ನೋಟು ರದ್ದಿನಿಂದ ಬೀದಿ ಜಗಳ ನೋಡುವಂತಾಗಿದೆ: ಸುಪ್ರೀಂಕೊರ್ಟ್ ಕಳವಳ

0
620

ನವದೆಹಲಿ: ೫೦೦ ಮತ್ತು ೧೦೦೦ ನೋಟುಗಳ ರದ್ದು ಆದೇಶದಿಂದ ಜನರು ಬೀದಿಯಲ್ಲಿ ನಿಂತು ಕಿತ್ತಾಡುವು ದನ್ನು ನೋಡುವಂತಾಗಿದೆ. ಇದು ಅತ್ಯಂತ ಗಂಭೀರ ಸಮಸ್ಯೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನೋಟು ರದ್ದು ಪ್ರಶ್ನಿಸಿ ವಿಚಾರಣೆ ನಡೆಸುಯ್ತಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ಈ ದೂರು ಸಮಸ್ಯೆಯ ಆಳವನ್ನು ಪರಿಚಯಿಸುತ್ತಿದೆ ಎಂದಿದ್ದಾರೆ.

೫೦೦ ಮತ್ತುವ೧೦೦೦ ರೂ. ನೋಟು ರದ್ದುಪಡಿಸಿದ್ದೀರಿ. ಹಾಗಾದರೆ ೧೦೦ ನೋಟುಗಳ ಗತಿಯೇನು? ಎಂದು ೧೦ ದಿನಗಳಿಂದ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವ ಜನರ ಗತಿಯೇನು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮಗಳನ್ನು ಪ್ರಶ್ನಿಸಿದ ಹಣ ಪಡೆಯುವ ಮೊತ್ತವನ್ನು ಮತ್ರೆ ಕಡಿಮೆ ಮಾಡಿದ್ದೀರಿ? ಯಾಕೆ ಮುದ್ರಣ ಸಮಸ್ಯೆಯೇ ಎಂದು ನ್ಯಾಯಮುರ್ತಿಗಳು ಕೇಳಿದರು.

ಇದೇ ವೇಳೆ ೨೦೦೦ ಮುಖಬೆಲೆಯ ಹೊಸ ನೋಟುಗಳು ನೀರಿನಲ್ಲಿ ಬಣ್ಣ ಕಳೆದುಕೊಳ್ಳುತ್ತಿವೆ. ಇದರರ್ಥ ಏನು? ಈ ಸಣ್ಣಪುಟ್ಟ ವಿಷಯಗಳನ್ನೂ ಗಮನಿಸಿಲ್ಲವೇ ಎಂದು ಪ್ರಶ್ನಿಸಿದರು.