ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಗೆಣಸಿನ ಖಾರದ ಬಿಲ್ಲೆ ಮಾಡೋ ವಿಧಾನ ತಿಳ್ಕೊಳ್ಳಿ…

0
1050

ಬೇಕಾಗುವ ಸಾಮಗ್ರಿ :

  • ಸಿಹಿಗೆಣಸು-2,
  • ಎಣ್ಣೆ-4 ಟೀ ಚಮಚ,
  • ಕಾಳುಮೆಣಸಿನ ಪುಡಿ-1/2 ಟೀ ಚಮಚ,
  • ಜೀರಿಗೆ ಪುಡಿ-1 ಟೀ ಚಮಚ,
  • ತೆಂಗಿನಕಾಯಿ ತುರಿ-1/2 ಕಪ್,
  • ಗಸಗಸೆ-2 ಟೀ ಚಮಚ,
  • ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

  1. ಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆಯ ಸಮೇತ, ಬಿಲ್ಲೆಗಳಾಕಾರದಲ್ಲಿ ಕತ್ತರಿಸಿ, ಎರಡೂ ಬದಿಗೆ ಎಣ್ಣೆ ಸವರಿಡಿ.
  2. ತೆಂಗಿನಕಾಯಿ ತುರಿ, ಜೀರಿಗೆ ಪುಡಿ, ಗಸಗಸೆ, ಕಾಳುಮೆಣಸಿನ ಪುಡಿ, ಉಪ್ಪು ಬೆರೆಸಿ ನುಣ್ಣಗೆ ಅರೆದಿಡಿ.
  3. ಗೆಣಸಿನ ಬಿಲ್ಲೆಗಳನ್ನು, ಅರೆದ ಮಿಶ್ರಣದಲ್ಲದ್ದಿ, ಎಣ್ಣೆ ಸವರಿದ ತವಾದ ಮೇಲೆ, ಹರಡಿ, ಕೆಂಪಗಾಗುವವರೆಗೆ ಎರಡೂ ಬದಿಯನ್ನು ಬೇಯಿಸಿ.

ರುಚಿಯಾದ ಸಿಹಿಗೆಣಸಿನ ಖಾರದ ಬಿಲ್ಲೆ ತಿನ್ನಲು ರೆಡಿ.