ಸೂರ್ಯಾರಾಧನೆ ಮಾಡುವುದು ಹೇಗೆ ಗೊತ್ತ??

0
1562

ಸೂರ್ಯಾರಾಧನೆಯೇ ರಥಸಪ್ತಮಿ

ಪ್ರತೀ ವರ್ಷ ರಥಸಪ್ತಮಿ ಬರುವುದು ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ(ಏಳನೆ)ದಿನದಂದು. ಆ ದಿನ ಸೂರ್ಯಾರಾಧಮೆಗೆ ವಿಶೇಷ ಪರ್ವ ದಿನ. ಸೂರ್ಯನು ಸಮಭಾಜಕ ರೇಖೆಯನ್ನು ಉತ್ತರಾಭಿಮುಖವಾಗಿ ಹಾದು ಹೋಗುವ ಸಮಯ. ಇಲ್ಲಿಂದ ಹಗಲು ಮತ್ತು ರಾತ್ರಿ ಸಮ ಪ್ರಮಾಣದಲ್ಲಿರುತ್ತದೆ. ಈ ರಥಸಪ್ತಮಿ ಋತುಮಾನದ ಹಬ್ಬವಾಗಿದ್ದು, ಇಲ್ಲಿಂದ ಶಿಶಿರ ಋತು ಆರಂಭವಾಗಿ ಸೂರ್ಯನ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ.

ಸೂರ್ಯನಾರಾಯಣನನ್ನು ವೇದಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ವರ್ಣಿಸುತ್ತವೆ. ಸೂರ್ಯ ಮಂಡಲವನ್ನು ಋಗ್ವೇದ ಎಂದು, ಅದರಲ್ಲಿರುವ ಜ್ವಾಲೆಯನ್ನುs sಸಾಮವೇದ ಎಂದು ಛಾಂದೋಗ್ಯೋಪನಿಷತ್ ವಿವರಿಸುತ್ತದೆ.

ಅಲ್ಲದೇ ಸೂರ್ಯನ ಮತ್ತು ಮನುಷ್ಯನ ಆತ್ಮಗಳೆರಡೂ ಒಂದೇ ಎಂದು ತೈತ್ತರೀಯ ಉಪನಿಷತ್ ತಿಳಿಸುತ್ತದೆ.ಯಾಜ್ಞವಲ್ಕ್ಯ ಮಹರ್ಷಿಗೆ ಬ್ರಹ್ಮ ವಿದ್ಯೆ ಸೂರ್ಯನಿಂದಲೇ ಅನುಗ್ರಹವಾಗಿದ್ದು. ಹನುಮಂತನೂ ಸೂರ್ಯನಿಂದಲೇ ವೇದವಿದ್ಯಾದಿಗಳನ್ನು ಕಲಿತದ್ದು. ಶ್ರೀಕೃಷ್ಣನ ಪುತ್ರ ಸಾಂಬ ಮಾಡಿದ ಸೂರ್ಯೋಪಾಸನೆ ಜಗತ್ಪ್ರಸಿದ್ಧಿ.

ರಾಮಾಯಣದಲ್ಲಿ ಸೂರ್ಯನನ್ನು ಸುಗ್ರೀವನ ತಂದೆ ಎನ್ನಲಾಗಿದೆ. ಮಹಾಭಾರತದಲ್ಲಿ ದೂರ್ವಾಸ ಮುನಿಗಳು ಕುಂತಿಗೆ ಬೋಧಿಸಿದ ಮಂತ್ರದ ಪ್ರಭಾವದಿಂದ ಸೂರ್ಯ ಆಕೆಗೆ ನೀಡಿದ ಪುತ್ರನೇ ಕರ್ಣ.ಪ್ರತೀದಿನ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ನರಮಂಡಲ ಚೇತನಗೊಳ್ಳುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ರಕ್ತಪರಿಚಲನೆ ಕ್ರಮಬದ್ಧವಾಗುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ರಥಸಪ್ತಮಿ ದಿನ ಅರುಣೋದಯ ಸಮಯದಲ್ಲಿ ಏಳು ಎಕ್ಕದ ಎಲೆಗಳನ್ನು ಅಂಗಾಂಗಗಳ ಮೇಲಿಟ್ಟುಕೊಂಡು ಸೂರ್ಯನನ್ನು ಧ್ಯಾನಿಸುತ್ತಾ ಸ್ನಾನ ಮಾಡಿ, ನಂತರ ಪ್ರತ್ಯಕ್ಷ ದೇವನಾದ ಸೂರ್ಯನನ್ನು ಪೂಜಿಸಬೇಕು. ಇದರಿಂದ ಕೀರ್ತಿ, ವೀರ್ಯ, ತೇಜಸ್ಸು, ಆರೋಗ್ಯ ವೃದ್ಧಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿದೆ.