ಮೈತ್ರಿ ಸರ್ಕಾರದ ಸಿಎಂ ಪ್ರತಿದಿನ ಅಳುತ್ತಾರೆ, ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಅವರನ್ನೇ ಅಪ್ಪಿಕೊಳ್ಳುತ್ತಾರೆ: ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್..

0
251

ರಾಜ್ಯದ ಮೈತ್ರಿ ಸರ್ಕಾರವನ್ನು ಕಣ್ಣಿರಿನ ಸರ್ಕಾರ ಎಂದು ನರೇಂದ್ರ ಮೋದಿಯಿಂದ ಹಿಡಿದು ವಿರೋಧ ಪಕ್ಷದ ಎಲ್ಲ ನಾಯಕರು ವ್ಯಂಗ್ಯವಾಡುತ್ತಾರೆ. ಇದಕ್ಕೆ ಪ್ರತ್ಯೆಕ್ಷ ಸಾಕ್ಷಿ ಕುಮಾರಸ್ವಾಮಿಯವರ ಕಣ್ಣಿರು ಎನ್ನುವುದು ಹಲವು ಬಿಜೆಪಿ ನಾಯಕರ ಮಾತಾಗಿದೆ. ಅದರಂತೆ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಬರುವ ಪ್ರತಿಯೊಂದು ನಾಯಕರು ಇದೆ ವಾಕ್ಯವನ್ನು ಬಳಸಿ ಮೈತ್ರಿ ಸರ್ಕಾರಕ್ಕೆ ಟೀಕೆ ಮಾಡುತ್ತಾರೆ. ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಕೂಡ ಕರ್ನಾಟಕದ ಸಿಎಂ ಅಳ್ತಾರೆ ಇವರ ಸರ್ಕಾರ ದಿಂದ ಏನು ಅಭಿವೃದಿಯಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

Also read: ಮಂಡ್ಯದಲ್ಲಿ ಚುನಾವಣಾ ಪ್ರಚಾರದ ಸದ್ದು ಮುಗಿಯಿತು; ಈಗ ಬೆಟ್ಟಿಂಗ್ ಜೋರಾಗಿದ್ದು ಹೊಲ, ಹಸು, ಹಣ, ಕೋಳಿ ಕುರಿ ಬೆಟ್ಟಿಂಗ್ ನಡೆಯುತ್ತಿವೆ..

ಹೌದು ನಗರದಲ್ಲಿ ನಡೆದ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಬಹುಮತದ ಸರ್ಕಾರವಿದ್ದರೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಬಹುಮತದ ಸರ್ಕಾರ ಇಲ್ಲದಿದ್ದರೆ ಏನಾಗುತ್ತೆ ಅಂತಾ ರಾಜ್ಯದ ಮೈತ್ರಿ ಸರ್ಕಾರ ನೋಡಿದರೆ ಗೊತ್ತಾಗುತ್ತೆ. 37 ಶಾಸಕರು ಹೊಂದಿದ್ದವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ. ಆದರೆ ಪ್ರತಿ ದಿನ ಸಿಎಂ ಕುರ್ಚಿ ಎಳೆದಾಡುತ್ತಾರೆ. ಇದರಿಂದ ಇಲ್ಲಿನ ಸಿಎಂ ಪ್ರತಿನಿತ್ಯ ಅಳ್ತಾರೆ, ಎಲ್ಲಿ ಕುರ್ಚಿ ಹೋಗುತ್ತೋ ಎಂದು ಕಾಂಗ್ರೆಸ್ ಅವರನ್ನು ಮತ್ತೆ ಅಪ್ಪಿಕೊಳ್ಳುತ್ತಾರೆ ಎಂದು ಹೇಳಿದ ಅವರು.

ಹಜ್ ಯಾತ್ರೆಗೆ ಪ್ರತಿವರ್ಷ ತೆರಳುತ್ತಿದ್ದ ಮುಸ್ಲಿಮರ ಸಂಖ್ಯೆಯನ್ನು ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರು ಪುರುಷರ ಜೊತೆಗೆ ಹಜ್‍ಗೆ ತೆರಳಬೇಕು ಎನ್ನುವ ನಿರ್ಬಂಧವನ್ನು ಸಡಿಲಿಸಲಾಗಿದೆ. ಈ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಮೋದಿಯವರ ಸರ್ಕಾರ ಕೆಲಸ ಮಾಡಿದೆ. ಪೂರ್ಣ ಬಹುಮತದ ಕಾರಣ ಮೋದಿ ಸರ್ಕಾರ ಇಷ್ಟೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಕಾಂಗ್ರೆಸ್ ನವರ ರೀತಿ ಬಿಜೆಪಿ ಸರ್ಕಾರವಿಲ್ಲ ನಮ್ಮ ಸರ್ಕಾರ ಸ್ಥಿರವಾಗಿದೆ ಆಡಳಿತ ಪಕ್ಷ ಸ್ಥಿರವಾಗಿ ಇಲ್ಲದಿದ್ದರೆ ಏನೆಲ್ಲಾ ಆಗಲಿದೆ ಎಂಬುವುದಕ್ಕೆ ರಾಜ್ಯ ಮೈತ್ರಿ ಸರ್ಕಾರವನ್ನು ನೋಡಿದ್ದು ಸಾಕು.

Also read: ಬಾಗಲಕೋಟೆ, ಚಿಕ್ಕೋಡಿಯಲ್ಲಿ ಸೇರಿದ್ದ ಜನಸ್ತೋಮ ನೋಡಿ ಮೋದಿ ಫುಲ್ ಖುಷ್; ತಮಗೆ ಅದ ಅನುಭವವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮೋದಿ..

ಅಂತಹ ಸರ್ಕಾರವನ್ನು ತೊರೆದು ದೇಶದ ಸುರಕ್ಷತೆಗೆ, ಸುಸ್ಥಿರತೆಗೆ, ಅಭಿವೃದ್ಧಿಗೆ ಬದ್ದವಾಗಿರುವ ಮೋದಿಯವರ ಸರ್ಕಾರಕ್ಕೆ ಮತನಿಡಿ ಎಂದು ಮನವಿ ಮಾಡಿ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಕೇಂದ್ರದಲ್ಲಿ ಬಂದರೆ ಇಡಿ ದೇಶವೆ ಅಭಿವೃದ್ದಿ ಇಲ್ಲದೆ ಬಳಲುತ್ತದೆ, ಆದಕಾರಣ ಪ್ರತಿಯೊಬ್ಬರೂ ನಮ್ಮ ಸರ್ಕಾರಕ್ಕೆ ಮತ ನೀಡಿ ದೇಶದಲ್ಲಿ ಇನ್ನೂ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಇವರು ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಮೋದಿಯವರು ರಾಜ್ಯ ಸರ್ಕಾರದ ವಿರುದ್ದ ಮಾತನಾಡಿದ ಮೋದಿಯವರು.

ಭಾವನಾತ್ಮಕವಾಗಿ ಕಣ್ಣೀರು ಸುರಿಸುವ ನಾಟಕ ಆಡುವವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ರಿಮೋಟ್ ಕಂಟ್ರೋಲ್ ಬೇರೆ ಕಡೆ ಇದೆ. ಆದಷ್ಟು ಬೇಗ ಬೇಗ ಎಲ್ಲ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಈ ಸ್ಥಿತಿ ಇತ್ತು. ಇದೀಗ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇದೆ. ನಮ್ಮ ಸೈನಿಕರು ರಾತ್ರಿ ಮೂರೂವರೆ ಗಂಟೆಯಲ್ಲಿ ಪಾಕಿಸ್ತಾನ ನಿದ್ದೆ ಮಾಡುವಾಗ ಹನುಮಂತನಂತೆ ಹೊರಟರು. ಅವರ ನೆಲಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿ ಬಂದರು. ಬಾಲಾಕೋಟ್​ ಏರ್​ಸ್ಟ್ರೈಕ್​ ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅವರಿಗೆ ಬೇಕಿರುವುದು ಓಟ್ ಬ್ಯಾಂಕ್. ಕಾಂಗ್ರೆಸ್​-ಜೆಡಿಎಸ್​ ಓಟ್ ಬ್ಯಾಂಕ್​ ಇರುವುದು ಬಾಗಲಕೋಟೆಯಲ್ಲೋ ಇಲ್ಲ ಬಾಲಾಕೋಟ್​ನಲ್ಲೋ ಎಂದು ಮೋದಿ ಪ್ರಶ್ನೆ ಮಾಡಿದರು. ಈಗ ಅದೇ ಮಾತನ್ನು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಕೂಡ ಹೇಳಿದ್ದಾರೆ.