ಭಾರತ ನಡೆಸಿದ ಬಾಲಕೋಟ್ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರ ಹತ್ಯೆ ಒಪ್ಪಿಕೊಂಡ ಪಾಕ್ ಸೇನಾಧಿಕಾರಿ; ದಾಳಿಯ ಸಾಕ್ಷ್ಯವನ್ನು ಬಿಡುಗಡೆ ಮಾಡಿದ ಉಪಗ್ರಹ..

0
252

ಪುಲ್ವಾಮ ದಾಳಿಯ ಪ್ರತಿಕಾರವಾಗಿ ಬಾಲಾಕೋಟ್ ಜೈಷ್-ಎ-ಇ- ಮೊಹಮದ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವಾಯು ದಾಳಿಗೆ ಸುಮಾರು 260 ಕ್ಕೂ ಹೆಚ್ಚು ಉಗ್ರರು ನಿರ್ನಾಮವಾಗಿದ್ದಾರೆ ಎಂದು ಸುದ್ದಿ ಹರಡಿತ್ತು ಇದಕ್ಕೆ ಮೊದ ಮೊದಲು ಒಪ್ಪದ ಪಾಕ್ ಭಾರತದ ದಾಳಿಗೆ ಯಾವುದೇ ಪ್ರಾಣಹಾನಿ ಆಗಿಲ್ಲ ಯಾವುದೇ ಉಗ್ರರು ಇರಲಿಲ್ಲ, ಇಲ್ಲಿ ಪರಿಸರ ನಾಶವಾಗಿದೆ ಅಷ್ಟೇ ಎಂದು ಹೇಳಿಕೆ ನೀಡಿತ್ತು. ಇದಕ್ಕೆ ಸರಿಯಾದ ಸಾಕ್ಷಿಯಿಲ್ಲದ ಕಾರಣ ಭಾರತವು ಕೂಡ ಸುಮ್ಮನಾಗಿತ್ತು. ಈಗ ಪಾಕಿಸ್ತಾನದಿಂದಲೇ ಹರಡುತ್ತಿರುವ ಮಾಹಿತಿಯಂತೆ 200 ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಎಂದು ತಿಳಿಸುತ್ತಿದೆ.

Also read: ಭಾರತ ಪಾಕ್-ನಲ್ಲಿ ನಡೆಸಿದ ದಾಳಿಯ ಸಾಕ್ಷಿ ನಾಶ ಮಾಡಿದ್ದ ಪಾಕ್, ಈಗ ಹೊರಬಿದ್ದಿದೆ ಸತ್ಯ.. ಇನ್ಮೇಲಾದ್ರೂ ನಮ್ಮ ಯೋಧರ ಮೇಲೆ ಅನುಮಾನ ಪಡೋದು ಬಿಡ್ತಾರಾ??

ಹೌದು ಬಾಲಾಕೋಟ್ ಜೈಷ್-ಎ-ಇ- ಮೊಹಮದ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವಾಯು ದಾಳಿಗೆ ಸಾಕ್ಷಿಯಾಗಿ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿದೆ. ಬಾಲಾಕೋಟ್ ಉಗ್ರ ನೆಲೆಗಳ ಮೊದಲಿನ ಚಿತ್ರಗಳು ಮತ್ತು ಐಎಎಫ್ ವಾಯು ದಾಳಿ ನಡೆಸಿದ ನಂತರದ ದಿನಗಳ ಚಿತ್ರಗಳನ್ನು ವಿದೇಶಿ ಉಪಗ್ರಹಗಳು ಸೆರೆ ಹಿಡಿದಿದ್ದು, ಅವು ಈಗ ಬಹಿರಂಗಗೊಂಡಿವೆ. ಭಾರತದ ವಾಯು ದಾಳಿಯಿಂದ ಪಾಕಿಸ್ತಾನದ ತರಬೇತಿ ನಿರತ ಉಗ್ರರು ಮತ್ತು ಕುಖ್ಯಾತ ಭಯೋತ್ಪಾದಕರ ವಸತಿಗೃಹಗಳು, ಅತಿಥಿ ಗೃಹ , ಶಸ್ತ್ರಾಸ್ತ್ರಗಾರ ಹಾಗೂ ಇತರ ಎರಡು ಕಟ್ಟಡಗಳು ನೆಲಸಮವಾಗಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ.

ಉಪಗ್ರಹ ಸಾಕ್ಷಿಗಳು;

Also read: 300 ರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಲು ಏರ್ ಸರ್ಜಿಕಲ್ ಸ್ಟ್ರೈಕ್ ದಾಳಿಯ ಪ್ಲಾನ್ ಹೀಗಿತ್ತು ಗೊತ್ತಾ?

ಬಾಲಾಕೋಟ್ ಉಗ್ರ ನೆಲೆಯ ಉತ್ತರಕ್ಕೆ ಮರಗಳಿಂದ ಆವೃತಗೊಂಡಿದ್ದ ಕಟ್ಟಡಗಳು ದಾಳಿಯ ನಂತರ ಮಾ.4ರಂದು ತೆಗೆದ ಉಪಗ್ರಹ ಚಿತ್ರದಲ್ಲಿ ಕಾಣಿಸುತ್ತಿಲ್ಲ. ಈ ಜಾಗದಲ್ಲಿ ಕಪ್ಪು ಮಣ್ಣಿನಿಂದ ಆವೃತವಾದ ಅವಶೇಷಗಳು ಪತ್ತೆಯಾಗಿವೆ ಅಲ್ಲದೆ ಉಗ್ರರ ಹಾಸ್ಟೆಲ್, ಹಿರಿಯ ಉಗ್ರರ ಕೊಠಡಿಗಳು ಬಾಂಬ್ ದಾಳಿಯಿಂದ ಛಿದ್ರಗೊಂಡಿವೆ ಎಂದು ಮೂಲಗಳು ತಿಳಿಸಿವೆ. ದಾಳಿಯ ಸಂದರ್ಭದಲ್ಲಿ 265 ಉಗ್ರರು ಮತ್ತು ತರಬೇತಿ ನಿರತ ಉಗ್ರಗಾಮಿಗಳು ಆ ಸ್ಥಳದಲ್ಲಿದ್ದರು. ಈ ಮೂಲಕ ವಾಯು ದಾಳಿಯಲ್ಲಿ ಒಂದು ಕಟ್ಟಡವೂ ನೆಲಸಮಗೊಂಡಿಲ್ಲ ಎಂಬ ಪಾಕ್ ವಾದ ಪೊಳ್ಳು ಎಂಬುದು ತಿಳಿದಿದೆ.

ಉಗ್ರರ ಸತ್ತಿದು ನಿಜವೆಂದ ಪಾಕ್ ಸೇನಾಧಿಕಾರಿ;

ಪಾಕ್ ಏನೇ ಸುಳ್ಳು ಮಾಹಿತಿ ನೀಡಿದರು ಅದಕ್ಕೆ ಸರಿಯಾದ ಸಾಕ್ಷಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನ ತನ್ನ ನೆಲದ ಉಗ್ರಗಾಮಿ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯನ್ನು ಮತ್ತು ಈ ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿರುವುದನ್ನು ಒಪ್ಪಿಕೊಂಡಿದೆ. ನಿನ್ನೆ ತಾನೇ ಅಮೆರಿಕ ಮೂಲದ ಕಾರ್ಯಕರ್ತ ಪ್ರಸ್ತುತ ಗಿಲ್ಗಿಟ್ ನಲ್ಲಿ ನೆಲೆಸಿರುವ ಸೆನೆಜ್ ಹಸ್ನಾನ್ ಈ ಸಂಬಂಧ ವಿಡಿಯೋ ಒಂದನ್ನು ಟ್ವೀಟ್ ಮಾಡಿ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿಯೊಬ್ಬರು ಬಾಲಕೋಟ್ ನಲ್ಲಿ 200ಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ದಾಳಿ ಸತ್ಯವೆಂದ ಸಾಕ್ಷಿಗಳು;

ಜೈಶ್ ಸಂಘಟನೆ ಬಾಲಕೋಟ್ ನಲ್ಲಿ ಮದರಸಾ ನಡೆಯುತಿತ್ತು ಎನ್ನುವುದನ್ನು ಒಪ್ಪಿಕೊಂಡಿದೆ. ದಾಳಿ ನಡೆದ ನಂತರ ಮೃತಪಟ್ಟ ಉಗ್ರರ ದೇಹಗಳನ್ನು ಮರು ದಿನ ಖೈಬರ್ ಪಖ್ತೂಕ್ವಾ ಮತ್ತು ಬುಡಕಟ್ಟು ಜನ ವಾಸಿಸುವ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳಿಯ ಉರ್ದು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ದಾಳಿ ನಡೆಯದೇ ಇದ್ದಲ್ಲಿ ಇದೂವರೆಗೆ ದೇಶದ ಮಾಧ್ಯಮಗಳನ್ನು ಮತ್ತು ವಿದೇಶಿ ಮಾಧ್ಯಮಗಳನ್ನು ಸ್ಥಳಕ್ಕೆ ತೆರಳಲು ಅನುಮತಿ ನೀಡಿಲ್ಲ ಇದನ್ನೇ ನೋಡಿದರೆ ತಿಳಿಯುತ್ತೆ. ಪಾಕಿಸ್ತಾನದ ಹುಚ್ಚಾಟ ಹೇಗಿದೆ ಅಂತ. ಒಟ್ಟಾರೆಯಾಗಿ ಭಾರತ ಬಾಲಕೋಟ್ ಮೇಲೆ ನಡೆಸಿದ ದಾಳಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ.

@indiatoday