ಸೇನೆಯಿಂದ ಖಡಕ್ ವಾರ್ನಿಂಗ್; ಕಾಶ್ಮೀರಿ ಉಗ್ರರೆ ಹೇಡಿತನ ಬಿಟ್ಟು ಶರಣಾಗಿ, ಇಲ್ಲ ಸಾಯಲು ಸಿದ್ಧರಾಗಿ..

0
304

ಜಮ್ಮು ಕಾಶ್ಮೀರದಲ್ಲಿ ಉಗ್ರರಿಗೆ ಹೆಚ್ಚು ಸಹಕಾರ ಸಿಗುತ್ತಿದ್ದು ಇದರಿಂದಲೇ ಪುಲ್ವಾಮಾದಂತ ಹಲವು ದಾಳಿಗಳು ನಡೆಯಲು ಸಾದ್ಯವಾಗುತ್ತಿದೆ. ಆದಕಾರಣ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು. ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು. ಏಕೆಂದರೆ ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ಉಗ್ರರ ಜೊತೆ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ. ಎಂದು ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿದ್ದಾರೆ.

Also read: ಪಾಕ್ ಪರ ಘೋಷಣೆ ಕೂಗಿದರೆ ಅಲ್ಲಿಗೇ ಕಳುಹಿಸಿ: ಚಕ್ರವರ್ತಿ ಸೂಲಿಬೆಲೆ; ಒಪ್ಪಲೇಬೇಕಾದ ಮಾತು ಅಲ್ಲವೇ ಇದು?

ಸೇನಾಧಿಕಾರಿಗಳಿಂದ ಖಡಕ್ ಎಚ್ಚರಿಕೆ:

ನಿನ್ನೆ ನಡೆದ ಪಿಂಗ್ಲಾನ್ ಎನ್`ಕೌಂಟರ್ ನಲ್ಲಿ ಪುಲ್ವಾಮ ಉಗ್ರ ದಾಳಿ ಮಾಸ್ಟರ್ ಮೈಂಡ್ ಹಾಗೂ ಜೆಇಎಂ ಕಮಾಂಡರ್ ಅಬ್ದುಲ್ ರಷೀದ್ ಘಾಜಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ವಿಷಯವಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಈತನ ಸಾವಿನೊಂದಿಗೆ ಇದೀಗ ಕಾಶ್ಮೀರದಲ್ಲಿ ಜೆಇಎಂ ಬಹುತೇಕ ತನ್ನ ಅಸ್ಥಿತ್ವ ಕಳೆದುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಜೆಇಎಂಗೆ ನಾಯಕನೇ ಇಲ್ಲದಂತಾಗಿದೆ. ಮೂಲಕ ಜೆಇಎಂ ಇಲ್ಲಿ ಸೂತ್ರ ಹರಿದ ಗಾಳಿಪಟದಂತಾಗಿದೆ. ಅದರಂತೆ ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು ಖಂಡಿತಾ ಕೊಂದು ಹಾಕುತ್ತೇವೆ ಎಂದು ಹೇಳಿದ್ದಾರೆ.

ತಾಯಿಂದರಿಗೆ ವಿಶೇಷ ಸೈನ್ಯೆದಿಂದ ಮನವಿ:

ಪಾಕಿಸ್ತಾನ ಬೆಂಬಲದಿಂದ ನಡೆಯುತ್ತಿರುವ ಉಗ್ರರ ಅಟ್ಟಹಾಸಕ್ಕೆ ಕಾಶ್ಮೀರಿಯರು ಮುಖ್ಯವಾಗಿದ್ದಾರೆ, ಕಾಶ್ಮೀರಿ ಸಮಾಜದಲ್ಲಿ ಮಕ್ಕಳ ತಾಯಂದಿರು ವಿಶೇಷ ಪಾತ್ರವಹಿಸುತ್ತಾರೆ. ಹೀಗಾಗಿ ಮಾಧ್ಯಮಗಳ ಮೂಲಕ ಅವರಲ್ಲಿ ಮನವಿ ಮಾಡುತ್ತಿದ್ದೇವೆ. ಉಗ್ರರ ಜೊತೆ ಕೈ ಜೋಡಿಸಿರುವ ಮಕ್ಕಳನ್ನು ಶರಣಾಗುವಂತೆ ಮನವೊಲಿಸಿ ಮುಖ್ಯವಾಹಿನಿಗೆ ಮರಳುವಬಂತೆ ಮಾಡಬೇಕು. ಒಂದು ವೇಳೆ ಶರಣಾಗದೇ ಗನ್ ಹಿಡಿದರೆ ಅವರನ್ನು ಸೇನೆ ನಿರ್ಮೂಲನೆ ಮಾಡುತ್ತದೆ ಅಂತೆಯೇ ಎನ್`ಕೌಂಟರ್ ವೇಳೆ ಸ್ಥಳದಲ್ಲಿ ಸೇರಿ ಕಾರ್ಯಾಚರಣೆಗೆ ಅಡ್ಡಿ ಪಡಿಸುವ ಯುವಕರಿಗೂ ಸೇನೆ ಎಚ್ಚರಿಕೆ ನೀಡಿದ್ದು, ನಮಗೆ ನಾಗರಿಕರ ಸಾವನ್ನಪ್ಪುವುದು ಬೇಕಿಲ್ಲ. ಆದರೆ ಅನಿವಾರ್ಯತೆ ಎದುರಾದರೆ ಅದಕ್ಕೂ ಹಿಂಜರಿಯುವುದಿಲ್ಲ. ಎನ್`ಕೌಂಟರ್ ಆದ ಬಳಿಕವೂ ಕೂಡ ಸಂಪೂರ್ಣ ಶೋಧಕಾರ್ಯ ಪೂರ್ಣಗೊಳ್ಳುವವರೆಗೂ ಯಾರೂ ಕೂಡ ಘಟನಾ ಪ್ರದೇಶಕ್ಕೆ ಬರಬಾರದು ಎಂದು ದಿಲ್ಲಾನ್ ಹೇಳಿದ್ದಾರೆ.

ಭಾರತಕ್ಕೆ ಪಾಕ್ ಪ್ರಧಾನಿ ವಾರ್ನಿಂಗ್;

ಪುಲ್ವಾಮಾ ದಾಳಿಯ ನಂತರ ಭಾರತವು ಯಾವುದೇ ಸಾಕ್ಷಿ ಇಲ್ಲದೆ ಸಂಪೂರ್ಣ ಆರೋಪವನ್ನು ಪಾಕಿಸ್ತಾನದ ಮೇಲೆ ಹೇರುವುದು ಸರಿಯಲ್ಲ, ಎಂದು ಪುಲ್ವಾಮಾ ದಾಳಿ ನಂತರ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಾಕ್ ಪ್ರಧಾನಿ ಇಮ್ರಾನ್​ ಖಾನ್​ ಈ ಆರೋಪವನ್ನು ತಿರಸ್ಕರಿಸಿದ್ದಾರೆ. ಜತೆಗೆ ಭಾರತ ದಾಳಿ ಮಾಡಿದರೆ ಪಾಕಿಸ್ತಾನ ಕೈಕಟ್ಟಿ ಕೂರುವುದಿಲ್ಲ. ಭಾರತದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ,” ಎಂದು ಎಚ್ಚರಿಸಿದ್ದಾರೆ. ಈ ಮೂಲಕ ದಾಳಿಗೆ ಪ್ರತಿ ದಾಳಿ ನಡೆಸುವ ಸೂಚನೆ ತಿಳಿಸಿದ ಅವರು, ಶಾಂತಿ ಕಾಪಾಡಲು ನಮ್ಮ ಲಕ್ಷಾಂತರ ಸೈನಿಕರು ಪ್ರಾಣ ಬಿಟ್ಟಿದ್ದಾರೆ. ಹೀಗಿರುವಾಗ ನಾವೇಕೆ ಈ ರೀತಿ ದಾಳಿಗಳಿಗೆ ಕುಮ್ಮಕ್ಕು ನೀಡುತ್ತೇವೆ? ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ನಡೆಯುವ ತನಿಖೆಗೆ ಪಾಕಿಸ್ತಾನ ಸಂಪೂರ್ಣ ಬೆಂಬಲ ನೀಡಲಿದೆ,” ಎಂದು ಅವರು ಆಶ್ವಾಸನೆ ನೀಡಿದ್ದಾರೆ.

Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..