ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ಇನ್ಮುಂದೆ ಭಾರವಾದ ಬ್ಯಾಗ್ ಜೊತೆಗೆ ಹೋಂ ವರ್ಕ್ ಕಿರಿಕಿರಿ ಇಲ್ಲ..

0
793

ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಪಾಲಕರ ಕಣ್ಣಲಿ ನೀರು ಬರುತ್ತಿತು ಏಕೆಂದರೆ LKG-UKG ಮಕ್ಕಳ ಬ್ಯಾಗ್ ನೋಡಿದರೆ ಶಾಕ್ ಆಗುತ್ತೆ. 10 -15 kg ಹೆಣಭಾರವಿರುವ ಸ್ಕೂಲ್ ಬ್ಯಾಗನ್ನು ಅಷ್ಟೊಂದು ಚಿಕ್ಕ ಮಕ್ಕಳು ಹೊರಲು ಸಾದ್ಯವೇ? ಮಕ್ಕಳ ಪಜೀತಿ ನೋಡಿ ಬ್ಯಾಗ್ ಹೊರಲು ತಂದೆ-ತಾಯಿಗಳು ಕೂಡ ಶಾಲೆಗೆ ಹೋಗಲೇ ಬೇಕಿತ್ತು ಇಲ್ಲವಾದರೆ ಮಕ್ಕಳ ಕಷ್ಟವನ್ನು ನೋಡುವುದು ಪಾಲಕರಿಗೆ ಸಾಧ್ಯವಾಗುತ್ತಿರಲಿಲ್ಲ. ಅದರಲ್ಲಿ ಖಾಸಗಿ ಶಾಲೆಗಳ ಡ್ರಾಮಾಗಳು ಅಂತು ಮಿಕ್ಕಿವೆ ಲಕ್ಷಾಂತರ ಪಿಜು ಕಟ್ಟಿ ಮಕ್ಕಳ ಬ್ಯಾಗ್ ಹೊರುವುದು ಪಾಲಕರಿಗೆ ತಲೆನೋವುವಾಗಿತ್ತು. ಇದು ಬರಿ LKG-UKG ಯ ಕತೆಯಾದರೆ 1ರಿಂದ 10 ನೇ ತರಗತಿಯ ಮಕ್ಕಳ ಕತೆ ಹೆಂಗೆ? ಈ ಗೋಳು ಪ್ರತಿಯೊಬ್ಬರ ಮನೆಯಲ್ಲಿತ್ತು ಇದರ ವಿರುದ್ದ ಅನೇಕ ದೂರುಗಳು ಕೇಳಿ ಬರುತ್ತಿದವು.

Also read: ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂಬ ಚಿಂತೆ ಬಿಟ್ಟು.. ರಾಗಿ-ಅಕ್ಕಿ ದೋಸೆ ಮಾಡಿ ಕೊಡಿ..!!

ಇದನ್ನು ಅರಿತ ಕೇಂದ್ರ ಸರ್ಕಾರ ಶಾಲಾ ಮಕ್ಕಳ ಬ್ಯಾಗಿನ ಹೊರೆ ಇಳಿಸುವ ವಿಚಾರದಲ್ಲಿ ಹಾಗೂ ಮಕ್ಕಳಿಗೆ ಹೋಂವರ್ಕ್ ಕೊಡುವ ವಿಚಾರದಲ್ಲಿ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.ಇದಕ್ಕೆ ಸಂಬಂಧಪಟ್ಟಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಮಾರ್ಗದರ್ಶಿ ಸೂತ್ರ ಪಾಲಿಸುವಂತೆ ನಿರ್ದೇಶನ ನೀಡಿದೆ.

ಇದರಿಂದ ಭಾರದ ಶಾಲಾ ಬ್ಯಾಗ್‍ಗಳಿಗೆ ಮಿತಿ ಹೇರಲಾಗಿದ್ದು, ಮಕ್ಕಳಿಗೆ ಕೊಡುವ ಹೋಂ ವರ್ಕ್ ಕಿರಿಕಿರಿಗೂ ನಿಯಂತ್ರಣ ನೀಡಲಾಗಿದೆ. ಶಾಲಾ ಮಕ್ಕಳ ಬ್ಯಾಗ್‍ನ ತೂಕ ಮತ್ತು ಮಕ್ಕಳಿಗೆ ಹೋಂ ವರ್ಕ್ ಕೊಡುವ ಕುರಿತು ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳು ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಕಡ್ಡಾಯವಾಗಿ ತಿಳಿಸಿದೆ. ಈ ಸೂಚನೆಯಲ್ಲಿ ತರಗತಿಗೆ ಅನುಗುಣವಾಗಿ ಬ್ಯಾಗ್​ ಭಾರ ಪ್ರಮಾಣ ನಿಗದಿ ಮಾಡಿದೆ. ಮಕ್ಕಳ ಸ್ಕೂಲ್​ ಬ್ಯಾಗ್​ ತೂಕ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂತಹ ಮಹತ್ವದ ನಿರ್ಧಾರ ಸೂಕ್ತವಾಗಿದು ಮಕ್ಕಳು ಮತ್ತು ಪಾಲಕರಿಗೆ ಬಹುತೇಕವಾಗಿ ನಿರಾಳವಾಗಿದೆ.

Also read: ಮಕ್ಕಳಿಂದ ದೂರವಿಡಬೇಕಾದ ಅತ್ಯಂತ ಅಪಾಯಕಾರಿ 5 ವಸ್ತುಗಳು ಶೇರ್ ಮಾಡಿ ಎಲ್ಲಾ ಪೋಷಕರಿಗೂ ಉಪಯೋಗವಾಗಲಿ

ಕೇಂದ್ರ ಸರ್ಕಾರ ಸೂಚನೆಯಂತೆ ಎಷ್ಟು ಕೆಜಿ ತೂಕ?

1. 1 ಮತ್ತು 2 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ನ ತೂಕ 1.5 ಕೆ.ಜಿ ದಾಟುವಂತಿಲ್ಲ
2. 3 ಮತ್ತು 4 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ತೂಕ 2 ರಿಂದ 3 ಕೆ.ಜಿ ಇರಬೇಕು
3. 6 ಮತ್ತು 7 ನೇ ತರಗತಿಗೆ ಮಕ್ಕಳ ಸ್ಕೂಲ್ ಬ್ಯಾಗ್ 4 ಕೆ.ಜಿ ಮಾತ್ರ ಇರಬೇಕು
4. 8 ಮತ್ತು 9 ನೇ ತರಗತಿ ಮಕ್ಕಳಿಗೆ 4.5 ಕೆ.ಜಿ ಶಾಲಾ ಬ್ಯಾಗ್
5. 10 ನೇ ತರಗತಿ ಮಕ್ಕಳಿಗೆ 5 ಕೆ.ಜಿ ತೂಕದ ಸ್ಕೂಲ್ ಬ್ಯಾಗ್

ಹೋಂ ವರ್ಕ್ ಸುತ್ತೋಲೆಯಲ್ಲಿ ಏನಿದೆ?

  • 1 ಮತ್ತು 2 ನೇ ತರಗತಿ ಮಕ್ಕಳಿಗೆ ಶಿಕ್ಷಕರು ಹೋಂ ವರ್ಕ್ ಕೊಡುವಂತಿಲ್ಲ. ಹೋಂ ವರ್ಕ್ ಕೊಟ್ಟರೂ ಭಾಷೆ ಮತ್ತು ಗಣಿತ ವಿಷಯಗಳಷ್ಟೇ ಕೊಡಬೇಕು.
  • ಮಕ್ಕಳಿಗೆ ಹೆಚ್ಚುವರಿ ಬುಕ್ ಗಳನ್ನು ತರುವಂತೆ ಶಿಕ್ಷಕರು ಒತ್ತಾಯಿಸುವಂತಿಲ್ಲ.
  • ಅಲ್ಲದೇ ಹೆಚ್ಚುವರಿ ಶಾಲಾ ಪರಿಕರಗಳನ್ನು ತರುವಂತೆಯೂ ಬಲವಂತ ಮಾಡಬಾರದು.
  • ಮೊದಲಿನ ಹಾಗೆ ಹೋಂವರ್ಕ್ ಮತ್ತು ಹೆಚ್ಚು ಬುಕ್ಸ್ ತರುವಂತೆ ಆದೇಶ ಮಾಡಿದರೆ ಅಂತಹ ಶಾಲೆಯ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.