ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕೊಡಲು ನಾನು ಸಿದ್ದ ಎಂದ ಪಾಕ್ ಪ್ರಜೆ….

0
705

ಸುಷ್ಮಾ ಕಳೆದ ಮಂಗಳವಾರದಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾವು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವುದಾಗಿ ಟ್ವೀಟ್ ಮಾಡಿ, ಡಯಾಲಿಸಿಸ್‌ ಒಳಗಾಗುತ್ತಿರುವುದಾಗಿ ಹೇಳಿದ್ದಾರೆ. ಮೂತ್ರಪಿಂಡ ಕಸಿಗಾಗಿ ಟೆಸ್ಟ್‌ಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ತಮಗೆ ಕೃಷ್ಣ ಪರಮಾತ್ಮ ಹರಸಲಿ ಎಂದು ಸುಷ್ಮಾ ಪ್ರಾರ್ಥಿಸಿದ್ದಾರೆ.

ಆದ್ರೆ ಅಭಿಮಾನಿಗಳು ಮಾತ್ರ ಹೆದರಬೇಡಿ ನಾವಿದ್ದೇವೆ ಎನ್ನುತ್ತಿದ್ದಾರೆ…

capture

ಕಿಡ್ನಿ ಕೊಡ್ತೀನಿ ಎಂದ ಟ್ರಾಫಿಕ್ ಪೊಲೀಸ್ :

mp-constable-759

ಕಿಡ್ನಿ ವೈಫಲ್ಯದಿಂದ ದಿಲ್ಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಅನಾರೋಗ್ಯದ ಕುರಿತು ಟ್ವೀಟ್ ಮಾಡಿದ ಬೆನ್ನಿಗೆ ಅವರಿಗೆ ಶುಭ ಹಾರೈಕೆಯ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. ಇದು ಇಲ್ಲಿಗೆ ನಿಂತಿಲ್ಲ. ಮಧ್ಯ ಪ್ರದೇಶದ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ತನ್ನ ಒಂದು ಕಿಡ್ನಿಯನ್ನು ಸುಷ್ಮಾ ಅವರಿಗೆ ನೀಡಲು ಮುಂದೆ ಬಂದಿದ್ದಾರೆ.

“ನಾನು ಆಕೆಯ ಕೆಲಸದಿಂದ ಪ್ರಭಾವಿತನಾಗಿದ್ದೇನೆ. ಅವರು ನಮ್ಮ ವಿದೇಶಾಂಗ ಸಚಿವರು ಹಾಗು ಉತ್ತಮ ನಾಯಕಿ. ಅದಕ್ಕಾಗಿ ನಾನು ಕಿಡ್ನಿ ನೀಡಲು ಮುಂದೆ ಬಂದಿದ್ದೇನೆ, ನನಗೆ ಅವರ ಕಿಡ್ನಿ ವೈಫಲ್ಯದ ಸುದ್ದಿ ಕೇಳಿ ದುಃಖವಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ನನ್ನ ಕಿಡ್ನಿ ನೀಡಬಹುದು ಎಂದು ಕಂಡು ಬಂದರೆ ನಾನು ಅದನ್ನು ಅವರಿಗೆ ದಾನ ಮಾಡುತ್ತೇನೆ” ಎಂದು 26 ವರ್ಷದ ಯುವ ಪೊಲೀಸ್ ಪೇದೆ ಗೌರವ್ ಸಿಂಗ್ ಡಂಗಿ ಹೇಳಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಗೌರವ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ.

ನಾನೂ ಕೂಡ ಕಿಡ್ನಿ ಕೊಡಲು ಸಿದ್ದ ಎಂದ ಪಾಕ್ ಪ್ರಜೆ :

ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಸಿದ್ಧ ಎಂದು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಅಹ್ಮರ್ ಮುಸ್ತಿಖಾನ್ ಹೇಳಿದ್ದಾರೆ. ಸುಷ್ಮಾ ಸ್ವರಾಜ್ ಅವರ ಅನಾರೋಗ್ಯದ ಬಗ್ಗೆ ಟ್ವೀಟ್ ಮಾಡಿರುವ ಅಹ್ಮರ್ ಮುಸ್ತಿಖಾನ್, ಬಲೂಚ್ ನ ನಾಗರಿಕನ ಕಿಡ್ನಿ ಸುಷ್ಮಾ ಸ್ವರಾಜ್ ಅವರಿಗೆ ಹೊಂದಾಣಿಕೆಯಾಗುವುದಿದ್ದರೆ, ನನ್ನ ಸಹೋದರಿಗೆ ನನ್ನ ಕಿಡ್ನಿ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ಅಗತ್ಯವಿದ್ದರೆ ತಮ್ಮ ಕಿಡ್ನಿಯನ್ನು ನೀಡಲು ಸಿದ್ಧ ಎಂದು ಹೇಳಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಅಹ್ಮರ್ ಮುಸ್ತಿಖಾನ್, ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದ ಪರವಾಗಿ ಭಾರತ ಮಧ್ಯಪ್ರವೇಶಿಸಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬಲೂಚ್ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದ ಮೊದಲ ವ್ಯಕ್ತಿಯಾಗಿದ್ದಾರೆ.