Surgical Strike ನಡೆದಿಲ್ಲ ಎಂದು ಅನುಮಾನ ವ್ಯಕ್ತಪಡಿಸುತ್ತಿರುವವರ ಬಾಯಿ ಮುಚ್ಚಿಸಿದ ಮೋದಿ..!!

0
1211

ಭಾರತೀಯ ಸೇನೆ ನಡೆಸಿದ್ದ Surgical Strike ಬಗ್ಗೆ ಹಲವಾರು ರಾಜಕೀಯ ಪಕ್ಷಗಳು ಪುರಾವೆ ಕೇಳಿರುವಂತೆಯೇ, Surgical Strike ನಡೆದ ತಾಣದಲ್ಲಿ ಹತರಾದ ಉಗ್ರರ ಮೃತದೇಹಗಳನ್ನು ಗೌಪ್ಯದಿಂದ ದಹನ ಮಾಡಲು ಟ್ರಕ್ಕಿಗೆ ತುಂಬಿಸಲಾಗುತ್ತಿದ್ದುದ್ದನ್ನು ತಾವು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿತ್ತು.

ಭಾರತದ ಪ್ಯಾರಾ ಮಿಲಿಟರಿ ಕಮಾಂಡೋಗಳು ಸೆ.28-29ರ ನಡುವಿನ ರಾತ್ರಿ ಪಿಓಕೆಯಲ್ಲಿ ನಡೆಸಿದ್ದ Surgical Strikeನಲ್ಲಿ ಸುಮಾರು 30ರಿಂದ 40 ಉಗ್ರರು ಹಾಗೂ 9 ಪಾಕ್‌ ಸೈನಿಕರು ಹತ್ಯೆ ಮಾಡಲಾಗಿತ್ತು. ಭಾರತೀಯ ಸೇನೆಯು ಸರ್ಜಿಕಲ್‌ ಸ್ಟ್ರೈಕ್‌ನ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದು ಅದನ್ನು ಸರಕಾರಕ್ಕೆ ಸಲ್ಲಿಸಲು ಸಿದ್ದರಾಗಿದ್ದಾರೆ ಅದಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ನೀಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಬ್ರೇಕ್ ಹಾಕಬೇಕಾದರೆ ಸಾಕ್ಷಿ ಬಹಿರಂಗ ಪಡಿಸುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬೃಹತ್ ಪ್ರಮಾಣದ ಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿಖರ ರೀತಿಯಲ್ಲಿ ಕಾನೂನುಬದ್ಧ ಸೇನಾ ಗುರಿಗೆ ಮಾತ್ರ ಹಾನಿ ಮಾಡುವ ಉದ್ದೇಶದಿಂದ Surgical Strike ಅನ್ನು ಮಾಡಲಾಗುತ್ತದೆ. ಈ ರೀತಿಯಾದ ದಾಳಿಯಲ್ಲಿ ಸಾಮಾನ್ಯ ಸಾರ್ವಜನಿಕ ಮೂಲಭೂತ ಮತ್ತು ಉಪಯುಕ್ತತೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರವಹಿಸಲಾಗುತ್ತದೆ.

ಸೆ.28-29ರಲ್ಲಿ ನಡೆದ Surgical Strike ನಿಂದಾಗಿ ಪಾಕಿಸ್ತಾನ ಹೆದರಿಹೋಗಿದೆ, ಅದರಿಂದಾಗಿ ಪಾಕಿಸ್ತಾನ ರಾಜನೀತಿ ಉಪಯೋಗಿಸಿ ಇಂಟರ್ನ್ಯಾಷನಲ್ ಮೀಡಿಯಾದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಆಗಿಲ್ಲ ಅಂತ ಹೇಳಿ ಅಪಪ್ರಚಾರ ಮಾಡುತ್ತಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆಯನ್ನು ಉಂಟುಮಾಡಿದೆ.

ಪಾಕಿಸ್ತಾನದ ಈ ರೀತಿಯ ಪ್ರತಿಕ್ರಿಯೆಯನ್ನು ತೆಗೆದುಹಾಕಲು, ಭಾರತದ ಕೆಲವು ವಿರೋಧ ಪಕ್ಷದ ರಾಜಕಾರಣಿಗಳು, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಸೇರಿದಂತೆ ಸರ್ಜಿಕಲ್‌ ಸ್ಟ್ರೈಕ್‌ ವಿಡಿಯೋವನ್ನು ಚಿತ್ರೀಕರಿಸುವುದಕ್ಕೆ ಅನುಮತಿ ಕೊಟ್ಟಿರುವ ಮೋದಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.