ರಾಮಜನ್ಮ ಭೂಮಿ ಅಯೋಧ್ಯೆಯ ಭೂ ವಿವಾದದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು, ತಿಳಿದುಕೊಳ್ಳಲು ಮುಂದೆ ಓದಿ!!

0
231

ಅಯೋಧ್ಯೆಯ ರಾಮಜನ್ಮಭೂಮಿ ಭೂ ವಿವಾದ ಬಗೆಹರಿಸಲು ಮಧ್ಯಸ್ಥಿಕೆಯೇ ಉತ್ತಮ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠ ಈ ತೀರ್ಪು ನೀಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ವಿವಾದ ಬಗೆಹರಿಸಲು ಮೂವರು ಸದಸ್ಯರ ಸಂಧಾನಕಾರರ ಸಮಿತಿಯನ್ನು ನೇಮಿಸಿದೆ.

Also read: ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳಿಗೂ ಸಹ ಪಾರ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದ್ದರೂ ಸಹ ದೇವೇಗೌಡರು ಹೇಳುತ್ತಾರೆ “ನಾನು ಕುಟುಂಬ ರಾಜಕಾರಣ ಮಾಡಿಲ್ಲ” ಇವರ ಮಾತನ್ನು ನಂಬುತ್ತೀರಾ??

2 ತಿಂಗಳು ಮಾತ್ರ ಸಂಧಾನಕ್ಕೆ ಕಾಲಾವಕಾಶ;

ಇನ್ನೊಂದು ವಾರದಲ್ಲಿ ಸಂಧಾನ ಪ್ರಕ್ರಿಯೆ ಶುರುವಾಗಬೇಕು ಹಾಗೂ 2 ತಿಂಗಳ ಒಳಗೆ ಸಂಧಾನ ಪ್ರಕ್ರಿಯೆ ಅಂತ್ಯವಾಗಬೇಕು. ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಸಂಧಾನ ಮಾತುಕತೆ ನಡೆಸಿ ಇನ್ನೊಂದು ತಿಂಗಳಲ್ಲಿ ಸಂಧಾನದ ಫಲಶೃತಿ ಬಗ್ಗೆ ನಮಗೆ ಹೇಳಬೇಕು ಎಂದು ಖಲೀಫುಲ್ಲಾ ಸಂಧಾನಕಾರರ ತಂಡಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸೂಚಿಸಿದೆ. ಸಂಧಾನಕಾರರನ್ನು ನೇಮಿಸುವ ಸಂಬಂಧ ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದು ಕೇವಲ ಭೂ ವಿವಾದ ಮಾತ್ರವಲ್ಲ. ಜಾತಿ ಧರ್ಮಗಳ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಇತಿಹಾಸವನ್ನು ನಾವು ಬದಲಿಸಲು ಆಗಲ್ಲ. ಸದ್ಯ ಇರೋ ವಿವಾದವನ್ನು ನಾವು ಪರಿಗಣಿಸಬೇಕಾಗುತ್ತೆ. ಸಮಸ್ಯೆ ಬಗೆಹರಿಸಬೇಕಾಗುತ್ತೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರು.

ಏನಿದು ವಿವಾದ:

1992ರಲ್ಲಿ ಉತ್ತರಪ್ರದೇಶದ ಫೈಸಾಬಾದ್‍ನಲ್ಲಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣವಾದ ವೇಳೆ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ಅದರಲ್ಲಿ 2.77 ಎಕರೆ ಭೂಮಿಯು ವಿವಾದಕ್ಕೆ ಕಾರಣವಾಗಿದೆ. ಈ ಭೂಮಿಯು ತನಗೆ ಸೇರಬೇಕೆಂದು ವಾರಸುದಾರರಾದ ರಾಮಜನ್ಮಭೂಮಿ ನ್ಯಾಸ್ ಟ್ರಸ್ಟ್ ಅಲಹಾಬಾದ್ ಹೈಕೋರ್ಟ್‍ನಲ್ಲಿ ದಾವೆ ಹೂಡಿತ್ತು.

Also read: ಪೌರ ಕಾರ್ಮಿಕರ ಕಾಲು ತೊಳೆದಿದ್ದು ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿದವರಿಗೆ ಇದನ್ನು ತೋರಿಸಿ, ಪೌರ ಕಾರ್ಮಿಕರಿಗೆ ಮೋದಿ ತಮ್ಮ ಸ್ವಂತ ಉಳಿತಾಯದಿಂದ 21 ಲಕ್ಷ ದೇಣಿಗೆ ನೀಡಿ ಅವರು ಮಹಾನ್ ನಾಯಕ ಅನ್ನೋದನ್ನ ಸಾಬೀತು ಮಾಡಿದ್ದಾರೆ!

ಏನಿದು ಆದೇಶ?

ಸುಪ್ರಿಂ ಕೋರ್ಟ್ ಆದೇಶದಂತೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದಲ್ಲಿ ಸಂಧಾನ ನಡೆಯಲಿದ್ದು, ಸಂಧಾನ ಪ್ರಕ್ರಿಯೆ ರಹಸ್ಯವಾಗಿರಬೇಕು. ಯಾವುದೇ ಕಾರಣಕ್ಕೂ ಸೋರಿಕೆಯಾಗಬಾರದು ಎಂದು ಸುಪ್ರೀಂ ಆದೇಶ ನೀಡಿದೆ. ಮೂವರು ಸಂಧಾನಕಾರರ ಹೆಸರನ್ನು ಈಗಾಗಲೇ ಅಖಿಲ ಭಾರತ ಹಿಂದೂ ಮಹಾಸಭಾ ಶಿಫಾರಸು ಮಾಡಿದೆ. ಮಾಜಿ ಸಿ.ಜೆ.ಐ ನ್ಯಾ. ದೀಪಕ್ ಮಿಶ್ರಾ, ನ್ಯಾ. ಜೆ. ಎಸ್ ಖೆಹರ್, ಹಾಗೂ ನ್ಯಾ. ಎ.ಕೆ ಪಟ್ನಾಯಕ್ ಹೆಸರನ್ನು ಕೊಟ್ಟಿದೆ. ಆದ್ರೆ ನಿರ್ಮೋಹಿ ಅಖಾಡದಿಂದ ಇನ್ನು ಕೂಡ ಮೂವರ ಹೆಸರು ಶಿಫಾರಸು ಆಗಬೇಕಾಗಿದೆ. ಹೀಗಾಗಿ ಒಟ್ಟು ಆರು ಮಂದಿಯ ನೇತೃತ್ವವನ್ನು ಖಲೀಫುಲ್ಲಾ ವಹಿಸಿಕೊಳ್ಳಲಿದ್ದಾರೆ.

ಸಂಧಾನಕ್ಕೆ ವಿರೋಧ?

ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ರಾಜು ಧವನ್ ನ್ಯಾಯಾಲಯ ಪ್ರಸ್ತಾಪಿಸಿರುವಂತೆ ಸಂಧಾನಕಾರರನ್ನು ನೇಮಿಸುವುದಾದರೆ ನಮ್ಮ ಕಕ್ಷಿದಾರರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ. ನ್ಯಾಯಾಲಯ ಏನೇ ತೀರ್ಪು ನೀಡಿದರೂ ಅದನ್ನು ಸ್ವಾಗತಿಸುವುದಾಗಿ ಹೇಳಿದ್ದರು. ಆದರೆ ಹಿಂದೂ ಮಹಾಸಭಾ ಪರ ವಕೀಲ ಸಿ.ಎಸ್.ವೈದ್ಯನಾಥನ್, ರಾಮಜನ್ಮಭೂಮಿ ಪ್ರಕರಣವು ಸಂಧಾನೇತರ ವಿಷಯ.

Also read: ಕೇಂದ್ರದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ, ಕರ್ನಾಟಕದ ರಿಮೋಟ್ ಮುಖ್ಯಮಂತ್ರಿ ಥರ ಪ್ರಧಾನಿಯೂ ಇರಬೇಕಾಗುತ್ತೆ; ದೇಶದ ಹಿನ್ನೆಡೆ ಆಗಲಿದೆ : ಮೋದಿ

ಇದು ಹಿಂದೂಗಳ ಭಾವನಾತ್ಮಕ ವಿಷಯ. ಬೇಕಿದ್ದರೆ ನಾವೇ ಎಲ್ಲರೂ ಹಣ ಹೂಡಿ ಬೇರೊಂದು ಜಾಗದಲ್ಲಿ ಮಸೀದಿ ಕಟ್ಟಲು ಸಹಕರಿಸುತ್ತೇವೆ. ಆದರೆ ಮಧ್ಯಸ್ಥಿತಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಅಂತಿಮವಾಗಿ ನ್ಯಾಯಾಲಯವೇ ಸಂಧಾನಕಾರರನ್ನು ನೇಮಿಸಲು ಆದೇಶ ನೀಡಿರುವುದರಿಂದ ಸಮಸ್ಯೆ ಈಗಲಾದರೂ ಇತ್ಯರ್ಥವಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ