ಲಿಬಿಯಾದಲ್ಲಿರುವ ಭಾರತೀಯರಿಗೆ ಸುಷ್ಮಾ ಸ್ಮರಾಜ್ ಕರೆ; ಅಲ್ಲಿಂದ ಕೂಡಲೇ ಹೊರಟು ಬನ್ನಿ, ಅವರ ಕುಟುಂಬದವರು ಅವರನ್ನು ಕರೆಸಿಕೊಳ್ಳಿ..

0
496

ವಿದೇಶದಲ್ಲಿ ನಲೆಸಿರುವ ಭಾರತೀಯರಿಗೆ ಕೆಲವು ಸಮಯದಲ್ಲಿ ತೊಂದರೆಗಳು ಎದುರಾಗುವುದು ಸಾಮಾನ್ಯ ಇಂತಹ ವಿಚಾರಗಳು ತಿಳಿದ ತಕ್ಷಣ ಭಾರತ ಸರ್ಕಾರವು ಎಚ್ಚರಿಕೆ ನೀಡಿ ತಕ್ಷಣ ಅಲ್ಲಿದ ಹೊರಟು ಬನ್ನಿ ಎಂದು ಮಾಹಿತಿ ನೀಡುತ್ತೆ, ಅದರಂತೆ ವಿದೇಶದಲ್ಲಿ ನಲೆಸಿರುವ ಭಾರತೀಯರ ಕುಟುಂಬಗಳ ಸಂಬಂಧಿಕರು ಅಥವಾ ಸ್ನೇಹಿತರು ತಮ್ಮ ಆಪ್ತರನ್ನು ಕರೆಸಿಕೊಳ್ಳುವ ವ್ಯವಸ್ಥೆ ಮಾಡಿಸಿಕೊಳ್ಳಬೇಕು ಎಂದು ಸಾರುತ್ತೆ. ಇಂತಹ ಪರಿಸ್ಥಿತಿ ಈಗ ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಕೇಳಿಬರುತ್ತಿದ್ದು. ಹಿಂಸಾಚಾರ ಭುಗಿಲೆದ್ದಿದೆ ಅಲ್ಲಿ ಸಿಲುಕಿ ಹಾಕಿಕೊಂಡಿರುವ 500ಕ್ಕೂ ಹೆಚ್ಚು ಭಾರತೀಯರು ಸುರಕ್ಷತೆ ದೃಷ್ಟಿಯಿಂದ ನಗರವನ್ನು ತಕ್ಷಣವೇ ತೊರೆಯುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.

Also read: ನರೇಂದ್ರ ಮೋದಿ ಪ್ರಣಾಳಿಕೆ ಬಿಡುಗಡೆ; ಮತ್ತೆ ರಾಮಮಂದಿರದ ಭರವಸೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ ಸಾಲ, ಸೇರಿದಂತೆ ಪ್ರಣಾಳಿಕೆಯ ಹೈಲೈಟ್ಸ್​ ಇಲ್ಲಿದೆ ನೋಡಿ..

ಹೌದು ಲಿಬಿಯಾದಲ್ಲಿ ಕಳೆದ 2 ವಾರದಲ್ಲಿ ಅತೀವ ಹಿಂಸಾಚಾರಗಳು ನಡೆದು 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ವಿಶ್ವಸಂಸ್ಥೆ ಬೆಂಬಲಿತ ಪ್ರಧಾನಿ ಫಾಯೆಜ್ ಅಲ್-ಸರ್ರಾಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಿಲಿಟರಿ ಕಮಾಂಡರ್ ಖಲೀಫಾ ಹಫ್ತಾರ್ ಅವರ ಸೇನೆ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅದರಲ್ಲೂ ರಾಜಧಾನಿ ಟ್ರಿಪೋಲಿಯಲ್ಲಿ ತೀವ್ರ ಮಟ್ಟದಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಖಲೀಫಾ ಸೇನೆಯ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದ್ದು ಅಪಾರ ಸಾವುನೋವು ಸಂಭವಿಸುವ ಅಪಾಯವಿದೆ.

Also read: ಹೆಚ್ಚು ದುಡ್ಡು ಬರುತ್ತೆ ಅಂತ ಸೌದಿ-ಯು.ಎ.ಇ. ಗೆ ಹೋಗೋರಿಗೆ ಇದನ್ನು ತೋರಿಸಿ, ಭಾರತೀಯರು ಅಲ್ಲಿ ಎಷ್ಟು ಕಷ್ಟ ಎದುರಿಸುತ್ತಿದ್ದಾರೆ ಗೊತ್ತಾ??

ಅಲ್ಲಿನ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಸದ್ಯಕ್ಕೆ ವಿಮಾನಗಳ ಸಂಪರ್ಕ ಚಾಲನೆಯಲ್ಲಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ. ಸಿಲುಕಿಕೊಂಡವರನ್ನು ಬಿಡಿಸಿಕೊಂಡು ಬರುವುದು ಕಷ್ಟವಾಗಬಹುದು. ಒಂದು ವೇಳೆ ಲಿಬಿಯಾ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ಬದಲಾದಲ್ಲಿ ಸಂಚಾರವನ್ನು ನಿಷೇಧಿಸುವ ಸಾಧ್ಯತೆಗಳಿವೆ. ಸದ್ಯ ಸಂಚಾರ ಮುಕ್ತವಾಗಿದ್ದು, ಟ್ರಿಪೋಲಿ ನಗರದಿಂದ ಹೊರ ಬನ್ನಿ. ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸೋದು ಕಷ್ಟ. ಟ್ರಿಪೋಲಿಯಲ್ಲಿರುವ ನಿಮ್ಮ ಸ್ನೇಹಿತರು ಅಥವಾ ಸಂಬಂದಿಗಳಿಗೆ ಕೂಡಲೇ ಹೊರಬರುವಂತೆ ಹೇಳಿ ಅಥವಾ ಕುಟುಂಬಸ್ಥರನ್ನು ಸಂಪರ್ಕಿಸಿ ಎಂದು ಇಲ್ಲಿಯ ಭಾರತೀಯರಿಗೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ವಿಶೇಷ ಸಂದೇಶ ಸಾರಿದ್ದು ಲಿಬಿಯಾದಲ್ಲಿರುವ ಭಾರತೀಯ ನಾಗರಿಕರು ಅತೀವ ಎಚ್ಚರಿಕೆ ವಹಿಸಬೇಕು. ಹಿಂಸಾಚಾರ ನಡೆಯುವ ಪ್ರದೇಶಗಳಿಂದ ದೂರ ಇರಬೇಕು. ಅಲ್ಲಿನ ಭಾರತೀಯರಿಗೆಂದೇ ವಾಟ್ಸಾಪ್ ಗ್ರೂಪ್​ಗಳನ್ನ ರಚಿಸಲಾಗಿದೆ. ಈ ಗ್ರೂಪ್​ಗಳಲ್ಲಿ ಎಲ್ಲರೂ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕೆಂದೂ ತಿಳಿಹೇಳಲಾಗಿದೆ. ಎಂದು ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ.

ಲಿಬಿಯಾ ಹಿಂಸಾಚಾರಕ್ಕೆ ಕಾರಣ?

ವಿಶ್ವಸಂಸ್ಥೆ ಬೆಂಬಲಿತ ಪ್ರಧಾನ ಮಂತ್ರಿ ಫಯೇಝ್ ಅಲ್ ಸರ್ರಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಲಿಬಿಯಾದ ಮಿಲಿಟರಿ ಕಮಾಂಡರ್ ಖಲಿಫಾ ಹಫ್ತರ್ ಅವರ ಪಡೆ ದಾಳಿ ನಡೆಸಲು ಆರಂಭಿಸಿದ ನಂತರ ಕಳೆದ ಎರಡು ವಾರಗಳಲ್ಲಿ ಟ್ರಿಪೊಲಿಯಲ್ಲಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅಲ್ಲಿನ ಪರಿಸ್ಥಿತಿ ಸದ್ಯ ಬಿಗುವಿನಿಂದ ಕೂಡಿದೆ.

ಸೌದಿಯಲ್ಲಿರುವ ಭಾರತೀಯನಿಗೆ ಸುಷ್ಮಾ ಭರವಸೆ:

ಸೌದಿ ಅರೇಬಿಯಾದಲ್ಲಿ ವಾಸವಿರುವ ಭಾರತೀಯ ವ್ಯಕ್ತಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ನೆರವಿನ ಭರವಸೆ ನೀಡಿದ್ದಾರೆ. ಅಲಿ ಎನ್ನುವ ವ್ಯಕ್ತಿ ಟ್ವೀಟ್ ಮೂಲಕ ”ನಾನು ನಾಲ್ಕು ಮಕ್ಕಳ ತಂದೆ. ವರ್ಷಗಟ್ಟಲೆ ಹೋರಾಡಿದರೂ ಇಲ್ಲಿನ ಭಾರತೀಯ ದೂತಾವಾಸ ಕಚೇರಿಯು ನನಗೆ ಭಾರತಕ್ಕೆ ಮರಳಲು ಸಹಕರಿಸುತ್ತಿಲ್ಲ. ಮಕ್ಕಳನ್ನು ನೋಡದೇ ವರ್ಷವೇ ಆಗಿದೆ. ಎಷ್ಟು ದಿನ ಈ ಯಾತನೆ ಅನುಭವಿಸಲಿ? ನಾನು ಆತ್ಮ ಮಾಡಿಕೊಳ್ಳಲೇ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ನಾವು ನಿಮ್ಮೊಂದಿಗೆ ಇದ್ದೇವೆ. ಭಾರತೀಯ ದೂತಾವಾಸ ಕಚೇರಿಯು ನಿಮ್ಮ ನೆರವಿಗೆ ಬರಲಿದೆ. ಎಂದು ಹೇಳಿದ್ದಾರೆ.