ಟೀಕೆದಾರರ ಬಾಯಿ ಮುಚ್ಚಿಸಿದ ಯುಪಿ ಸಿಎಂ ಯೋಗಿ, ತಾಜ್ ಮಹಲ್ ಪ್ರತಿಯೊಬ್ಬ ಭಾರತಿಯನಿಗೂ ಸೇರಿದ್ದು ಎಂದು ಘೋಷಣೆ ಮಾಡಿದ್ದಾರೆ..

0
473

ಪ್ರೀತಿಯ ಜ್ಯೋತಕ ತಾಜಮಹಲ್​.. ವಿಶ್ವದ ಏಳು ಅದ್ಭುತಗಳಲ್ಲಿ ಒಂದು.. ಉತ್ತರ ಪ್ರದೇಶದಲ್ಲಿರುವ ಈ ಪ್ರೇಮಿಗಳ ಮಹಲ್​ ಪ್ರೇಮಿಗಳ ನೆಚ್ಚಿನ ಪ್ರವಾಸಿ ತಾಣ. ಈ ತಾಣ ನಮ್ಮ ರಾಜ್ಯದಲ್ಲಿ ಇಲ್ವಾಲ್ಲಾ ಎಂದೋ ಅದೆಷ್ಟೋ ರಾಜ್ಯಗಳು ಗೊನಗುತ್ತಿವೆ. ಆದ್ರೆ ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಬಿಡುಗಡೆ ಮಾಡಿದ ಕೈಪಿಡಿಯಲ್ಲಿ ತಾಜ್​ಮಹಲ್​ ಮರೆಯಾಗಿತ್ತು.


ಯು.ಪಿಯ ಬಿಜೆಪಿ ಸರ್ಕಾರ ಈ ಎಡವಟ್ಟಿನಿಂದ ಒಂದಿಲ್ಲಾ ಒಂದು ವಿವಾದಗಳು ದಿನಂಪ್ರತಿ ಉದ್ಭವಿಸುತ್ತಿದ್ದವು. ಆದ್ರೆ ಯು.ಪಿ ಸಿಎಂ ಯೋಗಿ ಆದಿತ್ಯನಾಥ್​​ ಈ ಎಲ್ಲಾ ವಿವಾದಕ್ಕೆ ತೇಪೆ ಹಚ್ಚುವ ಕಾರ್ಯವನ್ನು ಮಾಡಿದ್ದಾರೆ. ಅ.26 ರಂದು ಸಿಎಂ ತಾಜ್​ಮಹಲ್​ ಭೇಟಿ ನೀಡಿ, ಈ ಸ್ಮಾರಕ ನಮ್ಮದೇ. ಈ ಸಾಸ್ಕೃತಿ ಸ್ಮಾರಕದ ಹಿಂದೆ ಭಾರತೀಯರ ಬೆವರಿನ ಹನಿ ಇದೆ. ಹೀಗಾಗಿ ಇದನ್ನು ನಿರ್ಮಾಣ ಮಾಡಿದವರು ಯಾರು ಎಂಬುದು ಮುಖ್ಯ ಅಲ್ಲವೇ ಅಲ್ಲ ಎಂದು ತಿಳಿಸಿದ್ದಾರೆ.


ಸಿಎಂ 17ನೇ ಶತಮಾನದ ವಾಸ್ತು ಶಿಲ್ಪ ಕಲೆ ಕಣ್ಣು ತುಂಬಿಕೊಂಡ್ರು.ಅಲ್ಲದೆ ತಾಜ್​​ಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಜೊತೆ ಫೊಟೋಗೆ ಪೋಸ್​ ನೀಡಿದ್ರು. ಅಲ್ಲದೆ ಮೋದಿರವರ ಸ್ವಚ್ಛ ಭಾರತದ ಅಭಿಯಾನಕ್ಕೆ ಪುರಕವಾಗಿ ಗಾರ್ಡನ್​ ಕ್ಲೀನ್​ ಮಾಡಿದ್ರು. ಸಿಎಂ ಬೇಟಿ ಹಿನ್ನೆಲೆಯಲ್ಲಿ 14 ಸಾವಿರ ಪೊಲೀಸ್​​ರನ್ನು ನಿಯೋಜಿಸಲಾಗಿತ್ತು.
ಇನ್ನು ತಾಜ್​​ಮಹಲ್​ ಹೆಸರು ಕೈಪಿಡಿಯಿಂದ ಬಿಟ್ಟ ಮೇಲೆ, ಇದೇ ಮೊದಲ ಬಾರಿಗೆ ಸಿಎಂ ತಾಜ್​ಮಹಲ್​ಗೆ ಭೇಟಿ ನೀಡಲು ಮುಂದಾದ್ರು. ಮೊದಲು ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ತಾಜ್‌ಮಹಲ್‌ ಸೇರಿಸದಿರುವುದರಿಂದ ಆರಂಭವಾದ ವಿವಾದ, ಸಚಿವರ ಹೇಳಿಕೆಗಳಿಂದ ತಾರಕಕ್ಕೇರಿತ್ತು. ಇನ್ನು ಬಿಜೆಪಿ ಸಂಸದ ತಾಜ್​​ಮಹಲ್​ ಸ್ಥಳ ಮೊದಲು ಶಿವನ ದೇವಾಲಯವಾಗಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ರು.