ಓಮು ಕಾಳು ಬರಿ ಅಡುಗೆಗೆ ಮಾತ್ರ ಅಂದ್ಕೊಂಡಿದೀರಾ? ಅದರ ಆರೋಗ್ಯಕರ ಗುಣಗಳು ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ..

0
2621

ಊಟದ ನಂತರ ಸ್ವಲ್ಪ ಓಮು ಕಾಳನ್ನು ಬಾಯಿಗೆ ಹಾಕಿ ಅಗೆದು ತಿನ್ನುತ್ತಿದ್ದಲ್ಲಿ ಜೀರ್ಣರಸಗಳ ಉತ್ಪತ್ತಿ ಹೆಚ್ಚುವುದು.

ಪ್ರತಿದಿನ ಊಟದ ನಂತರ ಸ್ವಲ್ಪ ಓಮು ಕಾಳನ್ನು ಅಗೆದು ತಿನ್ನುವುದರಿಂದ ಅಜೀರ್ಣ, ಹೊಟ್ಟೆಯುಬ್ಬರ,ಅತಿಸಾರ,ಆಮಶಂಕೆ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

ಮಕ್ಕಳಿಗೆ ಅಜೀರ್ಣವಾಗಿದ್ದಲ್ಲಿ:
ಓಮು ಕಾಳನ್ನು ನೀರಿನಲ್ಲಿ ಕುದಿಸಿ ೧ ಟೀ ಚಮಚ ಕಷಾಯಕ್ಕೆ ಒಂದು ಚಿಟಿಕೆ ಅಡುಗೆ ಸೋಡಾ ಬೆರೆಸಿ ಕುಡಿಸಿದಲ್ಲಿ ಗುಣವಾಗುತ್ತದೆ.

ದಂತಕ್ಷಯ ನಿವಾರಣೆಗೆ:
ಓಮು ಕಾಳನ್ನು ಹಲ್ಲಿನಿಂದ ಅಗೆದು ತಿನ್ನುವುದರಿಂದ ದಂತಕ್ಷಯ ಮತ್ತು ಬಾಯಿಯ ದುರ್ಗಂಧ ನಿವಾರಣೆಯಾಗುವುದು.

ಶೀತ/ನೆಗಡಿಗೆ:
ಓಮು ಕಷಾಯಕ್ಕೆ ಅಡುಗೆ ಉಪ್ಪು ಸೇರಿಸಿ ಆಗಾಗ್ಗೆ ಬಾಯಿ ಮುಕ್ಕಳಿಸುತ್ತಿದ್ದಲ್ಲಿ ಶೀತದಿಂದ ಗಂಟಲು ಕಟ್ಟಿಕೊಂಡಿರುವುದು,ಗಂಟಲು ಒಡೆದಿರುವುದು,ಗಂಟಲು ಹುಣ್ಣಾಗಿರುವುದು ಕಡಿಮೆಯಾಗುತ್ತದೆ.

ಕಫಕ್ಕೆ:
ಕ್ಷಯ,ಕೆಮ್ಮು,ದಮ್ಮು ರೋಗಗಳಲ್ಲಿ ಓಮು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ೩ ಬಾರಿ ಕುಡಿಯಬೇಕು.

ಚರ್ಮರೋಗಗಳಿಗೆ:
*ಹುಳುಕಡ್ಡಿ, ನವೆ ಮುಂತಾದ ಚರ್ಮರೋಗಗಳು ಓಮು ಕಾಳನ್ನು ಬೆಲ್ಲದೊಂದಿಗೆ ಸೇವಿಸಿದ್ದಲ್ಲಿ ನಿವಾರಣೆಯಾಗುವುದು.
* ಓಮು, ಅರಿಶಿನದ ಪುಡಿ ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ನುಣ್ಣಗೆ ಅರೆದು ಹಚ್ಚಿದರೆ ತುರಿಕಜ್ಜಿ ನಿವಾರಣೆಯಾಗುವುದು.

ನೋವಿಗೆ:
*ಪೆಟ್ಟು ತಗುಲಿದ ಭಾಗಕ್ಕೆ ನಿಂಬೆರಸದೊಂದಿಗೆ ಓಮು ಅರೆದು ಪಟ್ಟು ಹಾಕಿದರೆ ಊತ ಮತ್ತು ನೋವು ಶಮನವಾಗುತ್ತದೆ.
*ಕೊಬ್ಬರಿ ಎಣ್ಣೆಯಲ್ಲಿ ಓಮು ಕಾಳನ್ನು ಚೆನ್ನಾಗಿ ಬೇಯಿಸಿ ನಂತರ ಈ ಎಣ್ಣೆ ಹಚ್ಚಿ ಮಾಲೀಶು ಮಾಡಿದರೆ ಮೈ ನೋವು ಬಿಟ್ಟು ಹೋಗುವುದು.