ಸರ್ಪ ದೋಷ ನಿವಾರಣೆಗೆ ಬಂದ ಮಹಿಳೆಗೆ ನನ್ನ ಜೊತೆ ನನ್ನ ಮಗನ ಜೊತೆ ಐದು ಬಾರಿ ಸೆಕ್ಸ್ ಮಾಡೆಂದು ರೂಮಿಗೆ ಕರೆದುಕೊಂಡು ಹೋದ ಸ್ವಾಮೀಜಿ.!

0
430

ದೋಷ ಪರಿಹಾರ ಮಾಡುವಂತೆ ಕಷ್ಟ ಹೇಳಿಕೊಂಡು ಬಂದ ಮಹಿಳೆಯರಿಗೆ ಮಂಚಕ್ಕೆ ಕರೆಯುವ ಸ್ವಾಮಿಗಳು ಹೆಚ್ಚಾಗಿದ್ದಾರೆ. ಈಗಾಗಲೇ ಇಂತಹ ಘಟನೆಗಳು ನಡೆದಿವೆ, ಇಂದಿಗ ಮತ್ತೆ ಅಂತಹದೇ ಪ್ರಕರಣ ಕೇಳಿ ಬಂದಿದ್ದು ಇದರಲ್ಲಿ ಏನಿದೆ ವಿಶೇಷವೆಂದರೆ ಕಾಮಿಸ್ವಾಮಿ ಮಹಿಳೆಗೆ ದೋಷ ನಿವಾರಣೆ ಆಗಬೇಕಾದರೆ ನನ್ನ ಜೊತೆಗೆ ಮತ್ತು ಮಗಳ ಜೊತೆಗೆ ಐದು ಬಾರಿ ಸೆಕ್ಸ್ ಮಾಡಿದರೆ ನಿನ್ನ ದೋಷ ಹೋಗುತ್ತೆ ಎಂದು ಹೇಳಿ ಮಹಿಳೆಗೆ ಒತ್ತಾಯ ಮಾಡಿದ ಘಟನೆ ನಡೆದಿದ್ದು ಮಹಿಳೆಯರು ಸ್ವಾಮಿಗಳು ಜೋತಿಷ್ಯರ ಬಳಿ ಹೋಗುವಾಗ ಎಚ್ಚರ ವಹಿಸುವುದು ಒಳ್ಳೆಯದು.

ದೋಷ ಪರಿಹಾರಕ್ಕೆ ಸ್ವಾಮಿ ಜೊತೆ ಸೆಕ್ಸ್?

ಹೌದು ಬೆಂಗಳೂರಿನಲ್ಲಿ ಇಂತಹ ಒಂದು ಕಾಮಿಸ್ವಾಮಿಗಳು ಸಿಕ್ಕಿಬಿದಿದ್ದು ತಂದೆ-ಮಗ ಇಬ್ಬರು ಮಹಿಳೆಗೆ ಜೊತೆ ಮಲಗಲು ಸಂಚು ರೂಪಿದರು ಎನ್ನುವುದು ತಿಳಿದಿದ್ದು ಸ್ವಾಮಿಗಳಾದ ಗಣೇಶ್ ಮತ್ತು ಮಣಿಕಂಠ ಲೈಂಗಿಕ ಕಿರುಕುಳ ನೀಡಿದ ತಂದೆ-ಮಗ ಆಗಿದ್ದು. ಮದುವೆಯಾಗಿ ಪತಿಯಿಂದ ಬೇರೆಯಾಗಿ ವಾಸಿಸುತ್ತಿರುವ ಮಹಿಳೆ ಬಾಣಸವಾಡಿಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆಗೆ ಸರ್ಪ ದೋಷವಿದ್ದು, ತನ್ನ ಪರಿಚಯಸ್ಥರಿಂದ ಆರೋಪಿ ತಂದೆ-ಮಗನನ್ನು ಭೇಟಿ ಮಾಡಿದ್ದರು. ಕಳೆದ ಶನಿವಾರ ತಂದೆ-ಮಗ ಸರ್ಪ ದೋಷ ಪರಿಹರಿಸುವುದಾಗಿ ಹೇಳಿ 10 ರಿಂದ ರಾತ್ರಿ 11ವರೆಗೂ ಮಹಿಳೆಯ ಮನೆಯಲ್ಲಿ ಪೂಜೆ ಮಾಡಿದ್ದಾರೆ. ಪೂಜೆ ನಂತರ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಡಬೇಕು ಎಂದು ಹೇಳಿದ್ದಾರೆ.

ಪ್ರತ್ಯೇಕ ರೂಮ್ ಮಾಡಿ ಕಾಮದಾಟ ಸ್ಕೆಚ್;

ಇದೇ ವೇಳೆ ತಂದೆ-ಮಗ ಕುಕ್ಕೆಯಲ್ಲಿ ಎರಡು ಪ್ರತ್ಯೇಕ ರೂಮ್ ಮಾಡಿ ಕಾಮದಾಟ ಆಡಲು ಸ್ಕೆಚ್ ಹಾಕಿದ್ದರು. ಅಲ್ಲದೆ ತಂದೆ ಗಣೇಶ್ ನಿನ್ನ ಗುಪ್ತಾಂಗದಲ್ಲಿ ದೋಷವಿದೆ. ಪರಿಹಾರ ಮಾಡಬೇಕು ಎಂದರೆ 5 ಬಾರಿ ಸೆಕ್ಸ್ ಮಾಡಬೇಕು. ನನ್ನ ಜೊತೆ ಅಲ್ಲದೆ ನನ್ನ ಮಗನ ಜೊತೆಯೂ ಸೆಕ್ಸ್ ಮಾಡಬೇಕು. ನೀನು ಈ ವಿಷಯವನ್ನು ನಿನ್ನ ತಂದೆ-ತಾಯಿಯ ಬಳಿ ಹೇಳಬಾರದು ಎಂದು ಮಹಿಳೆಗೆ ಹೇಳಿದ್ದಾನೆ.

ಮಹಿಳೆ ಹೇಳಿದ್ದೇನು?

ಈ ಕುರಿತು ದೂರಿನಲ್ಲಿ ಮಹಿಳೆ ಘಟನೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದು, ನನಗೆ ಸರ್ಪ ದೋಷವಿದ್ದು, ನಿವಾರಣೆಗೆ ಪೂಜೆ ಮಾಡಿಸಬೇಕು ಎಂದರೆ 40 ಸಾವಿರ ರೂ. ಆಗುತ್ತದೆ ಎಂದು ಹೇಳಿದ್ದರು. ಬಳಿಕ ಗಣೇಶ್ ಎಂದವರು ನನ್ನ ಜೊತೆ ಪ್ರತ್ಯೇಕವಾಗಿ ಮಾತನಾಡಿ, ನಿನಗೆ ಎಷ್ಟು ಜನ ಬಾಯ್‍ಫ್ರೆಂಡ್ ಇದ್ದಾರೆ ಎಂದು ಕೇಳಿದರು. ಅಲ್ಲದೆ ನಿನ್ನದ್ದು ವೇಶ್ಯೆಯ ಜಾತಕವಾಗಿದ್ದು, ಎಷ್ಟೇ ಜನರನ್ನು ಮದುವೆಯಾದರು ಸರಿಹೋಗುವುದಿಲ್ಲ, ಎಂದು ಶನಿವಾರ ಪೂಜೆ ಮಾಡುವುದ್ದಾಗಿ ಹೇಳಿ ಮನೆಗೆ ಬಂದಿದ್ದರು. ಪೂಜೆ ನೆರವೇರಿಸಿದ ನಂತರ ಪ್ರತ್ಯೇಕವಾಗಿ ರೂಮಿಗೆ ಕರೆದು ನೀನು ನಾನು ಹೇಳಿದ ಹಾಗೆ ಮಾಡಬೇಕು. ಆಗ ನಿನ್ನ ದೋಷ ಪರಿಹಾರವಾಗುತ್ತದೆ ಎಂದು ಲೈಂಗಿಕವಾಗಿ ಪ್ರೇರೇಪಣೆ ಮಾಡಿ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಲು ಕರೆದರು.

ಅದರಂತೆ ಗಣೇಶ್ ಮಾತು ಕೇಳಿ ಭಾನುವಾರ ನಾನು ನನ್ನ ತಂದೆ-ತಾಯಿ ಜೊತೆ ಕುಕ್ಕೆಗೆ ಹೋಗಿ ಅಲ್ಲಿ ಪೂಜೆ ನೆರವೇರಿಸಿದ್ದೇವೆ. ಪೂಜೆ ನಂತರ ಗಣೇಶ್ ತನ್ನ ಮಗ ಮಣಿಕಂಠ ಹಾಗೂ ನನ್ನ ತಂದೆ-ತಾಯಿಯನ್ನಯ ಹೊರಗೆ ನಿಲ್ಲಿಸಿ ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿದ್ದಾನೆ. ರೂಮಿನ ಬಾಗಿಲು ಹಾಕಿದ ನಂತರ ನಾನು 5 ಬಾರಿ ತಾಳಿ ಕಟ್ಟಿ, 5 ಬಾರಿ ನಿನ್ನ ಜೊತೆ ಲೈಂಗಿಕ ಕ್ರಿಯೆ ಮಾಡುತ್ತೇನೆ. ಆಗ ನಿನ್ನ ದೋಷ ಪರಿಹಾರವಾಗುತ್ತದೆ. ನನ್ನನ್ನು ದೇವರೆಂದು ನೋಡು ಎಂದು ಹೇಳಿ ಮೊಬೈಲಿನಲ್ಲಿ ಪೂಜೆಯ ಬಗ್ಗೆ ಒಂದು ವಿಡಿಯೋವನ್ನು ಸಹ ತೋರಿಸಿದ್ದಾನೆ. ಸರ್ಪ ದೋಷ ಪರಿಹಾರ ಪೂಜೆ ಮಾಡುವ ನೆಪದಲ್ಲಿ ಇದೆಲ್ಲ ಮಾಡಿದ್ದಾರೆ ಎಂದು ಹೇಳಿದ್ದಾರೆ.