ಭಾರತ ಪಾಕ್-ನಲ್ಲಿ ನಡೆಸಿದ ದಾಳಿಯ ಸಾಕ್ಷಿ ನಾಶ ಮಾಡಿದ್ದ ಪಾಕ್, ಈಗ ಹೊರಬಿದ್ದಿದೆ ಸತ್ಯ.. ಇನ್ಮೇಲಾದ್ರೂ ನಮ್ಮ ಯೋಧರ ಮೇಲೆ ಅನುಮಾನ ಪಡೋದು ಬಿಡ್ತಾರಾ??

0
364

ಪುಲ್ವಾಮ ದಾಳಿಯ ಪತ್ರಿಕಾರವಾಗಿ ಭಾರತ ಉಗ್ರರ ಮೇಲೆ ಮಾಡಿದ ಬಾಲಕೋಟ್ ಏರ್ ಸ್ಟ್ರೈಕ್ -ನಲ್ಲಿ ಸುಮಾರು 260 ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಪಾಕಿಸ್ತಾನ ಸರ್ಕಾರ ಮಾತ್ರ ಭಾರತದ ಈ ದಾಳಿಯಲ್ಲಿ ಯಾವುದೇ ಉಗ್ರರು ಸತ್ತಿಲ್ಲ, ಹಾಗೆಯೇ ಯಾವುದೇ ಪ್ರಾಣ ಹಾನಿ ಯಾಗಿಲ್ಲ, ಎಂದು ದೂರುತ್ತಾ ಬಂದಿತ್ತು. ಇದಕ್ಕೆ ಭಾರತದಲ್ಲಿ ಅನುಮಾನ ಮೂಡಿತ್ತು. ಕೆಲವು ಮೂಲಗಳಿಂದ ಬಂದ ಮಾಹಿತಿಯಂತೆ. ಪಾಕ್ ತಾನು ಸಾಕಿದ ಉಗ್ರರು ಸತ್ತ ಮಾಹಿತಿಯನ್ನು ಅರಿತು ಅವರೆಲ್ಲರನ್ನು ವ್ಯವಸ್ಥಿತವಾಗಿ ಮುಚ್ಚಿದೆ ಎನ್ನುವ ಸತ್ಯದ ವಾಸನೆ ಹರಡಿತ್ತು.

Also read: ಟೀಂ ಇಂಡಿಯಾ ಪುಲ್ವಾಮಾ ದಾಳಿಯ ಸ್ಮರಣಾರ್ಥವಾಗಿ ಸೇನಾ ಕ್ಯಾಪ್ ಧರಿಸಿದ್ದಕ್ಕೆ, ಕೆಣಕಿದ ಪಾಕಿಸ್ತಾನಕ್ಕೆ ಬಾರಿ ಮುಖಬಂಗ..

ಇದಕ್ಕೆ ಒಪ್ಪದ ಪಾಕ್ ಭಾರತದ ದಾಳಿಯಿಂದ ಪರಿಸರದ ಮೇಲೆ ಪರಿಣಾಮ ಬಿರಿದೆ ಎಂದು ವಿಶ್ವಸಂಸ್ಥೆಗೂ ದೂರು ನೀಡಲು ಮುಂದಾಗಿತ್ತು. ಈಗ ಪಾಕ್ ಕಳ್ಳಾಟ ಬಯಲಾಗಿದ್ದು. ಬಾಲಕೋಟ್ ಭಯೋತ್ಪಾದಕ ವಿರುದ್ಧ ಭಾರತ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿಯೊಬ್ಬರು ಮಾತನಾಡಿರುವ 3 ನಿಮಿಷಗಳ ಆಡಿಯೋ ಲಭ್ಯವಾಗಿದೆ. ಅಲ್ಲದೆ, ಪಾಕ್ ಮಾಧ್ಯಮಗಳಿಗೆ ಈ ಬಗ್ಗೆ ಸುಳ್ಳು ಮಾಹಿತಿ ಎಲ್ಲವನ್ನು ತೆರವುಗೊಳಿಸಿದ ಸ್ಥಳಗಳಿಗೆ ಕರೆದುಕೊಂಡು ಈ ಮುಂಚೆಯೇ ತರಬೇತಿ ನೀಡಿದ್ದ ಜನರಿಂದ ಹೇಳಿಕೆಗಳನ್ನು ಕೊಡಿಸಿದೆ. ಎಂದು ತಿಳಿದು ಬಂದಿದೆ.

ಸತ್ತ ಉಗ್ರರನ್ನು ಸುಟ್ಟ ಪಾಕ್;

ಪುಲ್ವಾಮ ದಾಳಿಗೆ ಸೇಡು ತಿರಿಸಿಕೊಳ್ಳಲು ಭಾರತ ದಾಳಿ ನಡೆಸಲು ತಯಾರಿ ನಡೆಸಿದ್ದಾಗ ಬಾಲಕೋಟ್ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಗ್ರರು ನೆಲೆಸಿದ್ದಾರೆ ಎನ್ನುವುದು ಖಚಿತವಾಗಿತ್ತು. ಅದರಂತೆ ಭಾರತದ ಸೈನ್ಯ ನಡೆಸಿದ ನಡೆಸಿದ ದಾಳಿಯಲ್ಲಿ ಸಾಕಷ್ಟು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಮಾಹಿತಿ ಹೊರಬಾರದಂತೆ ತಡೆಯಲು ಯತ್ನಿಸಿದ್ದ ಪಾಕಿಸ್ತಾನ ಸೇನೆ ಸಂಪೂರ್ಣ ಪ್ರದೇಶವನ್ನು ವಶಕ್ಕೆ ಪಡೆದು ಯಾರು ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿತ್ತು. ದಾಳಿಯಲ್ಲಿ ಮೃತಪಟ್ಟ ಉಗ್ರರ ಶವಗಳನ್ನು ಸಂಗ್ರಹಿಸಿದ್ದ ಪಾಕ್ ಹಲವು ಕಾರುಗಳಲ್ಲಿ ಪೆಟ್ರೋಲ್ ತಂದು ಸುರಿದು ಸ್ಥಳದಲ್ಲೇ ಸುಟ್ಟು ಹಾಕಿತ್ತು. ಅಷ್ಟು ಶವಗಳನ್ನು ಸುಟ್ಟು ಹಾಕಲು ಸಾಧ್ಯವಾಗದ ಪರಿಣಾಮ ಒಂದಷ್ಟು ಶವಗಳನ್ನು ಹತ್ತಿರದ ಕುಲ್ಹಾಗ್ ನದಿಗೆ ಎಸೆದು ಸಾಕ್ಷ್ಯ ನಾಶ ಪಡಿಸಿತ್ತು ಎಂಬ ಸತ್ಯ ಹೊರಬಿದಿದ್ದೆ.

Also read: ಭಾರತದ ಮೇಲೆ ಪಾಕ್ ನಡೆಸಿದ ಕುತಂತ್ರದ ಹಿಂದೆ ಇರುವ ಕಂತ್ರಿ ನಾಯಿ ಬುದ್ದಿಯ ಸಂಪೂರ್ಣ ಮಾಹಿತಿ ವಿವರಿಸಿದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್..

ಅಲ್ಲದೆ, ಕೆಲವರನ್ನು ಅಫಘಾನಿಸ್ತಾನದ ಗಡಿಯಲ್ಲಿ ತೆಗೆದುಕೊಂಡು ಹೋಗಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ. ಇಡೀ ಪ್ರದೇಶವನ್ನು ವಶಕ್ಕೆ ಪಡೆದ ಸೇನೆ ಬಳಿಕ ಇಡೀ ಪ್ರದೇಶದ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಮೂಲಕ ಘಟನೆಯ ಫೋಟೋ, ವಿಡಿಯೋ ವೈರಲ್ ಆಗದಂತೆ ಬಂದ್ ಮಾಡಿತ್ತು. ಪಾಕಿಸ್ತಾನದ ಸೇನಾ ಅಧಿಕಾರಿ ಕೆಲ ಫೋಟೋಗಳನ್ನು ಟ್ವೀಟ್ ಮಾಡಿ ಏನು ಆಗಿಲ್ಲ ಎಂಬಂತೆ ಬಿಂಬಿಸಿದ್ದರು. ಅಲ್ಲದೇ ಮಾಧ್ಯಮಗಳು ಸೇರಿದಂತೆ ಯಾರಿಗೂ ಹೇಳಿಕೆ ನೀಡದಂತೆ ಸ್ಥಳೀಯ ಮಂದಿ ಮೇಲೆ ಹಲ್ಲೆ ನಡೆಸಿ ಪಾಕಿಸ್ತಾನ ಸೇನೆ ಎಚ್ಚರಿಕೆ ನೀಡಿತ್ತು. ಅವರಲ್ಲಿದ್ದ ಮೊಬೈಲ್ ಫೋನ್‍ಗಳನ್ನು ಕಿತ್ತುಕೊಂಡಿತ್ತು.

ಪಾಕ್ ಸ್ಥಳಿಯರ ಆಡಿಯೋ ರಿಲಿಸ್?

ಗಾಯಗೊಂಡ ಉಗ್ರರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡದೇ ಅಫ್ಘಾನಿಸ್ತಾನದ ಗಡಿಗೆ ಕಳುಹಿಸಿಕೊಟ್ಟು ಪ್ರದೇಶವನ್ನು ಕ್ಲೀಯರ್ ಮಾಡಿತ್ತು. ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಬಾಂಬ್ ತಜ್ಞ, ಸಾಫ್ಟ್‍ವೇರ್ ಎಕ್ಸ್‍ಪರ್ಟ್ ಬಲಿಯಾಗಿರುವುದು ಕೂಡ ಸ್ಪಷ್ಟವಾಗಿದೆ. ಎಂದು ಬಾಲಾ ಕೋಟ್ ನಿವಾಸಿಗಳು ಅಂತರ್ ರಾಷ್ಟ್ರೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಆಡಿಯೋ ಬಿಡುಗಡೆ ಮಾಡಿವೆ. ಅದರಂತೆ ಭಾರತ ಮತ್ತೊಮ್ಮೆ ಈ ರೀತಿ ಉಗ್ರರ ಕೇಂದ್ರಗಳ ಮೇಲೆ ದಾಳಿ ನಡೆಸಬೇಕು. ಮತ್ತೆ ದಾಳಿ ನಡೆಸಿದರೆ ನಮಗೆ ಉಗ್ರರ ಸಮಸ್ಯೆಯೇ ಇಲ್ಲವಾಗುತ್ತದೆ ಎಂದು ಸ್ಥಳೀಯ ವ್ಯಕ್ತಿ ಹೇಳಿದ್ದಾನೆ. ಒಂದು ಮತ್ತೆ ಭಾರತ ಉಗ್ರರ ಮೇಲೆ ದಾಳಿ ಮಾಡಿದರೆ ಅಡಗಿ ಕುಳಿತುಕೊಳ್ಳಲು ಎಲ್ಲೂ ಅವಕಾಶ ಇಲ್ಲದ ಕಾರಣ ಉಗ್ರರನ್ನು ಪಾಕ್ ಸರ್ಕಾರ ಅಫ್ಘಾನ್ ಗಡಿಗೆ ಶಿಫ್ಟ್ ಮಾಡಿದೆ ಎಂದು ತಿಳಿಸಿದ್ದಾರೆ.