ವರ್ಷದ ಮೊದಲ ಗ್ರಹಣವು ನಿಮ್ಮ ರಾಶಿಗನುಗುಣ ಹೇಗೆ ಪ್ರಭಾವ ಬೀರುತ್ತೆ ಅಂತ ಓದಿ, ಕಷ್ಟವಿದ್ದರೆ ಪರಿಹಾರ ಕಂಡುಕೊಳ್ಳಿ!!

0
814

ಈ ವರ್ಷದ ಮೊದಲ ಚಂದ್ರ ಗ್ರಹಣ  ಇಂದು ರಾತ್ರಿ ರಾತ್ರಿ ಇಂದ ನಾಳೆ ವರೆಗೆ ಸಂಭವಿಸಲಿದೆ. ಅದು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬುದು ನಿಜ. ಆದರೆ ಅದರ ಪ್ರಭಾವ ಖಂಡಿತಾ ಇರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಸ್ಪರ್ಶ ಕಾಲ ಇಂದು ತಡರಾತ್ರಿ 11.41. ಗ್ರಹಣ ಮೋಕ್ಷ ಕಾಲ ನಾಳೆ ಬೆಳೆಗ್ಗೆ 1.11 ರ ವರೆಗೆ ಸಂಭವಿಸಲಿದ್ದು, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

Also read: ಈ ಬಾರಿಯ ಸೂಪರ್ ಬ್ಲಡ್ ಮೂನ್ ಚಂದ್ರ ಗ್ರಹಣದ ವಿಶೇಷತೆಗಳ ಬಗ್ಗೆ ಓದಿ!!

ವಿಜ್ಞಾನದ ಪ್ರಕಾರ ಇದು ಒಂದು ಪ್ರಕೃತಿ ವಿಸ್ಮಯವಷ್ಟೇ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮ ಗ್ರಹಣದ ದಿನ ಅಥವಾ ತಕ್ಷಣವೇ ಅನುಭವಕ್ಕೆ ಬರುವುದಿಲ್ಲ. ಈ ಗ್ರಹಣದಿಂದ ಕೆಲ ರಾಶಿಯವರಿಗೆ ತುಂಬಾ ಒಳ್ಳೆಯದಾದರೆ ಇನ್ನು ಕೆಲವು ರಾಶಿಗಳಿಗೆ ಸ್ವಲ್ಪ ಕಷ್ಟಗಳು ಬರಲಿವೆ.

ರಾಶಿಗಳ ಮೇಲೆ ಚಂದ್ರ ಗ್ರಹಣದ ಪರಿಣಾಮವನ್ನು ತಿಳಿದುಕೊಳ್ಳಿ

ಈ ವರ್ಷದ ಮೊದಲ ಚಂದ್ರಗ್ರಹಣ ಜನವರಿ 31 ನೇ ತಾರೀಖಿನಂದು ಸಂಭವಿಸಲಿದ್ದು ಈ ಗ್ರಹಣದಿಂದ ಕೆಲ ರಾಶಿಯವರಿಗೆ ತುಂಬಾ ಒಳ್ಳೆಯ ದಿನಗಳು ಬರಲಿವೆ ಹಾಗು ಕೆಲವು ರಾಶಿಗಳಿಗೆ ಸ್ವಲ್ಪ ಕಷ್ಟಗಳು ಬರಲಿವೆ.

ಖಂಡಗ್ರಾಸ ಚಂದ್ರಗ್ರಹಣ ಯಾರಿಗೆಲ್ಲ ಶುಭ ಯಾರಿಗೆಲ್ಲ ಅಶುಭ ಮತ್ತು ಅದಕ್ಕೆ ಪರಿಹಾರ ಹೇಗೆ ಎಂದು ತಿಳಿಯೋಣವೇ.

ಮೇಷ:

ಈ ರಾಶಿವರಿಗೆ ಸಣ್ಣ-ಪುಟ್ಟ ಅಪಘಾತ ಸಾಧ್ಯತೆಗಳು ಇವೆ. ಅನ್ಯರಿಂದ ಮನಸಿಗೆ ನೋವುಂಟಾಗುವ ಸದ್ಯತೆವಿದೆ. ದಿನಚರಿಯಲ್ಲಿ ಆಹಾರ ಕ್ರಮವನ್ನು ಬದಲಿಸಿಬೇಕು. ಗ್ರಹಣದ ದಿನ ಕನಿಷ್ಠ ಒಂದು ಬೊಗಸೆಯಷ್ಟು ಅಕ್ಕಿಯನ್ನು ದಾನ ಮಾಡಿದರೆ ಉತ್ತಮ.

ವೃಷಭ:

ಈ ರಾಶಿಯವರಿಗೆ ಗ್ರಹಣದಿಂದ ಮಿಶ್ರ ಫಲ ದೊರೆಯಲಿದೆ. ಯಾವುದೇ ವಿಷದಲಿ ಮೂಗು ತುರಿಸುವುದರಿಂದ ಸಮಸ್ಯೆಗಳು ಉದ್ಭವಿಸುತ್ತದೆ. ಆರೋಗ್ಯದಲ್ಲಿ ಏರು ಪೆರು ಉಂಟಾಗುವ ಸಾದ್ಯತೆಗಳಿವೆ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ನಿಗಾ ಏರಲಿ. ಈ ಗ್ರಹಣದಿಂದ ನಿಮಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಹಾಗಾಗಿ ಗ್ರಹಣದ ಪರಿಹಾರ ಮಾಡಿಕೊಳ್ಳುವ ಅಗತ್ಯ ನಿಮಗಿಲ್ಲ.

ಮಿಥುನ:

ಈ ಬಾರಿ ನಿಮಗೆ ಶುಭಗಳೇ ಜಾಸ್ತಿ ವೃತ್ತಿ, ವ್ಯಾಪಾರ ಉದ್ಯೋಗ ಕುಟುಂಬದಲ್ಲಿ ಸುಖ ತುಂಬಾ ಇದೆ. ಮತ್ತು ದೊಡ್ಡ ಮೊತ್ತದಲ್ಲಿ ಧನ ಪ್ರಾಪ್ತಿಯಾಗುವುದು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ನಿಮಗೆ ಸಿಗಲಿದೆ.

ಕಟಕ:

ನೀವು ಸ್ತ್ರೀ ಸಂಬದಿಸಿದ ವಿಚಾರದಲ್ಲಿ ದೂರವಿರುವುದು ಸರಿ. ಹಿಂದೆ ಮಾಡಿದ ತಪ್ಪುಗಳಿಂದ ಭಯ ಪಡುತ್ತೀರಿ. ಸದ್ಯವಾದಷ್ಟು ಸಕಾರಾತ್ಮಕ ಯೋಚನೆ ಮಾಡಿ. ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಂಡು ಕೆಲಸ ಮಾಡಿ. ಯಾವುದೇ ವಿಷಯಕ್ಕಾಗಲಿ ಅಥವಾ ಹೊಸ ಯವ್ಯಾಪರಕ್ಕೆ ಆಗಲಿ ಇದು ಉಚಿತ ಸಮಯವಲ್ಲ. ಈ ದಿನದಂದು ಬಿಳಿ ವಸ್ತ್ರದಲ್ಲಿ ಅಕ್ಕಿ ಹಾಕಿ ದಾನ ಮಾಡಿ.

ಸಿಂಹ:

ಈ ಹಿಂದೆ ನೀವು ಪಟ್ಟ ಕಷ್ಟಗಳಿಂದ ಮುಕ್ತು ಹೊಂದುವ ಕಾಲವಿದು. ಈ ದಿನದಂದು ಆತುರದಲ್ಲಿ ತೀರ್ಮಾನ ಕೈಗೊಂಡರೆ ನಂತರ ಪಶ್ಚಾತಾಪ ಪಡುವಂತಾಗಬಹುಡು ಎಚ್ಚರ ವಹಿಸಿ. ಯಾವುದೇ ಕೆಲಸಕ್ಕೆ ಬೆರೆಯವ ಮಾತಿಗೆ ಮರುಳಾಗದೆ ಸ್ವಂತ ನಿರ್ಧಾರದಿಂದ ಮುಂದೆ ಸಾಗಿ. ನಿಮಗೆ ಚಿಕ್ಕ ಚಿಕ್ಕ ವಿಷಯಕ್ಕೆ ಚಿಂತೆ ಮಾಡಿ ನಗೆ ಪಾತಕ್ಕೆ ತುತ್ತಾಗುತ್ತಿರಾ ಅದರಿಂದ ಚಿಂತೆ ಬಿಟ್ಟು ಅರಾಮವಾಗಿರಿ.

ಕನ್ಯಾ:

ಈ ಗ್ರಹಣದಿಂದ ನಿಮಗೆ ಶುಭ ಫಲಗಳು ಇವೆ. ಅದರ ಸದುಪಯೋಗ ಮಾಡಿಕೊಳ್ಳಬೇಕಷ್ಟೇ. ಕೋರ್ಟು ಕಚೇರಿಗಳಲ್ಲಿನ ಕಾರ್ಯಗಳು ಫಲ ನೀಡಲಿವೆ. ಧೈರ್ಯ ಕಾರ್ಯಗಳ ಬಲದಿಂದ ಹಣ ತರುವ ಅವಕಾಶಗಳು ಬರುವಾಗ ನೀವಾಗಿಯೇ ಅದನ್ನು ನಿರಾಕರಿಸಬೇಡಿ. ಒದಗಿ ಬಂದ ಅವಕಾಶವನ್ನು ಕೈ ಬಿಡಬೇಡಿ. ಸಾಲ ಬಾಧೆ ಇಂದ ಮುಕ್ತಿ ಹೊಂದುವ ಕಾಲವಿದು.

ತುಲಾ:

ಚಂದ್ರ ಗ್ರಹಣದ ಫಲಿತಾಂಶ ಶುಭವಾಗಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಕುಟುಂಬದಲ್ಲಿನ ಹಿರಿಯರ ಸಹಕಾರ ಮತ್ತು ಸ್ನೇಹಿತರಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ. ಸಹಾಯ ಅನ್ನೋದರ ಜತೆಗೆ ನಿಮಗೆ ಬೇಕಾದ ಸಹಕಾರ ದೊರೆಯುತ್ತದೆ. ನಿಮ್ಮ ಕೆಲಸದ ಮೇಲಷ್ಟೇ ನಿಮ್ಮ ಗಮನವಿರಲಿ. ಉದ್ಯೋಗದಲ್ಲಿ ಅಭಿವೃದ್ಧಿ ಹೊಂದುವಿರಿ.

ವೃಶ್ಚಿಕ:

ವೃಶ್ಚಿಕ ರಾಶಿಯವರು ಸಾಡೇಸಾತ್ ಇದ್ರು ನೀವು ಬಯಸಿದ ಎಲ್ಲಾ ಕೆಲಸಗಳು ಎಸ್ ಆಗುತ್ತೆ. ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿ ಮಾನ್ಯತೆ ಲಭಿಸಲಿ ತಮ್ಮ ವರ್ಚಸ್ಸು ಹಾಗೂ ಸಮಾಜದಲ್ಲಿನ ಗೌರವದ ಬಗ್ಗೆ ಎಚ್ಚರ ವಹಿಸಬೇಕು. ಈ ಗ್ರಹಣವು ಶುಭ ವನ್ನು ಸೂಚಿಸುತ್ತಿದೆ. ಮದುವೆ, ಸಂತಾನ, ವ್ಯಾಪಾರದಲ್ಲಿ ಹೊಸ ಅವಕಾಶ, ವಿದೇಶ ಪ್ರಯಾಣದಲ್ಲಿ ಅನುಕೂಲ ಇಂಥ ಹಲವು ಶುಭ ಕಾರ್ಯಗಳು ಕೈ ಗುಡುವವು.

ಧನಸ್ಸು:

ಈ ಗ್ರಹಣವು ಅತ್ಯಂತ ಕೆಡಕು ತರುವುದು ನಿಮ್ಮ ರಾಶಿಗೆ ಎಚ್ಚರ ಎಚ್ಚರ!. ಆದ್ದರಿಂದ ಈ ತಿಂಗಳಿಡೀ ದೂರ ಪ್ರಯಾಣ ಮಾಡಲೇಬೇಡಿ. ಮನೆಯಲ್ಲಿ ಕೂಡ ವಿದ್ಯುತ್ ಉಪಕರಣ, ಗ್ಯಾಸ್ ಸ್ಟೌ ಇತ್ಯಾದಿಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಅಪಾಯಕ್ಕೆ ನೀವಾಗಿಯೇ ಕೈ ಹಾಕದಿರುವುದು ಉತ್ತಮ. ತಾಳ್ಮೆಯ ವರ್ತನೆಗೆ ನಿಧಾನ ಶುಭ ವೆನಿಸಲಿದೆ. ಅಕ್ಕಿ ಹಾಗೂ ಬಿಳಿಯ ವಸ್ತ್ರವನ್ನು ದಾನ ಮಾಡುವ ಮೂಲಕ ದೋಷವನ್ನು ನಿವಾರಣೆ ಮಾಡಿಕೊಳ್ಳಿ.

ಮಕರ:

ನಿಮ್ಮ ಪ್ರೀತಿ ಪಾತ್ರರ ರೊಂದಿಗೆ ಯಾವುದೇ ವಿಚಾರದಲ್ಲಿ ಜಗಳ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಆ ಮೂಲಕ ಯಾವುದೇ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಹಕಾರದಿಂದ ಅರ್ಧಕ್ಕೆ ನಿಂತ ಸಮಸ್ಯೆಗಳು ಸುಧಾರಿಸಲಿದೆ. ಮದುವೆಯ ಯೋಗ ನಿಮ್ಮನ್ನು ಹುಡಿಕೊಂಡು ಬರಲಿದೆ.

ಕುಂಭ:

ಈ ರಾಶಿಯವರಿಗೆ ಈ ಬಾರಿಯ ಗ್ರಹಣ ಅಂಥ ಶುಭವಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಲು ಪ್ರಯತ್ನಿಸಿ. ಗ್ರಹಣದ ವೇಳೆ ದೇವಿ ಆರಾಧನೆಯಿಂದ ಸುಖವೆನಿಸಲಿದೆ. ಇದರಿಂದ ಆಗುವ ಮುಖ್ಯ ಸಮಸ್ಯೆ ಅಂದರೆ, ಮಾನಸಿಕ ಒತ್ತಡ. ಅದರಲ್ಲೂ ನಾನಾ ಬಗೆಯ ಸಮಸ್ಯೆ ಹಾಗೂ ಸವಾಲುಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿವೆ. ಇನ್ನು ಗ್ರಹಣ ಸಂಭವಿಸಿದ ಮೇಲೆ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ.

ಮೀನ:

ಎಲ್ಲಾ ವಿಷಯದಲ್ಲಿ ಲಾಭ ವಿದೆ ಆದರಿಂದ ನೆಮ್ಮದಿ ಇರಲ್ಲಿ. ಈ ಗ್ರಹಣದಿಂದ ಮೀನ ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮತ್ತು ಇವರು ಕೈ ಹಾಕಿದ ಕೆಲಸ ನೆರವೇರುತ್ತದೆ. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಎಂದು ಗೋಚರಿಸುತ್ತಿವೆ. ಅನಿರೀಕ್ಷೆತ ಧನಪ್ರಾಪ್ತಿ. ಅದು ಕೂಡ ನಿಮ್ಮ ಎಂದಿನ ಆದಾಯ ಮೂಲವಲ್ಲ. ಇದು ಹೊಸದಾದ ಆದಾಯ ಮೂಲದಿಂದ ಸಿಗುವ ಧನಲಾಭ.