ಮಠದ ಆವರಣದಲ್ಲೇ ರಾಸಲೀಲೆ ಆಡಿದ ಸ್ವಾಮೀಜಿ, ರೊಚ್ಚಿಗೆದ್ದ ಭಕ್ತ ಸಮುದಾಯ…!!

0
588

ಮಠವೆಂದರೆ ಅದು ಪವಿತ್ರ ಸ್ಥಳ, ಭಕ್ತಾದಿಗಳು ಪರಮಾತ್ಮನನ್ನು ಸೇರಲು ಸೂಕ್ತವಾದ ಸ್ಥಳ ಎಂದು ಭಾವಿಸಿ ಮಠಗಳಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಮಠಾಧೀಶರೆಂದರೆ ಇನ್ನೂ ಹೆಚ್ಚಿನ ಗೌರವ ಭಕ್ತಿ, ಜೀವನದಲ್ಲಿ ತಮ್ಮ ಎಲ್ಲ ಆಸೆಗಳನ್ನೂ ತ್ಯಜಿಸಿ ಪರಮಾತ್ಮನಲ್ಲಿ ಒಂದಾಗಲು ಸನ್ಯಾಸತ್ವ ಸ್ವೀಕರಿಸಿ ಅಪಾರ ಜ್ಞಾನ ಹೊಂದಿ ಭಕ್ತಾದಿಗಳನ್ನು ಒಳ್ಳೆ ಮಾರ್ಗದಲ್ಲಿ ಕರೆದುಕೊಂಡು ಹೋಗುವವರೆಂದು ಭಕ್ತರು ಮಠಾಧೀಶರನ್ನೇ ನಂಬಿರುತ್ತಾರೆ. ಆದರೆ ಎಷ್ಟೋ ಸಲ ದುರದೃಷ್ಟವಶಾತ್ ಅವರ ನಂಬಿಕೆ ಸುಳ್ಳಾಗಿರುತ್ತೆ.

ಈಗಿನ ದಿನಗಳಲ್ಲಿ ಅಂತೂ ಮಠಗಳ ಮೇಲೆ ಜನರ ನಂಬಿಕೆ ತುಸು ಕಡಿಮೆಯಾದಂತಿವೆ, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಧ್ಯಾತ್ಮ ವಿಷಯ ಬಿಟ್ಟು ಬೇರೆ ವಿಷಯಗಳಿಗೆ ಮಠಗಳು ಸುದ್ದಿಯಾಗುತ್ತಿವೆ. ಅಂತಹದ್ದೇ ಒಂದು ಸುದ್ದಿ ಬೆಂಗಳೂರಿನ ಯಲಹಂಕದಲ್ಲಿರುವ ಹುಣಸಮಾರನಹಳ್ಳಿಯಲ್ಲಿರುವ ಶತಮಾನಗಳಷ್ಟು ಇತಿಹಾಸ ಹೊಂದಿರುವ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಬಗ್ಗೆ ಕೇಳಿ ಬಂದಿದೆ.

ಮಠದ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ನಟಿಯೊಬ್ಬಳೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವಾಟ್ಸಪ್ಪ್-ನಲ್ಲಿ ಹಾಗು ಕೆಲವು ಸುದ್ದಿ ಮಾಧ್ಯಮದಲ್ಲೂ ಪ್ರಸಾರವಾಗಿದೆ. ಮಠದ ಹಾಲಿ ಪೀಠಾಧಿಪತಿಯಾಗಿರುವ ಶೀವಾಚರ್ಯ ಸ್ವಾಮೀಜಿ ಪುತ್ರನಾಗಿರುವ ದಯಾನಂದ ಎಂಬಾತ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳ ವಿಡಿಯೋಗಳು ಗುರುವಾರ ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಈ ರಾಸಲೀಲೆ ನಡೆದದ್ದು ಬೇರೆಲ್ಲೂ ಅಲ್ಲ ಮಠದ ಆವರಣದಲ್ಲೇ ಇಂತಹ ಕೆಲಸ ನಡೆದಿರುವುದು ಭಾರಿ ಸುದ್ದಿಯಾಗುತ್ತಿವೆ.

ವೀರಶೈವ ಪರಂಪರೆಗೆ ಸೇರಿದ ಈ ಮಠದ ಶಿವಾಚಾರ್ಯ ಶ್ರೀಗಳು ೨೦೧೧ ರಲ್ಲೇ ಪೂರ್ವಾಶ್ರಮದಲ್ಲಿ ತಮ್ಮ ಪುತ್ರನಾದ ದಯಾನಂದರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದರು. ಆಗಲೂ ಕೂಡ ಭಕ್ತರು ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಕುಟುಂಬದಲ್ಲೇ ಉಳಿಸಿಕೊಳ್ಳಲ್ಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಮಠದ ಎದುರು ನೂರಾರು ಭಕ್ತರು ಪ್ರತಿಭಟನೆ ನಿರತರಾಗಿದ್ದು, ತಕ್ಷಣ ದಯಾನಂದ ಅವರನ್ನು ಮಠದಿಂದ ಹೊರಹಾಕಿ ಸೂಕ್ತರನ್ನು ಶೀಘ್ರವೇ ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹಿರಿಯ ಶ್ರೀಗಳ ಮೇಲೆ ಹರಿ ಹಾಯ್ದಿರುವ ಭಕ್ತರು ತಂದೆ ಮಗ ಇಬ್ಬರು ನೆಲ ಮಾಳಿಗೆಯಲ್ಲಿ ಅಡಗಿಕೊಂಡಿದ್ದಾರೆ, ಅವರನ್ನು ಈಗಲೇ ಹೊರಹಾಕಿ ಶ್ರೀ ಶೈಲಾ ಮಠದ ಶ್ರೀಗಳೊಂದಿಗೆ ಸಮಾಲೋಚಿಸಿ ನಾವೇ ನೇಮಕ ಮಾಡುತ್ತೀವಿ ಅನ್ನುತ್ತಾರೆ ಹಲವಾರು ಭಕ್ತರು.