ಬೆವರಿನ ದುರ್ಗಂಧ ಕಡಿಮೆ ಮಾಡಲು ಇಲ್ಲಿವೆ ನೋಡಿ ಮನೆಮದ್ದುಗಳು

0
1382

Kannada News | Health tips in kannada

ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರಲ್ಲೂ ಕಾಡುವ ಕಿರಿಕಿರಿ ಎಂದರೆ ಅದು ಬೆವರಿನ ದುರ್ಗಂಧ.. ಇನ್ನು ವಿದ್ಯಾರ್ಥಿಗಳಿಂದ ಹಿಡಿದು ಮನೆಯಿಂದ ಹೊರಗೆ ಹೋಗಿ ದುಡಿಯುವ ಪ್ರತಿಯೊಬ್ಬರಿಗೂ ಇದು ಒಂದು ತರ ಮುಜುಗರಕ್ಕೆ ಈಡು ಮಾಡಿಬಿಡುತ್ತದೆ.. ಇನ್ನು ಡಿಯೋಡ್ರೆಂಟ್ ಬಳಸುತ್ತೇವೆ ಎನ್ನುವವರೂ ಇದ್ದಾರೆ.. ಇದೊಂತರ ಒಳ್ಳೆಯ ಉಪಾಯವೇ ಆದರೆ ಬೆವರಿನ ದುರ್ಗಂಧ ಹೆಚ್ಚಾದರೆ ಹಾಕಿಕೊಂಡಿರುವ ಡಿಯೋಡ್ರೆಂಟ್ ಕೂಡ ಕೆಟ್ಟ ವಾಸನೆ ಬೀರಲು ಶುರು ಮಾಡುತ್ತದೆ..

ಹಾಗಾದರೆ ಪರಿಹಾರವೇನು?? ಇಲ್ಲಿದೆ ನೋಡಿ ದೇಹದ ದುರ್ಗಂಧ ಕಡಿಮೆ ಮಾಡಲು ಮನೆಮದ್ದುಗಳು..

ನಿಂಬೆ ಹಣ್ಣು..

ದೇಹದ ವಾಸನೆಯನ್ನು ಕಡಿಮೆಗೊಳಿಸಲು ನಿಂಬೆ ಹಣ್ಣು ಒಳ್ಳೆಯ ಉಪಾಯ.. ಸಾಧ್ಯವಾದರೆ ನಿಮ್ಮ ಬ್ಯಾಗ್ ನಲ್ಲಿ ಒಂದು ನಿಂಬೆ ಹಣ್ಣನ್ನು ಇಟ್ಟುಕೊಳ್ಳಿ.. ಜೊತೆಗೆ ಮನೆಯಿಂದ ಹೊರಹೋಗುವ ಮುನ್ನ ನಿಮ್ಮ ಅಂಡರ್ ಆರ್ಮ್ ಗೆ ನಿಂಬೆ ಹಣ್ಣಿನ ರಸವನ್ನು ಸವರಿದರೆ ಅದು ದುರ್ಗಂಧದ ಬ್ಯಾಕ್ಟೀರಿಯಾ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ..

ಕರ್ಪೂರ


ಕರ್ಪೂರದ ಸುವಾಸನೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಮನೆಯಿಂದ ಹೊರ ಹೋಗುವ ಮೊದಲು ನಿಮ್ಮ ಕರ್ಚೀಫ್ ನಲ್ಲಿ ಒಂದೆರೆಡು ಕರ್ಪೂರವನ್ನು ಹಾಕಿಕೊಳ್ಳಿ.. ಬೆವರು ಬಂದಾಗ ಅದೇ ಕರ್ಚೀಫ್ ನಿಂದ ಮುಖ ಒರೆಸಿಕೊಳ್ಳಿ.. ಕರ್ಪೂರದ ಸುವಾಸನೆಯ ಮುಂದೆ ನಿಮ್ಮ ದೇಹದ ದುರ್ಗಂಧ ಏನೇನೂ ಅಲ್ಲಾ ಬಿಡಿ..‌

ರೋಸ್ ವಾಟರ್..

ನೀವು ಬ್ಯಾಗ್ ಉಪಯೋಗಿಸುವವರಾದರೆ.. ನಿಮ್ಮ ಬ್ಯಾಗ್ ನಲ್ಲಿ ರೋಸ್ ವಾಟರ್ ಇಟ್ಟುಕೊಳ್ಳಿ.. ದಿನ್ನಕೆ ಎರೆಡು ಮೂರು ಬಾರಿ ಕರ್ಚೀಫ್ ಗೆ ರೋಸ್ ವಾಟರ್ ಹಾಕಿ ಮುಖ ಒರೆಸಿಕೊಳ್ಳಿ..

Also read: ಹಣ್ಣಿನ ಸಿಪ್ಪೆಯ ಔಷಧೀಯ ಗುಣಗಳನ್ನು ತಿಳಿದುಕೊಂಡರೆ, ಇನ್ಯಾವತ್ತೂ ಸಿಪ್ಪೆಯನ್ನ ಬಿಸಾಡೋಲ್ಲ…!!

Also Read: