ರೈಲ್ವೆ ನಿಲ್ದಾಣಗಳಲ್ಲಿಟ್ಟ ಕಸದ ತೊಟ್ಟಿಗಳ ಮೇಲೆ ಬರಿ ಹಿಂದಿ ಅಕ್ಷರ; ಹಿಂದಿ ತಿಳಿಯದ ಜನರಿಗೆ ಗೊಂದಲ, ಕನ್ನಡ ಭಾಷೆಯನ್ನು ಕಡೆಗಣಿಸಿದ್ದು ಸರಿನಾ??

0
161

ಸೌತ್ ವೆಸ್ಟರ್ನ್ ರೈಲ್ವೆ (ಎಸ್‌ಡಬ್ಲ್ಯುಆರ್) ಬೆಂಗಳೂರಿನಲ್ಲಿ ಸ್ವಚ್ಚತೆಗೆ ಹೆಚ್ಚಿನ ಮಹತ್ವ ಕೊಟ್ಟು ತ್ಯಾಜ್ಯ ನಿರ್ವಹಣೆಗೆ ಒಂದು ಹೆಜ್ಜೆ ಇಟ್ಟಿದೆ ಆದರೆ ಇದರಲ್ಲಿ ಒಂದು ಯಡವಟ್ಟು ಮಾಡಿ ಭಾರಿ ವಿರೋಧಕ್ಕೆ ಕಾರಣವಾಗಿದ್ದು, ನಿಲ್ದಾಣದಲಿ ಡಸ್ಟ್‌ಬಿನ್‌ ಇಟ್ಟ ಡಸ್ಟ್‌ಬಿನ್‌-ಗಳ ಮೇಲೆ ಹಿಂದಿಯಲ್ಲಿ ಸುಖಾ ಕಚ್ರಾ ಮತ್ತು ಗೀಲಾ ಕಚ್ರಾ ಎಂದು ಬರೆಯಲಾಗಿದ್ದು, ಇದು ಒಂದು ರೀತಿ ಕನ್ನಡವನ್ನು ಕಡೆಗಣಿಸಲಾಗಿದ್ದು, ಇನ್ನೊಂದು ಕಡೆ ಜನರಿಗೆ ಕಸದ ತೊಟ್ಟೆ ಯಾವುದು ಎನ್ನುವುದು ತಿಳಿಯದೆ ಪರದಾಡುವಂತೆ ಆಗಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ.

ಇದೆಲ್ಲವನ್ನು ನೋಡಿದರು ರೈಲ್ವೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ನಗರದಲ್ಲಿ ಹಿಂದಿಯನ್ನು ಮಾತ್ರ ಹೇಗೆ ಬಳಸಬಹುದು? ಅವರು ಇದನ್ನು ತಮಿಳುನಾಡಿನಲ್ಲಿ ಮಾಡಬಹುದೇ? ಹಿಂದಿ ಹೆಸರಿನ ಈ ತೊಟ್ಟಿಗಳು ಬಹಳ ಹಿಂದಿನಿಂದಲೂ ಇದ್ದವು ಆದರೆ ದುಃಖಕರವೆಂದರೆ, ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ ”ಎಂದು ಸಾಮಾನ್ಯ ರೈಲು ಪ್ರಯಾಣಿಕರಾದ ಕಿರಣ್ ಗೌಡ ಹೇಳಿದ್ದು,ತೊಟ್ಟಿಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ವೇಣುಗೋಪಾಲ್ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದು “ಇದರ ಉದ್ದೇಶವೇನು? ಜನರು ಹಿಂದಿ ಕಲಿಯಬೇಕು ಮತ್ತು ತ್ಯಾಜ್ಯವನ್ನು ಬಿಡಬೇಕೆ. ಎನ್ನುವ ಉದ್ದೇಶದಿಂದ ಇದನ್ನು ಬರೆಯಲಾಗಿದೆ ಎಂದು ಹೇಳಿದ್ದಾರೆ. ಅದರಂತೆ ಬೆಂಗಳೂರಿನ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಕನ್ನಡದವರೆ 80 ರಷ್ಟು ಇರುತ್ತಾರೆ ಅದರಲ್ಲಿ ಎಲ್ಲರಿಗೂ ಹಿಂದಿ ಓದಲು ಬರುವುದಿಲ್ಲ, ಆದರಿಂದ ಕಸದ ತೊಟ್ಟಿಯನ್ನು ಯಾರು ಸರಿಯಾಗಿ ಉಪಯೋಗಿಸುವುದಿಲ್ಲ. ಎಂದು ಕಸ ವಿಲೇವಾರಿ ಮಾಡುವರು ಹೇಳುತಿದ್ದಾರೆ.

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಡಿ ದೇಶಾದ್ಯಂತ ಈ ತೊಟ್ಟಿಗಳನ್ನು ಒದಗಿಸಲಾಗಿದೆ ಎಂದು ಎಸ್‌ಡಬ್ಲ್ಯುಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ ವಿಜಯ ತಿಳಿಸಿದ್ದಾರೆ. “ಅವುಗಳನ್ನು ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಒದಗಿಸಲಾಗಿದೆ, ಆದ್ದರಿಂದ ಅವರಿಗೆ ಹಿಂದಿ ಲೇಬಲ್‌ಗಳು ಮಾತ್ರ ಇವೆ” ಎಂದು ಅವರು ಹೇಳಿದ್ದಾರೆ.ಅಷ್ಟೇ ಅಲ್ಲದೆ ನಿಲ್ದಾಣದ ಆವರಣ ಸೇರಿದಂತೆ ಪ್ಲಾಟ್‌ ಫಾರ್ಮ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಪ್ರಾದೇಶಿಕ ಭಾಷೆಯನ್ನು ಕಡೆಗಣಿಸಿದ್ದಕ್ಕೆ ವಿರೋಧಗಳು ವ್ಯಕ್ತವಾಗುತ್ತಿವೆ. ಈಗಾಗಲೇ ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ದೂರುಗಳು ಬಂದಿವೆ. ಆದರೆ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

ರೈಲ್ವೆ ಇಲಾಖೆಯು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಒಬ್ಬನೇ ಗುತ್ತಿಗೆದಾರನ ಕಡೆ ಈ ಡಸ್ಟ್‌ಬೀನ್‌ಗಳನ್ನು ತಯಾರಿಸಿ ಪೂರೈಕೆ ಮಾಡಿರುವುದರಿಂದಾಗಿ ಏಕ ಭಾಷೆಯನ್ನು ಡಬ್ಬಿಗಳ ಮೇಲೆ ಮುದ್ರಿಸಲಾಗಿದೆ. ಇದರ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು ತಿಳಿಸಲಾಗುವುದು. ಸ್ಥಳೀಯ ಭಾಷೆಯಲ್ಲಿ ಘೋಷಣೆಯನ್ನು ಮುದ್ರಿಸಬೇಕಾದರೆ ಇಲಾಖೆಯ ಪರವಾನಗಿ ಅಗತ್ಯ ಎನ್ನುತ್ತಾರೆ ಅಧಿಕಾರಿಯೊಬ್ಬರು. ಈ ಹಿಂದೆ ಬೆಂಗಳೂರಿನ ಮೆಟ್ರೊದಲ್ಲೂ ಕನ್ನಡ ನಿರ್ಲಕ್ಷಿಸಿದ್ದರಿಂದ ಭಾರಿ ವಿವಾದ ಸೃಷ್ಟಿಯಾಗಿತ್ತು. ಕನ್ನಡಪರ ಸಂಘಟನೆಗಳು ಇದರ ವಿರುದ್ಧ ದನಿ ಎತ್ತಿದ್ದವು. ಆನಂತರ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿತ್ತು. ಇಷ್ಟಾದರೂ ನಿರಂತರವಾಗಿ ಪ್ರಾದೇಶಿಕ ಭಾಷೆಗಳೆಡೆಗೆ ರೈಲ್ವೆ ಇಲಾಖೆ ನಿರಂತರ ನಿರ್ಲಕ್ಷ್ಯ ತೋರುತ್ತಿದೆ.

ಕ್ರಷರ್‌ ಯಂತ್ರದ ಮೇಲೂ ಇಲ್ಲ ಕನ್ನಡ:

ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲ ಹಾಗೂ ಪರಿಸರ ಕಾಳಜಿಗಾಗಿ ಪ್ಲಾಸ್ಟಿಕ್‌ ಬಾಟಲ್‌ ಕ್ರಷರ್‌ ಯಂತ್ರವನ್ನು ಅಳವಡಿಸಲಾಗಿದೆ. ಇದರ ಮೇಲೂ ಆಂಗ್ಲ ಭಾಷೆ ಮಾತ್ರ ಇದೆ. ಜನಬಳಕೆಗಾಗಿ ಅಳವಡಿಸಿರುವ ಯಂತ್ರದ ಮೇಲೆ ಪ್ರಾದೇಶಿಕ ಭಾಷೆ ಇರದಿದ್ದರೆ ಅದು ಇಂಗ್ಲಿಷ್‌ ಬಾರದೇ ಇರುವವರಿಗೆ ಕಾರ್ಯ ವಿಧಾನದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವೇ ಆಗುವುದಿಲ್ಲ.