ಈ ಬಾರಿಯ ಸೂಪರ್ ಬ್ಲಡ್ ಮೂನ್ ಚಂದ್ರ ಗ್ರಹಣದ ವಿಶೇಷತೆಗಳ ಬಗ್ಗೆ ಓದಿ!!

0
599

ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಬಂದಾಗ ಚಂದ್ರ ಗ್ರಹಣವಾಗುವುದು ಎಂಬ ವೈಜ್ಞಾನಿಕ ಕಾರಣಗಳು ಮತ್ತು ಹಿನ್ನೆಲೆಗಳೂ ಸಾಕಷ್ಟಿವೆ. ಆದರೆ ವಿಜ್ಞಾನ ಹುಟ್ಟುವುದಕ್ಕೇ ಮೊದಲೇ ಅನಾದಿ ಕಾಲದಿಂದಲೂ ಗ್ರಹಣಾಚರಣೆ ಮಾಡಿಕೊಂಡು ಬರಲಾಗುತ್ತಿದೆ ಮತ್ತು ಅದನ್ನು ಹಿರೀಕರು ಬರೆದಿಟ್ಟಿದ್ದಾರೆ ಎಂದರೆ ನಮ್ಮ ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದು ಗೊತ್ತಾಗುತ್ತದೆ.ಅನೇಕ ಭಾಗದಲ್ಲಿ ಗ್ರಹಣ ಎದುರಾದಾಗ ಅನೇಕ ಆಚರಣೆಗಳು ಶುರುವಾಗುತ್ತವೆ. ತಲತಲಾಂತರಗಳಿಂದ ಈ ಆಚರಣೆಗಳು ಚಾಲ್ತಿಯಲ್ಲಿವೆ.

Also read: ವರ್ಷದ ಮೊದಲ ಗ್ರಹಣವು ನಿಮ್ಮ ರಾಶಿಗನುಗುಣ ಹೇಗೆ ಪ್ರಭಾವ ಬೀರುತ್ತೆ ಅಂತ ಓದಿ, ಕಷ್ಟವಿದ್ದರೆ ಪರಿಹಾರ ಕಂಡುಕೊಳ್ಳಿ!!

ಈ ವರ್ಷದ ಮೊದಲ ಚಂದ್ರಗ್ರಹಣ ಭಾನುವಾರ ರಾತ್ರಿ ಇಂದ ಸೋಮವಾರ ಬೆಳಗಿನ ಜಾವದ ವರೆಗೆ ಕಾಣಿಸಿಕೊಳ್ಳಲಿದ್ದು, ಇಂತಹ ಸೂಪರ್ ಬ್ಲಡ್ ಮೂನ್ ಮುಂದಿನ 3 ವರ್ಷಗಳು ಕಾಲ ಇನ್ನು ಈ ಸಂಪೂರ್ಣ ಗ್ರಹಣ ವೀಕ್ಷಣೆಗೆ ಸಿಗುವುದಿಲ್ಲ. ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಬಂದಾಗ ಚಂದ್ರ ಗ್ರಹಣವಾಗುವುದು ಎಂಬ ವೈಜ್ಞಾನಿಕ ಕಾರಣಗಳು ಮತ್ತು ಹಿನ್ನೆಲೆಗಳೂ ಸಾಕಷ್ಟಿವೆ. ಆದರೆ ವಿಜ್ಞಾನ ಹುಟ್ಟುವುದಕ್ಕೇ ಮೊದಲೇ ಅನಾದಿ ಕಾಲದಿಂದಲೂ ಗ್ರಹಣ ಎದುರಾದಾಗ ಅನೇಕ ಆಚರಣೆಗಳು ಶುರುವಾಗುತ್ತವೆ. ತಲತಲಾಂತರಗಳಿಂದ ಈ ಆಚರಣೆಗಳು ನಡೆಯುತ್ತ ಬಂದಿವೆ. ಈ ಬಾರಿಯ ಚಂದ್ರ ಗ್ರಹಣದಿಂದ ಭಾರತ ದೇಶದವರಿಗೆ ಗ್ರಹಗತಿ ಏರುಪೇರು ಆಗುತ್ತಾ, ಮುಂದೆ ಓದಿ!!

ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಸ್ಪರ್ಶ ಕಾಲ

ಜನೆವರಿ 20 ರಂದು ರಾತ್ರಿ 11.41 ಕ್ಕೆ ಆರಂಭವಾಗಿ ಮಾರನೆದಿನ ಬೆಳೆಗ್ಗೆ 1.11 ಕ್ಕೆ ಸಂಪೂರ್ನವಾಗುತ್ತದೆ. ಒಟ್ಟಾಗಿ 1 ಗಂಟೆ 30 ನಿಮಿಷಿಗಳ ಕಾಲ ಈ ಗ್ರಹಣ ಸಂಭವಿಸುತ್ತದೆ. ಒಟ್ಟಾರೆ ಸಂಪೂರ್ಣ ಹಾಗೂ ಭಾಗಶಃ ಚಂದ್ರ ಗ್ರಹಣವು 3 ಗಂಟೆ 30 ನಿಮಿಷಗಳ ಕಾಲ ಸಂಭವಿಸುತ್ತದೆ.

ಯಾವ ಯಾವ ದೇಶಗಳಲ್ಲಿ ಈ ಗ್ರಹಣ ಗೋಚರಿಸುತ್ತದೆ..?

ಈ ಗ್ರಹಣವು ಭಾರತ ಸೇರಿದಂತೆ ಏಷ್ಯಾದ ಬಹುತೇಕ ದೇಶಗಳಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಅಮೆರಿಕ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಪಶ್ಚಿಮ ಯುರೋಪ್ ಹಾಗೂ ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಪೂರ್ವ ಆಫ್ರಿಕಾ ಹಾಗೂ ಯುರೋಪ್ ನ ಪೂರ್ವ ಭಾಗದ ಜನರು ಭಾಗಶಃ ಚಂದ್ರ ಗ್ರಹಣವನ್ನು ಮಾತ್ರ ನೋಡಬಹುದು.

ಸೂಪರ್ ಬ್ಲಡ್ ಮೂನ್ ಅಂದರೇನು..?

ಸೂರ್ಯ ಹಾಗೂ ಚಂದ್ರನ ಮದ್ಯೆ ಭೂಮಿ ಸಂಚರಿಸಿದಾಗ ಸೂರ್ಯನ ಬೆಳಕು ನೀರವಾಗಿ ಚಂದ್ರನ ಮೇಲೆ ಬೀಳುವುದನ್ನು ತಡೆಯುತ್ತದೆ ಆಗ ಭೂಮಿಯ ವಾತಾವರಣದ ತುದಿಯಿಂದ ಬೆಳಕು ಸಾಗಿ ಚಂದ್ರನ ಮೇಲೆ ಬಿದ್ದು, ಕೆಂಪಾಗಿ ಕಾಣುತ್ತದೆ. ಆದ್ದರಿಂದ ಅದನ್ನು ಸೂಪರ್ ಬ್ಲಡ್ ಮೂನ್ ಎನ್ನಲಾಗುತ್ತದೆ.