ದೇಶದಲ್ಲಿ ಮೊದಲ ಬಾರಿಗೆ ‘ಹೂಸು ಬಿಡುವ ಸ್ಪರ್ಧೆ’; ಗೆದ್ದವರಿಗಿದೆ ಭಾರಿ ಬಹುಮಾನ, ನೀವೂ ಭಾಗವಹಿಸಬಹುದು ಹೇಗೆ ಅಂತ ಈ ಮಾಹಿತಿ ನೋಡಿ.!

0
658

ಇತ್ತೀಚಿನ ದಿನಗಳಲ್ಲಿ ಮನರಂಜನೆಗಾಗಿ ಹಲವು ಸ್ಪರ್ಧೆಗಳು ನಡೆಯುತ್ತಿದ್ದು, ಅಂತಹ ಸ್ಪರ್ಧೆಯ ಬಗ್ಗೆ ಕೇಳಿದರೆ ಮುಜುಗರ ಅನಿಸುತ್ತೆ, ಆದರು ಅವುಗಳಲ್ಲಿ ಸ್ಪರ್ಧಿಸುವ ಜನರು ಕೂಡ ಹೆಚ್ಚಾಗಿರುತ್ತಾರೆ. ಅಂತಹದೇ ಒಂದು ವಿಚಿತ್ರ ಸ್ಪರ್ಧೆಯನ್ನು ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಇದಕ್ಕೆ ನೀವೂ ಕೂಡ ಭಾಗವಹಿಸಿ ಬಹುಮಾನ ಗೆಲ್ಲಬಹುದು. ಅಂತಹ ವಿಚಿತ್ರ ಸ್ಪರ್ಧೆಯಾದರು ಯಾವುದು ಅಂತ ಅಂದರೆ. ಹೂಸು ಬಿಡುವ ಸ್ಪರ್ಧೆಯಾಗಿದ್ದು ಇದು ಅಪರೂಪವಾಗಿದೆ. ಇದರಲ್ಲಿ ಗೆದ್ದವರಿಗೆ ಹಲವು ಬಹುಮಾನಗಳನ್ನು ಕೂಡ ಕೊಡಲಾಗುತ್ತಿದೆ.

Also read: 45 ವರ್ಷಗಳಿಂದ ಪ್ರತಿನಿತ್ಯ 1 KG ಗಾಜು ತಿನ್ನುತ್ತಾ ಆರೋಗ್ಯವಾಗಿರುವ ಈ ವ್ಯಕ್ತಿಯನ್ನು ನೋಡಿದ್ರೆ ನಿಮಗೆ ಆಶ್ಚರ್ಯವಾಗುತ್ತೆ!!

ಹೂಸು ಬಿಡುವ ಸ್ಪರ್ಧೆ?

ಹೌದು ಯಾರಾದರು ಗ್ಯಾಸ್ ಬಿಟ್ಟರೆ ಅವರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕುವುದು ನೋಡಿರುತ್ತೀರ. ಇಂತಹ ನಗೆ ಪಾಟಿಕ್ಕೆಗೆ ನೀವೂ ಕೂಡ ಹಲವು ಭಾರಿ ಸಿಲುಕಿರುತ್ತಿರಾ. ಅದೇ ಈಗ ಸ್ಪರ್ಧೆಯಾಗಿದ್ದು ಭಾರಿ ವೈರಲ್ ಆಗಿದೆ. ಆದರೆ ಇಂತಹ ಸ್ಪರ್ಧೆ ನಡೆಸುವ ಐಡಿಯಾ ಯಾರಿಗೆ ಬರುತ್ತೋ ಎಂದು ತಮಾಷೆ ಮಾಡಿಕೊಂಡು ನಗಬಹುದು. ಹಾಗೆಯೇ ಛೀ ಇನ್ನೂ ಯಾವ್ಯಾವ ಸ್ಪರ್ಧೆ ಮಾಡುತ್ತಾರೋ ಎಂದು ಅಚ್ಚರಿ ಕೂಡ ಆಗುತ್ತೆ. ಹಿಂದೆಂದೂ ಮಾಡಿರದ ಹೂಸು ಬಿಡುವ ವಿಚಿತ್ರ ಸ್ಪರ್ಧೆಯನ್ನು ಆಯೋಜಿಸಿರುವುದು ಎಲ್ಲಡೆ ಭಾರೀ ಚರ್ಚೆ ಆಗುತ್ತಿದೆ. ಈ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸಲಾಗುತ್ತಿದೆ.

ಎಲ್ಲಿ ಈ ವಿಚಿತ್ರ ಸ್ಪರ್ಧೆ ?

Also read: ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಅತಿಯಾಗಿ ಪ್ರೀತಿಸುವ ಗಂಡನಿಂದ ಡೈವರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ..

ಹೂಸು ಬಿಡುವವರಿಗಾಗಿಯೇ `ವಾಟ್ ದಿ ಫಾರ್ಟ್’ ಸ್ಪರ್ಧೆಯನ್ನು ಸೂರತ್‍ನಲ್ಲಿ ನಡೆಯಲಿದೆ. ಸೆ.22ರ ಭಾನುವಾರದಂದು ಈ ವಿಚಿತ್ರ ಸ್ಪರ್ಧೆ ನಡೆಯಲಿದ್ದು, ಸೂರತ್ ನಿವಾಸಿ ಯತೀನ್ ಸಂಗೋಯಿ ಮತ್ತು ಮೌಲ್ ಸಂಘ್ವೀ ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಇದರಲ್ಲಿ ಹಲವು ನಿಯಮಗಳು ಕೂಡ ಇದ್ದು, ದೊಡ್ಡದಾಗಿ, ಸುದೀರ್ಘವಾಗಿ ಭಾರೀ ಸದ್ದು ಮಾಡುತ್ತ ಹೂಸು ಬಿಡುವವರಿಗೆ ಇಲ್ಲಿ ಗೆಲ್ಲುವ ಅವಕಾಶವಿದೆ. ಇಂತಹ ವಿಚಾರದ ಹಿಂದೆ ದೊಡ್ಡ ಕಾರಣವೇ ಇದ್ದು ಈ ರೀತಿಯೂ ಒಂದು ಸ್ಪರ್ಧೆ ಮಾಡುವ ವಿಚಾರ ನಿಮ್ಮ ತಲೆಗೆ ಹೇಗೆ ಹೊಳಿಯಿತು ಎಂದು ಕೇಳಿದರೆ ಆಯೋಜಕ ಸಿಂಗೋಯಿ ವಿಚಿತ್ರ ಉತ್ತರ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಕುಟುಂಬದವರೊಂದಿಗೆ ಸಿನಿಮಾ ನೋಡುತ್ತಾ ಕುಳಿತಿದ್ದೆ. ಆಗ ನಾನು ಒಂದು ದೊಡ್ಡ ಹೂಸು ಬಿಟ್ಟಿದ್ದಕ್ಕೆ ಎಲ್ಲರೂ ನಕ್ಕು, ತಮಾಷೆ ಮಾಡಿದರು. ಆಗಲೇ ಈ ಸ್ಪರ್ಧೆ ಮಾಡುವ ಐಡಿಯಾ ಹೊಳೆದಿದ್ದು. ಹೀಗೊಂದು ಸ್ಪರ್ಧೆ ಮಾಡಿದರೆ ಹೇಗೆ? ನಾನು ಅದರಲ್ಲಿ ಗೆಲ್ಲಬಹುದಲ್ಲವೇ? ಎಂದು ಅನಿಸಿತು. ಅಲ್ಲದೆ ಭಾರತದಲ್ಲಿ ಹಿಂದೆದೂ ಇಂಥದ್ದೊಂದು ಸ್ಪರ್ಧೆ ಮಾಡಿಲ್ಲ, ಅದಕ್ಕೆ ನಾವು ಮಾಡೋಣ ಎಂದು ಆಯೋಜನೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ಸ್ಪರ್ಧೆ ನಿಯಮ?

ಈ ಸ್ಪರ್ಧೆ ಮೂರು ರೀತಿಯಲ್ಲಿ ಸ್ಪರ್ಧೆ ನಡೆಯಲಿದೆ. ಸುದೀರ್ಘವಾಗಿ, ದೊಡ್ಡದಾಗಿ, ಸಂಗೀತಮಯ ಹೀಗೆ ಮೂರು ರೀತಿ ಇರುತ್ತದೆ. ಇದರಲ್ಲಿ ಗೆದ್ದ ಮೂವರನ್ನು ವಿಜೇತರು ಎಂದು ಘೋಷಿಸಿ, ಬಹುಮಾನ ನೀಡಲಾಗುತ್ತದೆ. ಪ್ರತಿಯೊಬ್ಬ ಸ್ಪರ್ಧಿಗೂ 60 ಸೆಕೆಂಡ್ ಸಮಯ ನೀಡಲಾಗುತ್ತೆ. ಈ ಸಮಯದಲ್ಲಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು. ಇಲ್ಲಿ ಸ್ಪರ್ಧಿಗಳು ಹೂಸು ಬಿಡಲು ಸ್ವಾತಂತ್ರರು ಎಂದಿದ್ದಾರೆ. ಒಂದು 30 ವರ್ಷದ ಹಿಂದೆಲ್ಲಾ ಜನರು ಆರಾಮಾಗಿ, ಯಾವುದೇ ಹಿಂಜರಿಕೆ ಇಲ್ಲದೆ ಹೂಸು ಬಿಡುತ್ತಿದ್ದರು. ಆದರೆ ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ಜನರು ಹೂಸು ಬಿಡಲು ಅಂಜುತ್ತಿದ್ದಾರೆ. ಹೂಸು ಬಿಟ್ಟವರನ್ನು ಜನರು ಅಪಹಾಸ್ಯ ಮಾಡಿ ರೇಗಿಸುತ್ತಾರೆ. ಆದ್ದರಿಂದ ಜನರು ಆರಾಮಾಗಿ ನಿಶ್ಚಿಂತೆಯಿಂದ ಹೂಸು ಬಿಡುವುದಕ್ಕಾಗಿ ಈ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಪರ್ಧೆಯ ನಿರ್ಣಾಯ ಹೇಗೆ?

Also read: ವಿಮಾನಕ್ಕೆ ಹಕ್ಕಿಗಳ ಹಿಂಡೊಂದು ಡಿಕ್ಕಿ; ಮೆಕ್ಕೆಜೋಳದ ಹೊಲದಲ್ಲಿ ತುರ್ತು ಲ್ಯಾಂಡ್ 233 ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್!!

ಈ ಗೇಮ್-ನಲ್ಲಿ ಹಾಸ್ಯಗಾರ ದೇವಾಂಗ್ ರಾವಲ್ ಸ್ಥಳೀಯ ವೈದ್ಯರು ತೀರ್ಪುಗಾರರಾಗಿ ಬರಲಿದ್ದಾರೆ. ಗೆದ್ದವರಿಗೆ ಟ್ರೋಫಿಯೊಂದಿಗೆ 5 ಸಾವಿರ ರೂ.ಗಳಿಂದ 15 ಸಾವಿರ ರೂ.ವರೆಗೆ ನಗದು ಬಹುಮಾನ ಕೊಡಲಾಗುತ್ತದೆ. ಈವರೆಗೆ 50 ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿದ್ದಾರೆ. ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು 100 ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ.