ಅಯೋಧ್ಯೆ ತೀರ್ಪು ಶನಿವಾರವೇ ಪ್ರಕಟಿಸಿದ್ದು ಯಾಕೇ? ಈ ವಿವಾದ ಶುರುವಾಗಿದ್ದು ಹೇಗೆ, ತೀರ್ಪು ಪ್ರಕಟಿಸಿದ ಐದು ಜಡ್ಜ್​ಗಳ ಯಾರು ಗೊತ್ತಾ??

0
260

ಇಂದು ಸುಪ್ರಿಂಕೋರ್ಟ್ ತೀರ್ಪು ನೀಡಿದ ಅಯೋಧ್ಯೇ ವಿವಾದದ ಇತಿಹಾಸ ಏನು? ಮತ್ತು ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐದು ಜಡ್ಜ್​ಗಳ ಯಾರು. ಈ ವಿವಾವ ಹೇಗೆ ಶುರುವಾಯಿತು ಎನ್ನುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯವಾಗಿದ್ದು. ಅದರಲ್ಲಿ ಸಾಧಾರಣವಾಗಿ ಸುಪ್ರೀಂ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸುವುದಿಲ್ಲ. ಆದರೆ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಪ್ರಕಟಿಸಿರುವುದು ಯಾಕೇ ಎನ್ನುವ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದ್ದು ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಹೌದು ಇದೇ ತಿಂಗಳ 17ರಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ನವೆಂಬರ್​ 17ರಂದು ತೀರ್ಪು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಇಂದೇ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ. 1528 – ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ನಿಂದ ಮಸೀದಿ ನಿರ್ಮಾಣ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಿದ ಎಂಬುದು ಆರೋಪ. 1853 – ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಹಿಂದೂ ಮುಸಲ್ಮಾನರ ನಡುವೆ ಮೊಟ್ಟ ಮೊದಲ ಕೋಮು ಗಲಭೆ ಅಯೋಧ್ಯೆಯಲ್ಲಿ ದಾಖಲಾಯಿತು.

ಸೆಪ್ಟೆಂಬರ್ 27, 2018 – ಮುಸ್ಲಿಂ ಧರ್ಮೀಯರು ನಮಾಜು ಮಾಡಲು ಮಸೀದಿಯೇ ಬೇಕಿಲ್ಲ. ಬಯಲು ಪ್ರದೇಶದಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ 1994ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿತ್ತು. ಮಾ. 08, 2019- ಅಯೋಧ್ಯ ವಿವಾದ ಬಗೆಹರಿಸಲು ಮಧ್ಯಸ್ಥಿಕೆಗಾಗಿ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಕಲೀಫುಲ್ಲಾ ನೇತೃತ್ವದಲ್ಲಿ ಮೂರು ಮಂದಿಯ ಸಮಿತಿ ರಚನೆ. ಆದರೆ ವಿಫಲವಾಯಿತು ಆದರೆ ಇಂದು ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಪ್ರಕಟಿಸಿದ್ದು ಐದು ಜನರ ಯಾರು ಎನ್ನುವುದು ಇಲ್ಲಿದೆ.

1. ರಂಜನ್​ ಗೋಗೋಯ್​:

ಗೋಗೋಯ್​ ನವೆಂಬರ್​ 18, 1954ರಂದು ಜನಿಸಿದ್ದರು. ಗೋಗೋಯ್​ ತಂದೆ ಕೆಸಬ್​ ಚಂದ್ರ ಗೋಗೋಯ್​ ಕಾಂಗ್ರೆಸ್​ನಲ್ಲಿ ಸೇವೆ ಸಲ್ಲಿಸಿದವರು. 1982ರಲ್ಲಿ ಕೆಸಬ್​ 2 ತಿಂಗಳು ಕಾಲ ಅಸ್ಸಾಂ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.

2. ಜಸ್ಟೀಸ್ ಎಸ್ ಎ ಬೋಬ್ಡೆ:

ಜಸ್ಟೀಸ್ ಶಾರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್ ನ ಮುಂದಿನ ನೂತನ ಸಿಜೆಐ. ಇವರು 2000ನೇ ಇಸವಿಯಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ಜಡ್ಜ್ ಆಗಿ ಸೇರ್ಪಡೆಗೊಂಡಿದ್ದರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2013ರಲ್ಲಿ ಇವರು ಸುಪ್ರೀಂಕೋರ್ಟ್​​ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

3. ಜಸ್ಟೀಸ್ ಡಿವೈ ಚಂದ್ರಚೂಡ್:

ಧನಂಜಯ ಯಶ್ವಂತ್​ ಚಂದ್ರಚೂಡ್​ 1959ರಲ್ಲಿ ಜನಿಸಿದ್ದರು. ಇವರು ಮೊದಲು ಬಾಂಬೇ ಹೈಕೋರ್ಟ್​​ನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಅಲಹಾಬಾದ್​ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಹಾಲಿ ಸುಪ್ರೀಂಕೋರ್ಟ್​ ಜಡ್ಜ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

4. ಎನ್​.ವಿ ರಮಣ:

ಎನ್.​ವಿ ರಮಣ ಮೂಲತಃ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯವರು. ಇವರು ಆಗಸ್ಟ್​ 27, 1957ರಂದು ಜನಿಸಿದ್ದರು. ದೆಹಲಿ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಇವರು 2013-14ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಇವುರ ಸುಪ್ರೀಂ ಕೋರ್ಟ್​ ಜಡ್ಜ್​ ಆಗಿ ಬಡ್ತಿ ಪಡೆದಿದ್ದರು.

5. ಯು.ಯು ಲಲಿತ್​:

ಉಮೇಶ್​ ಯು.ಯು ಲಲಿತ್​ 1957 ನವೆಂಬರ್​ 9ರಂದು ಜನಿಸಿದರು. ಇವರು ನೇರವಾಗಿ ಸುಪ್ರೀಂಕೋರ್ಟ್​ ಜಡ್ಜ್​ ಆಗಿ ಮುಂಬಡ್ತಿ ಪಡೆದುಕೊಂಡಿದ್ದರು.

Also read: ರಾಮಜನ್ಮಭೂಮಿ ಜಮೀನು ರಾಮನ ಪಾಲು; ಅಯೋಧ್ಯೆ ವಿವಾದಾತ್ಮಕ ಸ್ಥಳದಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್‍ ತೀರ್ಪು.!