ಪತ್ನಿ ಮೇಲೆ ಅನುಮಾನಗೊಂಡ ಟೆಕ್ಕಿ ಮನೆಯಲ್ಲಿ ಬರೋಬರಿ 22 ಗುಪ್ತ ಕ್ಯಾಮೆರಾ ಇಟ್ಟಾಗ ತಿಳಿಯಿತು ಪತ್ನಿಯ ಅಸಲಿ ಹೊಡೆತ..

0
645

ಪತಿ ಪತ್ನಿ ಇಬ್ಬರ ನಡುವೆ ಅನುಮಾನ ಎನ್ನುವ ಭೂತ ಪ್ರವೇಶ ಮಾಡಿದರೆ ಏನೆಲ್ಲಾ ನಡೆಯುತ್ತೆ ಎನ್ನುವುದಕ್ಕೆ ಹಲವು ಘಟನೆಗಳೇ ಸಾಕ್ಷಿಯಾಗಿವೆ. ಒಂದು ಹೆಂಡತಿಯ ಮೇಲೆ ಅನುಮಾನ ವಿರುವ ಗಂಡ ಅದರ ಸತ್ಯವನ್ನು ತಿಳಿಯಲು ತಮ್ಮ ಮರ್ಯಾದೆಯನ್ನು ತೆಗೆದುಕೊಳ್ಳುವುದು ಸಮಾಜದಲ್ಲಿ ನಡೆಯುತ್ತಿದೆ. ಇನ್ನೂ ಹಲವು ಅನುಮಾನಗಳು ಹತ್ಯಯಂತ ಕೃತ್ಯಕ್ಕೆ ಜಾರಿವೆ ಇದರಿಂದ ಕೋರ್ಟ್ ಕಛೇರಿ ಅಲೆದು ಅದೆಷ್ಟೋ ಸಂಸಾರಗಳು ಬಿದಿಯಲ್ಲಿವೆ. ಇಂತಹದೆ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪತ್ನಿಯ ಮೇಲೆ ಸಂಶಯ ಹೊಂದಿದ್ದ ಪತಿಯೊಬ್ಬ ಆಕೆಯ ಚಲನವಲನ, ಚಾಟಿಂಗ್‌ ಇತ್ಯಾದಿ ಖಾಸಗಿ ವಿಚಾರಗಳ ಮೇಲೆ ಕಣ್ಣಿಡಲು 22 ಸೂಕ್ಷ್ಮ ಕ್ಯಾಮೆರಾಗಳನ್ನು ಅಳವಡಿಸಿ ಸಿಕ್ಕಿ ಬಿದ್ದು ಪತ್ನಿಯಿಂದ ತಲೆಒಡಿಸಿಕೊಂಡ ಘಟನೆ ನಡೆದಿದೆ.

Also read: ಮಗ ಪ್ರೀತಿಸಿ ಮೋಸ ಮಾಡಿ ಬಿಟ್ಟು ಹೋದ ಹುಡುಗಿಗೆ ಅವನ ತಂದೆ-ತಾಯಿಗಳು ಏನು ಮಾಡಿರಬಹುದು??

ಏನಿದು ಘಟನೆ?

ಪತ್ನಿ ಮೇಲಿದ್ದ ಅನುಮಾನದಿಂದ ಟೆಕ್ಕಿಯೊಬ್ಬನು ಮನೆಯಲ್ಲಿ ಹಾಗೂ ಪತ್ನಿಯ ಮೊಬೈಲ್‍ನಲ್ಲಿ ಸ್ಪೈಕ್ಯಾಮೆರಾವನ್ನು ಅಳವಡಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಪತಿಗೆ ಬ್ಯಾಟ್‍ನಿಂದ ತಲೆಗೆ ಹೊಡೆದ ಪರಿಣಾಮ ಪತಿಯ ತಲೆಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಟೆಕ್ಕಿ ಪತ್ನಿಯ ಮೊಬೈಲ್‌ಗೆ ಸ್ಪೈವೇರ್‌ಅನ್ನು ಅಳವಡಿಸಿದ್ದ ಸಂಶಯ ಪೀಡಿತ ಪತಿ, ಆಕೆ ಯಾರ ಜತೆ ಮಾತನಾಡುತ್ತಾಳೆ ಎಂದೆಲ್ಲಾ ಕದ್ದಾಲಿಸುತ್ತಿದ್ದ. ಈ ವಿಚಾರ ಪತ್ನಿಗೆ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದು ಮಗನ ಕ್ರಿಕೆಟ್‌ ಬ್ಯಾಟ್‌ನಿಂದ ಪತಿಯ ತಲೆಯನ್ನು ಒಡೆದು ಹಾಕಿದ್ದಾಳೆ. ಈ ಜೋಡಿ ಜಯನಗರದ ನಿವಾಸಿಗಳಾಗಿದ್ದು, 44 ವರ್ಷದ ಪತಿಯ ಸಂಶಯ ಪೀಡಿತ ಮನೋಭಾವದಿಂದ ನೊಂದ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಈ ನಡುವೆ ಪತಿ ತನ್ನ ಸೌಂದರ್ಯವನ್ನು ಹೊಡೆದು ಹಾಳು ಮಾಡಿದ್ದಾಳೆ ಎಂದು ದೂರಿದ್ದಾನೆ.

ಆರಂಭದಲ್ಲಿ ಇಬ್ಬರು ಬಹಳ ಅನ್ಯೂನ್ಯವಾಗಿದ್ದರು. 2007ರಲ್ಲಿ ಟೆಕ್ಕಿ ಸುದರ್ಶನ್‌ ವಧು ಅನ್ವೇಶಿಸಿ ಹೋದಾಗ ಆಕೆಯ ತಂಗಿಯ ಮೇಲೆ ಮನಸ್ಸಾಗಿದೆ. ಆದರೆ ಹುಡುಗಿ ಕಾಲೇಜಿನಲ್ಲಿ ಓದುತ್ತಿರುವುದರಿಂದ ಮದುವೆ ಮಾಡಲು ಪೋಷಕರು ಒಪ್ಪಿಲ್ಲ. ನಂತರ ಮೂರು ವರ್ಷಗಳ ವರೆಗೆ ಆ ಹುಡುಗಿಯ ಜತೆ ಸಂಪರ್ಕ ಇಟ್ಟುಕೊಂಡಿದ್ದ ಸುದರ್ಶನ್‌ ಕೊನೆಗೆ 2011ರಲ್ಲಿ ಮದುವೆಯಾಗಿದ್ದಾರೆ. ಇವರಿಬ್ಬರಿಗೂ ಬರೋಬ್ಬರಿ 11 ವರ್ಷ ಅಂತರವಿದೆ. ಮದುವೆಯಾದ 2 ವರ್ಷಕ್ಕೆ ಮಗ ಜನಿಸುತ್ತಾನೆ. ಆದರೆ ಇತ್ತೀಚೆಗೆ ಮನೆಯಲ್ಲಿರುವ ಪತ್ನಿ ವಿನಯ ಅವರ ಬಗ್ಗೆ ಸಂಶಯ ಪಡಲು ಆರಂಭಿಸುತ್ತಾನೆ. ಕಚೇರಿಯಲ್ಲಿ ರಜೆ ತೆಗೆದುಕೊಂಡು ಪತ್ನಿಯ ಮೇಲೆ ಹದ್ದಿನ ಕಣ್ಣಿಡಲು ಆರಂಭಿಸುತ್ತಾನೆ.
ಅಡುಗೆ ಕೋಣೆ ಸೇರಿದಂತೆ ಮನೆಯಲ್ಲಿ ಸೂಕ್ಷ್ಮ ಸ್ಪೈ ಕ್ಯಾಮೆರಾಗಳನ್ನು ಅಳವಡಿಸುತ್ತಾನೆ. ಅವುಗಳೆಲ್ಲವನ್ನು ತನ್ನ ಮೊಬೈಲ್‌ನಲ್ಲಿ ನಿಯಂತ್ರಿಸಲು ಆರಂಭಿಸುತ್ತಾನೆ ಎಂಬ ಮಾಹಿತಿ ನೀಡುತ್ತಾರೆ.

ಈ ಜೋಡಿಯ ಪ್ರಕರಣವನ್ನು ತನಿಖೆ ನಡೆಸಿದ ವನಿತಾ ಸಹಾಯವಾಣಿಯ ಹಿರಿಯ ಆಪ್ತ ಸಮಾಲೋಚಕಿ ಬಿಎಸ್‌ ಸರಸ್ವತಿ. ಇಷ್ಟೆಲ್ಲಾ ಆದರೂ ಬೇರೊಬ್ಬರ ಜತೆ ಸಂಪರ್ಕದಲ್ಲಿ ಪತ್ನಿ ಇದ್ದಾಳೆ ಎಂಬ ಅನುಮಾನಕ್ಕೆ ಪುಷ್ಠಿ ಸಿಗುವುದಿಲ್ಲ. ಕಳೆದ ವರ್ಷ ಪತ್ನಿಯ ಜನ್ಮದಿನಕ್ಕೆ ವಿಶೇಷ ಪ್ರೀತಿ ತೋರಿಸಿ, ಒಂದು ಮೊಬೈಲ್‌ಅನ್ನು ಕೊಡುಗೆಯಾಗಿ ಕೊಡುತ್ತಾನೆ. ಅದರಲ್ಲಿ ಸ್ಪೈವೇರ್‌ ಅಳವಡಿಸಿರುತ್ತಾನೆ. ಅದರ ಮೂಲಕ ಮೆಸೇಜ್‌, ಕಾಲ್ ಮತ್ತು ಫೋಟೋ ಎಲ್ಲವನ್ನೂ ಕದ್ದು ನೋಡುತ್ತಿರುತ್ತಾನೆ ಎಂದು ಸರಸ್ವತಿ ಅವರು ಸುದರ್ಶನ್‌ ಅವರ ಚಟುವಟಿಗಳನ್ನು ವಿವರಿಸಿದ್ದಾರೆ.

ಕ್ಯಾಮರಾ ಪತ್ತೆಯಾಗಿದ್ದು ಹೇಗೆ?

ಏಪ್ರಿಲ್‌ ತಿಂಗಳಲ್ಲಿ ಅನುಮಾನ ಪಿಶಾಚಿ ಪತಿರಾಯನಿಗೆ ಅದೇನು ಅನಿಸಿತೋ ಏನೋ ಪತ್ನಿಗೆ ತಾನು ಗುಪ್ತವಾಗಿ ಕ್ಲಿಕ್ಕಿಸಿದ್ದ ಒಂದು ಫೋಟೋವನ್ನು ತೋರಿಸಿ, ಆಕೆಯ ಜತೆಗಿದ್ದ ಯುವಕ ಯಾರೆಂದು ಕೇಳಿದ್ದಾನೆ. ಅಸಲಿಗೆ ಆಕೆಯ ಜತೆಗಿದ್ದ ವ್ಯಕ್ತಿ ಆಕೆಯ ಸೋದರಳಿಯನಾಗಿರುತ್ತಾನೆ. ಆಗಲೇ ಆಕೆಗೆ ಗಂಡನ ಸಂಶಯ ಬುದ್ಧಿ ಅರಿವಿಗೆ ಬಂದಿದ್ದು. ಇದರಿಂದ ಕೋಪಗೊಂಡ ಪತ್ನಿ ಮಗನ ಕ್ರಿಕೆಟ್‌ ಬ್ಯಾಟ್‌ ಮೂಲಕ ಪತಿಯ ತಲೆಗೆ ಹೊಡೆದಿದ್ದಾಳೆ. ತಲೆಗೆ ಹಲವು ಸ್ಟಿಚ್‌ ಹಾಕಿಸಿಕೊಂಡಿರು ಭೂಪ ಇದೀಗ ಪತ್ನಿಯ ವಿರುದ್ಧ ಪೊಲೀಸರಿಗೆ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದಾನೆ. ವಾರಗಳ ವರೆಗೆ ಜೋಡಿಯನ್ನು ಗುಪ್ತ ಸಮಾಲೋಚನೆಗೆ ಒಳಪಡಿಸಲಾಗಿದ್ದು, ಫಲಕಾರಿಯಾಗದೆ ವಿಚ್ಛೇದನದ ಅರ್ಜಿ ತನಿಖೆಯಲ್ಲಿದೆ.