ಖಾಸಗಿ ವಲಯದ ಉದ್ಯೋಗಿಗಳಿಗೆ ಸುಪ್ರಿಂ ಕೋರ್ಟ್ ಮಹತ್ವದ ಆದೇಶ; ಪಿಂಚಣಿಯಲ್ಲಿ ಭಾರಿ ಏರಿಕೆ..

0
1339

ಖಾಸಗಿ ವಲಯದ ಉದ್ಯೋಗಿಗಳಿಗೆ ಸುಪ್ರಿಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮಾಸಿಕವಾಗಿ ಗರಿಷ್ಠ 15 ಸಾವಿರ ವೇತನಕ್ಕೆ ಮಿತಿಗೊಳಿಸಿ ಪಿಂಚಣಿ ನೀಡುವ ಬದಲು ಸಂಪೂರ್ಣ ವೇತನ ಆಧಿರಿಸಿ ಪಿಂಚಣಿ ನೀಡಬೇಕು ಎಂದು ಕೋರ್ಟ್​​ ಆದೇಶ ಹೊರಡಿಸಿದ್ದು ಈ ಹಿನ್ನೆಲೆಯಲ್ಲಿ ಖಾಸಗಿ ವಲಯದ ನೌಕರರು ನಿಟ್ಟುಸಿರು ಬಿಡುವಂತಾಗಿದೆ. ಈ ಆದೇಶದಿಂದ ಪಿಂಚಣಿ ಪ್ರಮಾಣದಲ್ಲಿ ಭಾರೀ ಏರಿಕೆ ಆಗಲಿದೆ ಅದರಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ಧಾರದಿಂದ ಪಿಂಚಣಿ ಶೇ. 100 ಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.


Also read: ಮದುವೆ ಮಂಟಪದಲ್ಲಿ ಸುಮಲತಾ ಅಂಬರೀಶ್ ಅಲೆ; ಸಪ್ತಪದಿ ತುಳಿದ ಬಳಿಕ ಸುಮಲತಾ ಗೆ ಮತ ನೀಡಿ ಎಂದು ಮನವಿ ಮಾಡಿಕೊಂಡ ನವ ಜೋಡಿಗಳು..

ಏನಿದು ಇಪಿಎಫ್​ಒ ಆದೇಶ?

ಹೌದು ಖಾಸಗಿ ವಲಯದ ಉದ್ಯೋಗಿಗಳಿಗೆ ಹೆಚ್ಚಿನ ಮೊತ್ತದ ಪಿಂಚಣಿ ನೀಡುವಂತೆ ಸೂಚಿಸಿ ಕೇರಳ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಇಪಿಎಫ್​ಒ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ. ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಪಿಎಫ್ಒ ಮೇಲ್ಮನವಿ ಸಲ್ಲಿಸಿತ್ತು. ನಿವೃತ್ತ ಎಲ್ಲ ನೌಕರರಿಗೆ ಅವರ ಸಂಪೂರ್ಣ ವೇತನದ ಆಧಾರದ ಮೇಲೆ ಪಿಂಚಣಿ ನೀಡುವಂತೆ ಕೇರಳ ಕೋರ್ಟ್ ಉಲ್ಲೇಖಿಸಿತ್ತು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇರಳ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಖಾಸಗಿ ವಲಯದ ನಿವೃತ್ತ ನೌಕರರಿಗೆ ಸಂಪೂರ್ಣ ವೇತನ ಆಧರಿಸಿ ಪಿಂಚಣಿ ನೀಡಬೇಕು ಎಂದು ಈ ಮೊದಲು ಕೇರಳ ಹೈಕೋರ್ಟ್​ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ನೌಕರರ ಭವಿಷ್ಯ ನಿಧಿ ಸಂಘಟನೆ ಸುಪ್ರೀಂಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಿತ್ತು. ಆದರೆ, ಈ ಅರ್ಜಿಯನ್ನು ಸುಪ್ರೀಂಕೋರ್ಟ್​​ ತಿರಸ್ಕರಿಸಿದ್ದು ಇದಕ್ಕೆ ಕಾರಣ “ಈ ಮೇಲ್ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂಬುದು ನಮಗೆ ಕಂಡು ಬಂದಿದೆ. ಹಾಗಾಗಿ, ಈ ಅರ್ಜಿಯನ್ನು ನಾವು ತಿರಸ್ಕರಿಸುತ್ತಿದ್ದೇವೆ,” ಎಂದು ಸುಪ್ರೀಂಕೋರ್ಟ್​ ಹೇಳಿದೆ. ಈ ಆದೇಶದಿಂದ ಪಿಂಚಣಿ ಪ್ರಮಾಣದಲ್ಲಿ ಭಾರೀ ಏರಿಕೆ ಆಗಲಿದೆ.


Also read: ಪುಲ್ವಾಮ ದಾಳಿಯಂತೆ ಮತ್ತೊಂದು ಆತ್ಮಹತ್ಯೆ ದಾಳಿ; ತಪ್ಪಿತು ಮಹಾ ದುರಂತ, ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..

ಸುಪ್ರೀಂಕೋರ್ಟ್ ನಂತೆ ಪಿಂಚಣಿ ಪ್ರಮಾಣ

ಸುಪ್ರೀಂಕೋರ್ಟ್​ನ ಈ ನಿರ್ದೇಶನದ ಅನ್ವಯ, 33 ವರ್ಷ ಕೆಲಸ ಮಾಡಿ, ನಿವೃತ್ತಿ ಹೊಂದುವಾಗ ರೂ. 50 ಸಾವಿರ ವೇತನ ಪಡೆಯುತ್ತಿರುವ ಉದ್ಯೋಗಿಗೆ ಹಾಲಿ ಸಿಗುತ್ತಿದ್ದ ರೂ. 5,180 ಪಿಂಚಣಿ ಬದಲು ಮಾಸಿಕ ರೂ. 25 ಸಾವಿರ ಪಿಂಚಣಿ ದೊರೆಯಲಿದೆ. 30 ವರ್ಷ ಕೆಲಸ ಮಾಡಿದ ಉದ್ಯೋಗಿಗಳಿಗೆ ರೂ. 4,525 ಬದಲು ರೂ. 22,857, 25 ವರ್ಷ ಕೆಲಸ ಮಾಡಿದವರಿಗೆ ರೂ. 3,425 ಬದಲು ರೂ. 19,225, 20 ವರ್ಷ ಕೆಲಸ ಮಾಡಿದ ಉದ್ಯೋಗಿಗಳಿಗೆ ರೂ. 2,100 ಬದಲು ರೂ. 14,285 ಪಿಂಚಣಿ ಸಿಗಲಿದೆ.ಜೊತೆಗೆ ತಿಂಗಳಿಗೆ ರೂ. 1 ಲಕ್ಷ ವೇತನ ಪಡೆಯುವವರು 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ರೂ. 5,180 ಬದಲು ರೂ. 50 ಸಾವಿರ, 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರೆ ರು. 4,525 ಬದಲಾಗಿ ರೂ. 45,714, 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರೆ ರೂ. 3,425 ಬದಲು ರೂ. 38,571 ಹಾಗೂ 20 ವರ್ಷ ಸೇವೆ ಸಲ್ಲಿಸಿದವರಿಗೆ ರೂ. 2,100 ಬದಲು ರೂ. 28,571 ಪಿಂಚನೆ ಸಿಗಲಿದೆ.


Also read: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಮಾಜಿ ಸಂಸದೆ ರಮ್ಯಾ..

1995 ರಲ್ಲಿ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಯನ್ನು ಕೇಂದ್ರ ಸರ್ಕಾರ ಪರಿಚಯಿಸಿತು. ಇದರಡಿಯಲ್ಲಿ ನೌಕರರ ವೇತನದಲ್ಲಿ ಪಿಂಚಣಿ ಯೋಜನೆಯೊಂದರಲ್ಲಿ ಉದ್ಯೋಗದಾತನು ಶೇ. 8.33ರಷ್ಟು ಕೊಡುಗೆ ನೀಡಬೇಕಾಗಿತ್ತು. ಈ ಕೊಡುಗೆಗೆ ರೂ. 6,500 (ಅಥವಾ ರೂ. 541 ತಿಂಗಳಿಗೆ) ಶೇ. 8.33ನಷ್ಟು ಹಣವನ್ನು ನೀಡಲಾಯಿತು. ಸರ್ಕಾರವು ಈ ಕಾಯಿದೆಯನ್ನು ಮಾರ್ಚ್ 1996 ರಲ್ಲಿ ತಿದ್ದುಪಡಿ ಮಾಡಿತು ಮತ್ತು ನಿಜವಾದ ವೇತನದ ಶೇಕಡಾವಾರು ಕೊಡುಗೆಗೆ ಅವಕಾಶ ಮಾಡಿಕೊಟ್ಟಿತು. ಇಪಿಎಫ್ಒ ಸಂಸ್ಥೆಯನ್ನು 1995ರಲ್ಲಿ ಆರಂಭಿಸಲಾಗಿ, 1996ರಲ್ಲಿ ನಿಯಮವನ್ನು ಬದಲಿಸಲಾಗಿತ್ತು. 2014ರಲ್ಲಿ ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಲಾಗಿತ್ತು. ಹೊಸ ನಿಯಮದನ್ವಯ ಖಾಸಗಿ ಉದ್ಯೋಗಿಗಳ ಪೂರ್ಣ ವೇತನಕ್ಕೆ ಪಿಂಚಣಿ ಸಿಗುತ್ತಿರಲಿಲ್ಲ. ರೂ. 15 ಸಾವಿರಕ್ಕೆ ಪಿಂಚಣಿ ನಿಗದಿ ಮಾಡಲಾಗಿತ್ತು.