರೆ. ಎಲುಬುಗಳ ದೋಷವನ್ನು ನಿವಾರಿಸಲು ಇದು ಬಹಳ ಉಪಯುಕ್ತವಾಗಿದೆ.

*ಗರ್ಭಿಣಿಯರಿಗೆ ವಿಟಮಿನ್ ಡಿಯನ್ನು ನೀಡುವುದರಿಂದ ಭವಿಷ್ಯದಲ್ಲಿ ಮಕ್ಕಳಲ್ಲಿ ಆರೋಗ್ಯ ಸಂರಕ್ಷಣೆ, ಅವರ ವಿಕಾಸಕ್ಕೆ ಬಹಳಷ್ಟು ಸಹಾಯವಾಗುತ್ತದೆ.

*ಕ್ಯಾನ್ಸರ್ ನಂತಹ ರೋಗದ ಚಿಕಿತ್ಸೆಯಲ್ಲಿಯೂ ವಿಟಮಿನ್ ಡಿ ಉಪಯುಕ್ತವಾಗಿದೆ.

*ಮಾನಸಿಕ ಆರೋಗ್ಯಕ್ಕೆ ಸಹ ವಿಟಮಿನ್ ಡಿಯ ಅಗತ್ಯ ಬಹಳಷ್ಟಿದೆ, ಮೂಳೆಗಳ ವಿಷಯದಲ್ಲಿ ಅಷ್ಟೇ ಅಲ್ಲದೆ ಮಾನವ ಸಂಬಂಧಗಳು ದೃಢವಾಗಲು ಸಹ ವಿಟಮಿನ್ ಡಿ ನೆರವಾಗುತ್ತದೆ ಎಂದು ಕೆಲವು ಆಧುನಿಕ ಸಂಶೋಧನೆಗಳಿಂದ ತಿಳಿದುಬಂದಿದೆ.

*ಒತ್ತಾದ ಕೂದಲು ಬೆಳೇಯಲು ಸಹ ವಿಟಮಿನ್ ಡಿ ನೆರವಾಗುತ್ತದೆ.