ಮನೆಯ ಕೈ ಕೆಲಸಕ್ಕೆ ಯಾರಿಗೂ ಸೊಪ್ಪು ಹಾಕೋದು ಬೇಡ; ಇನ್ಮುಂದೆ ಸ್ವಿಗ್ಗಿ ಗೋ’ ಸೇವೆಯಲ್ಲಿ ಸಿಗಲಿದೆ ಎಲ್ಲ ಸೇವೆ, ಏನಿದು ಸೇವೆ ಇಲ್ಲಿದೆ ನೋಡಿ ಮಾಹಿತಿ..

0
425

ಪ್ರತಿಯೊಂದು ಮನೆಯಲ್ಲಿ ಕೈ ಕೆಲಸಕ್ಕೆ ಒಬ್ಬರು ಬೇಕಾಗುತ್ತೆ, ಅದು ಹೇಗೆಂದರೆ ಮನೆಗೆ ಅರ್ಜೆಂಟ್-ಆಗಿ ದಿನಸಿ ವಸ್ತುಗಳು ತರಲು, ಮನೆಯಲ್ಲಿ ಯಾರಾದರು ವಸ್ತು ಮರೆತು ಆಫೀಸ್ ಹೋದಾಗ, ಮಕ್ಕಳ ಶಾಲೆಗೆ ಬಾಕ್ಸ್ ಕೊಡಲು ಸೇರಿದಂತೆ ಹಲವು ಕೆಲಸಕ್ಕೆ ಮೆನೆಗೊಬ್ಬರು ಬೇಕೇಬೇಕು, ಅದರಲ್ಲಿ ವೃದ್ಧರಿಂದ ಮನೆಯಲ್ಲಿ ಮೆಡಿಸಿನ್ ಮತ್ತು ಇತರೆ ವಸ್ತುಗಳನ್ನು ತರಲು ಸಹಾಯಕ್ಕೆ ಯಾರು ಬರುತ್ತಾರೆ ಎನ್ನುವ ಚಿಂತೆವೂ ಇತ್ತು ಆದರೆ ಇದಕ್ಕೆಲ್ಲ ಇನ್ಮುಂದೆ ಯೋಚನೆ ಬೇಡ ಏಕೆಂದರೆ ಇಷ್ಟು ದಿನ ಫುಡ್ ಡೆಲಿವರಿ ಮಾಡುವಲ್ಲಿ ಪರಿಚಯವಾದ ಸ್ವಿಗ್ಗಿ ಸಂಸ್ಥೆ ಹೊಸ ಸೇವೆಯನ್ನು ಪ್ರಾರಂಭಿಸಿದ್ದು ಸ್ವಿಗ್ಗಿ ಗೋ’ ಸೇವೆಯಲ್ಲಿ ಎಲ್ಲವೂ ಈಗ ಮನೆ ಬಾಗಿಲಿಗೆ ಬರಲಿದೆ.

Also read: ಉತ್ತಮವಾಗಿ ಸಾರಾಯಿ ಕುಡಿಸಲು ಚಿಂತನೆ ನಡೆಸಿದ ಬಿಜೆಪಿ ಸರ್ಕಾರ; ಇನ್ಮುಂದೆ ಹಾಲಿನ ರೀತಿ ಮನೆ ಮನೆಗೆ ಮದ್ಯ ಪೂರೈಕೆ??

ಮನೆಯ ಕೈ ಕೆಲಸದಲ್ಲಿ ಸ್ವಿಗ್ಗಿ ಸೇವೆ?

ಹೌದು ಸದ್ಯ ಫುಡ್‌ ಡೆಲಿವರಿ ಸೇವೆಯಲ್ಲಿ ಮುಂದಿರುವ ‘ಸ್ವಿಗ್ಗಿ’ ಸಂಸ್ಥೆಯು ಇದೀಗ ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಗ್ರಾಹಕರು ಇನ್ಮುಂದೆ ಬರೀ ಫುಡ್‌ ಆರ್ಡರ್‌ ಮಾಡುವಾಗ ಮಾತ್ರ ಸ್ವಿಗ್ಗಿ ಸೇವೆಯನ್ನು ಪಡೆಯುವುದಲ್ಲದೆ. ಬದಲಿಗೆ ಮನೆಯಲ್ಲಿ ಬಾಕ್ಸ್ ಅಥವಾ ಕೀ ಮರೆತು ಆಫೀಸ್‌ಗೆ ಹೋದಾಗ, ಪಾರ್ಸಲ್ ಕಳುಹಿಸುವುದಿದ್ದಾಗ, ಲಾಂಡ್ರಿ ತರಲು ಹೀಗೆ ಹಲವು ಅತೀ ಅಗತ್ಯ ಕೆಲಸಗಳಿಗೂ ಸಹ ‘ಸ್ವಿಗ್ಗಿ’ಯೇ ಬರಲಿದೆ.

Also read: ವಾಹನ ಚಲಾಯಿಸುವ ಮುನ್ನ ಈ ಮಾಹಿತಿ ನೋಡಿ; ರೂಲ್ಸ್ ಉಲ್ಲಂಘನೆ ಮಾಡಿದ ಬೈಕಿಗೆ 24 ಆಟೋಗೆ 32 ಸಾವಿರ ರೂ. ದಂಡ ಬಿತ್ತು.!

ಏನಿದು ಸ್ವಿಗ್ಗಿ ಗೋ ಸೇವೆ?

ಬೆಂಗಳೂರಿನಲ್ಲಿ ಸ್ವಿಗ್ಗಿ ಕಂಪನಿಯು ಹೊಸದಾಗಿ ‘ಸ್ವಿಗ್ಗಿ ಗೋ’ ಸೇವೆಯನ್ನು ಆರಂಭಿಸಿದ್ದು, ಈ ಸೇವೆಯಡಿ ಸಂಸ್ಥೆಯು ಗ್ರಾಹಕರಿಗೆ ಲಾಂಡ್ರಿ ಪಿಕ್‌ಅಪ್‌, ಡ್ರಾಪ್‌, ಕೀ ಮರೆತು ಹೋದರೇ, ಅವರಿಗೆ ತಲುಪಿಸುವುದು ಮತ್ತು ನಿರ್ದಿಷ್ಟ ಸ್ಥಳಕ್ಕೆ ಪಾರ್ಸಲ್ ತಲುಪಿಸುವ ಸೇವೆಗಳನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ಸ್ವಿಗ್ಗಿ ಸ್ಟೋರ್‌ಗಳನ್ನು ತೆರೆಯುವುದಾಗಿ ಕಂಪನಿಯು ತಿಳಿಸಿದೆ. ಅದರಂತೆ ಸ್ವಿಗ್ಗಿಯ ಹೊಸ ಸೇವೆಯಲ್ಲಿ ಗ್ರಾಹಕರಿಗೆ ಕಿರಾಣಿ ದಿನಸಿ, ತರಕಾರಿ, ಹೂಗಳು, ಮೆಡಿಸಿನ್ ಸೇರಿದಂತೆ ದೈನಂದಿನ ಅಗತ್ಯವಾದ ವಸ್ತುಗಳನ್ನು ಒಂದು ಗಂಟೆಯೊಳಗೆ ತಲುಪಿಸಲಿದೆ. ಅದಕ್ಕಾಗಿ ‘ಸ್ವಿಗ್ಗಿ ಸ್ಟೋರ್‌’ ಇರಲಿದ್ದು, ಇದು ಸ್ವಿಗ್ಗಿ ಮೇನ್ ಆಪ್‌ನ ಒಂದು ಭಾಗವಾಗಿರಲಿದೆ. ಸ್ವಿಗ್ಗಿ ಸ್ಟೋರ್‌ನಲ್ಲಿ ಗ್ರಾಹಕರು ಆರ್ಡರ್ ಮಾಡುವ ದೈನಂದಿನ ವಸ್ತುಗಳನ್ನು ಸ್ವಿಗ್ಗಿ ಅವರ ಮನೆಗೆ ತಲುಪಿಸುವ ಸೇವೆ ನೀಡಲಿದೆ.

Also read: ಉತ್ತಮವಾಗಿ ಸಾರಾಯಿ ಕುಡಿಸಲು ಚಿಂತನೆ ನಡೆಸಿದ ಬಿಜೆಪಿ ಸರ್ಕಾರ; ಇನ್ಮುಂದೆ ಹಾಲಿನ ರೀತಿ ಮನೆ ಮನೆಗೆ ಮದ್ಯ ಪೂರೈಕೆ??

ಈ ಸೇವೆಯನ್ನು ಬೆಂಗಳೂರಿನಲ್ಲಿಯೇ ಮೊದಲು ಆರಂಭಿಸಿದ್ದು, 2020ರ ವೇಳೆಗೆ ಸುಮಾರು 300 ನಗರ ಪ್ರದೇಶಗಳಿಗೂ ಈ ಸೇವೆಯನ್ನು ಆರಂಭಿಸುವ ಯೋಜನೆ ಇದೆ. ನಗರ ಪ್ರದೇಶದ ಜನರಿಗೆ ಜೀವನಶೈಲಿ ಅಸಮತೋಲನವಾಗಿರುತ್ತದೆ. ಹೀಗಾಗಿ ಗ್ರಾಹಕರಿಗೆ ಸ್ವಿಗ್ಗಿ ಗೋ ಮೂಲಕ ಅಗತ್ಯ ಸೇವೆಗಳನ್ನು ನೀಡುವ ಉದ್ದೇಶ ಹೊಂದಿದೆ ಎಂದು ಸ್ವಿಗ್ಗಿ ಸಿಇಓ ಶ್ರೀಹರ್ಷಾ ಮೆಜೆಟಿ ತಿಳಿಸಿದ್ದಾರೆ. ಸ್ವಿಗ್ಗಿ ಗೋ ಸೇವೆಯಡಿ ಬೆಂಗಳೂರಿನಲ್ಲಿ ಸುಮಾರು 300ಕ್ಕೂ ಅಧಿಕ ಅಂಗಡಿಗಳನ್ನು ಟೈಅಪ್‌ ಮಾಡಿಕೊಂಡಿರುವ ಸಂಸ್ಥೆಯು ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗಿದೆ. ಅವುಗಳಲ್ಲಿ ನೀಲಗಿರಿಸ್‌, ಗೋದ್ರೆಜ್ ನೆಚರ್ ಬಾಸ್ಕೆಟ್‌, ಆರ್ಗ್ಯಾನಿಕ್ ವರ್ಲ್ಡ್‌ ನಂತಹ ಪ್ರಮುಖ ಸ್ಟೋರ್‌ಗಳು ಸೇರಿಕೊಂಡಿವೆ. ಹಾಗೆಯೇ ಹೈದ್ರಾಬಾದ ನಗರದಲ್ಲಿ ಸುಮಾರು 200ಕ್ಕೂ ಅಧಿಕ ಸ್ಟೋರ್‌ಗಳೊಂದಿಗೆ ಟೈಅಪ್‌ ಮಾಡಿಕೊಂಡಿದೆ. ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗುತ್ತೆ ಎನ್ನುವುದು ಸ್ವಿಗ್ಗಿ ಅಭಿಪ್ರಾಯವಾಗಿದೆ.