ಚಂಡೀಗಢ್ ಟೈಲರ್ ಮನೆ ಮೇಲೆ ದಾಳಿ 30 ಲಕ್ಷ ನಗದು, 2.5 ಕೆಜಿ ಚಿನ್ನ ಜಪ್ತಿ

0
576

ಚಂಡೀಗಢ್ : ನೋಟ್ ನಿಷೇಧದ ನಂತರ ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವವರ ವಿರುದ್ಧ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು, ಶನಿವಾರ ಚಂಡಿಗಢದ ಪ್ರತಿಷ್ಠಿತ ಟೈಲರ್ ಮನೆ ಮೇಲೆ ದಾಳಿ ಮಾಡಿ, 30 ಲಕ್ಷ ರುಪಾಯಿ ನಗದು ಹಾಗೂ ಎರಡೂವರೆ ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇಡಿ ಅಧಿಕಾರಿಗಳು ಪಂಜಾಬಿನ ಮೊಹಾಲಿ ಮತ್ತು ಚಂಡೀಗಡದ ಸೆಕ್ಟರ್ 22 ಪ್ರದೇಶದಲ್ಲಿರುವ ಮಹಾರಾಜ ಟೈಲರ್ ಅಂಗಡಿ ಮೇಲೆ ಶನಿವಾರ ದಾಳಿ ನಡೆಸಿದರು.

37 ಲಕ್ಷ ನಗದು ಜಪ್ತಿ, ಐವರ ಬಂಧನ (ಈರೋಡ್, ತಮಿಳುನಾಡು): ಕಾರೊಂದರಲ್ಲಿ ಸಾಗಿಸುತ್ತಿದ್ದ 2 ಸಾವಿರ ಮುಖಬೆಲೆಯ 37 ಲಕ್ಷ ನಗದನ್ನು ವಶಕ್ಕೆ ಪಡೆದಿರುವ ಪೊಲೀಸರು, ಐವರನ್ನು ಬಂಧಿಸಿದ್ದಾರೆ.

ಟೈಲರ್ ಅಂಗಡಿಯ ಮಾಲೀಕ 2.5 ಕೆಜಿ ಚಿನ್ನ ಖರೀದಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.