ಉಗ್ರರ ಮತ್ತೊಂದು ಉರಿ ದಾಳಿ ವಿಫಲಗೊಳಿಸಿದ ಸೇನೆ

0
619

ಮತ್ತೊಂದು ಉರಿ ದಾಳಿ ಯತ್ನ. ವಿಫಲಗೊಳಿಸಿದ ಸೇನೆಗೆ ಸಿಕ್ಕಿದ್ದು ಭಾರೀ ಶಸ್ತ್ರಾಸ್ತ್ರ

ಸರ್ಜಿಕಲ್ ದಾಳಿಗೆ ತಿರುಗೇಟು ನೀಡಲು ಭಾರತಕ್ಕೆ ೧೦೦ ಉಗ್ರರನ್ನು ರವಾನಿಸುವ ಪಾಕಿಸ್ತಾನದ ಮೊದಲ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಶುಕ್ರವಾರ ಮುಂಜಾನೆ ೫ ಗಂಟೆ ಸುಮಾರಿಗೆ ಜಮ್ಮುವಿನ ಕುಪ್ವಾರ ಜಿಲ್ಲೆಯ ಭಾರತೀಯ ಸೇನಾ ನೆಲೆಯ ಮೇಲೆ ದಾಳಿಗೆ ಯತ್ನಿಸಿದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಮುಂಜಾನೆ ೫ ಗಂಟೆಗೆ ಕುಪ್ವಾರ ಜಿಲ್ಲೆಯ ಲಂಗಟೆ ಎಂಬಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದರು. ಪ್ರತಿದಾಳಿ ನಡೆಸಿದ ಯೋಧರು ಅವರ ಯತ್ನ ವಿಫಲಗೊಳಿಸಿದರು.

Pathankot: Border Security Force (BSF) soldiers patrol the border fence at Bamial border in Pathankot on Monday. The security has been beefed up in the wake of the recent attacks. PTI Photo (PTI1_4_2016_000243B)

ಉಗ್ರರ ಬಳಿ ಔಷಧ ಪತ್ತೆಯಾಗಿದ್ದು, ಇದರ ಮೇಲೆ ಪಾಕ್ ಮಾರುಕಟ್ಟೆಯ ವಿಳಾಸ ಇದೆ. ಅಲ್ಲದೆ ಅವರ ಬಳಿ ಇದ್ದ ಭಾರತೀಯ ಕರೆನ್ಸಿ ಹಾಗೂ ಡೈರಿಯಲ್ಲಿ ಉರ್ದುವಿನಿಂದ ಬರೆದ ಮಾಹಿತಿಗಳು ಲಭ್ಯವಾಗಿದೆ ಎಂದು ಸೇನಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.