ಜಗತ್ಪ್ರಸಿದ್ದ ಐತಿಹಾಸಿಕ ತಾಜ್ ಮಹಲ್-ಅನ್ನು ತೇಜೋಮಹಾಲಯ ಎಂದು ನಾಮಕರಣ ಮಾಡುತ್ತೇವೆ: ಬಿ.ಜೆ.ಪಿ. ಸಂಸದ!! ಈ ವಿವಾದಾತ್ಮಕ ಕೆಲಸದ ಅವಶ್ಯಕತೆ ಇದೆಯೇ??

0
317

ತನ್ನ ಸುಂದರವಾದ ವಸ್ತು ಶಿಲ್ಪದಿಂದಲೇ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುವ, ಮತ್ತು ಇದೆ ಕಾರಣಕ್ಕೆ ವಿಶ್ವದ 7 ಅದ್ಭುತಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಆಗ್ರಾದ ತಾಜ್ ಮಹಲ್ ಇನ್ನು ಕೆಲವೇ ದಿನಗಳವರೆಗೆ ಮಾತ್ರ ಉಳಿಯಲಿದೆಯಂತೆ ನಂತರ ಅದು ತೇಜೋ ಮಂದಿರ ವಾಗಲಿದೆಯಂತೆ, ಹೀಗೆಂದು ಬಿಜೆಪಿಯ ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ.

16 ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಅರಸ ಶಾಹಜಹಾನ್ ನಿಂದ ನಿರ್ಮಿಸಲ್ಪಟ್ಟಿರುವ ಆಗಿನ ಕಾಲದ ಅತ್ಯಂತ ದುಬಾರಿ ಕಟ್ಟಡ ಮತ್ತು ವಿಶ್ವದ 7 ಅದ್ಭುತಗಳಲ್ಲಿ ಒಂದು ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಆಗ್ರಾದ ತಾಜ್ ಮಹಲ್ ಅತಿ ಶೀಘ್ರದಲ್ಲಿ ತೇಜೋ ಮಂದಿರ ಆಗಲಿದೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ವಿನಯ್ ಕಟಿಯಾರ್ ಅವರು ವಿವಾದಾತ್ಮಹ ಹೇಳಿಕೆ ನೀಡಿದ್ದಾರೆ.

ಹೌದು, ತಾಜ್ ಮಹಲ್ ಅತಿ ಶೀಘ್ರದಲ್ಲಿ ತೇಜೋ ಮಂದಿರ ಆಗಲಿದೆಯಂತೆ. ಆಗ್ರಾದಲ್ಲಿ ಫೆ.18 ರಿಂದ 10 ದಿನಗಳ ಕಾಲ ನಡೆಯುವ ತಾಜ್ ಮಹೋತ್ಸವದ ಬಗ್ಗೆ ಮಾತನಾಡುವಾಗ ಹೇಳಿದ್ದಾರೆ. ಇದು ನಮ್ಮ ದೇವಾಲಯ. ಇದರ ಹೆಸರಿನಲ್ಲಿ ಮಹೋತ್ಸವ ನಡೆಸುವುದು ಒಳ್ಳೆಯ ವಿಚಾರ ಎಂದಿದ್ದಾರೆ.

ತಾಜ್ ಮತ್ತು ತೇಜ್ ಪದಗಳ ಮಧ್ಯೆ ಸಾಕಷ್ಟು ವ್ಯತ್ಯಾಸ ಇಲ್ಲ, ಮೊಘಲ್ ದೊರೆ ಔರಂಗಜೇಬ್‌ನಿಂದಾಗಿ ನಮ್ಮ ತೇಜೋ ಮಂದಿರ ಸ್ಮಶಾನ ಭೂಮಿಯಾಯಿತು. ಹಾಗಾಗಿ ತಾಜ್ ಮಹಲ್ ಅನ್ನು ತೇಜೋ ಮಂದಿರವಾಗಿ ಪರಿವರ್ತಿಸಲಿದ್ದೇವೆ ಎಂದು ಹೇಳಿದ್ದಾರೆ.

ಈ ರೀತಿ ವಿವಾದಾತ್ಮಕ ಹೇಳಿಕೆ ಬಿಜೆಪಿ ರಾಜ್ಯಸಭೆ ಸದಸ್ಯ ವಿನಯ್ ಕಟಿಯಾರ್ ಅವರಿಗೆ ಏನು ಹೊಸತಲ್ಲ, ಅವರು ಈ ಹಿಂದೆಯೂ ಇದೆ ತಾಜ್ ಮಹಲ್ ವಿಷಯವನ್ನು ಮುಂದಿಟ್ಟು, ತಾಜ್ ಮಹಲ್ ಮೊದಲು ಶಿವನ ದೇವಸ್ಥಾನವಾಗಿತ್ತು ಎಂದು ಹೇಳಿ ಸಾಕಷ್ಟು ವಿವಾದ ಸೃಷ್ಟಿಸಿದ್ದರು.