ತಣ್ಣೀರಿನ ಸ್ನಾನದಿಂದ ಇಷ್ಟೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ಚಳಿ ಆದ್ರೂ ತಡ್ಕೋತೀರಾ!!!

4
6007

Kannada News | Health tips in kannada

ತಣ್ಣೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭ ಗೊತ್ತಾ???

೧) ತೂಕ ಕಡಿಮೆಯಾಗುತ್ತದೆ:
ತಣ್ಣೀರಿನ ಸ್ನಾನ ದೇಹದ ಮೆಟಾಬಾಲಿಕ್ ರೇಟ್ ಜಾಸ್ತಿ ಮಾಡುವುದರಿಂದ ಕ್ಯಾಲೊರಿ ಬರ್ನಿಂಗ್ ಅಧಿಕವಾಗಿ ತೂಕವು ಡಿಮೆಯಾಗುತ್ತದೆ.

೨) ಸ್ನಾಯುಗಳು ಬಲಿಷ್ಠಗೊಳ್ಳುತ್ತದೆ:
ತಣ್ಣೀರು ಮೈಮೇಲೆ ಬಿದ್ದಾಗ ಸ್ನಾಯುಗಳು , ಮಾಂಸ ಖಂಡಗಳು ಕೆಲ ಸೆಕೆಂಡ್ ಗಳ ಕಾಲ ಸಂಕುಚಿತಗೊಂಡು ನಂತರ ಹಿಗ್ಗುತ್ತವೆ.ಈ ಪ್ರಕ್ರಿಯೆ ಇಂದ ಸ್ನಾಯುಗಳಿಗೆ ಅಧಿಕ ರಕ್ತಸಂಚಾರ ಉಂಟಾಗಿ ಅವು ಬಲಿಷ್ಠಗೊಳ್ಳುತ್ತವೆ.

೩) ಏಕಾಗ್ರತೆ ಹೆಚ್ಚುತ್ತದೆ:
ತಣ್ಣೀರು ಸ್ನಾನ ಮಾಡಿದರೆ ಮೆದಳು ಜಾಗೃತವಾಗುವುದರಿಂದ ಏಕಾಗ್ರತೆ ಹೆಚ್ಚುತ್ತದೆ.

೪) ಚರ್ಮ ಮತ್ತು ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ:
ತಣ್ಣೀರು ಚರ್ಮದ ಹಾಗು ಕೂದಲಿನ ಬುಡಕ್ಕೆ ಅಧಿಕ ರಕ್ತವನ್ನು ಪ್ರಹರಿಸುವುದರಿಂದ ಮತ್ತು ಎಣ್ಣೆಯ ಅಂಶವನ್ನು ಹೆಚ್ಚು ಕಡಿಮೆ ಮಾಡದೆ ಇರುವುದರಿಂದ ಆರೋಗ್ಯ ಹೆಚ್ಚಾಗುತ್ತದೆ.

watch

೫) ಪುರುಷತ್ವವನ್ನು ಹೆಚ್ಚು ಮಾಡುತ್ತದೆ:
ತಣ್ಣೇರಿನಿಂದ ಸ್ನಾನ ಮಾಡಿದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಗಳ ಪ್ರಮಾಣ ಅಧಿಕವಾಗಿ ವೀರ್ಯಾಣುಗಳ ಸಂಖ್ಯೆ ಅಧಿಕವಾಗುತ್ತದೆ ಹಾಗು ಲೈಂಗಿಕ ಆರೋಗ್ಯ ವೃದ್ಧಿಯಾಗುತ್ತದೆ.

೬) ಇಮ್ಮ್ಯೂನಿಟಿ ಹೆಚ್ಚಾಗುತ್ತದೆ:
ಸಂಶೋಧನೆಗಳ ಪ್ರಕಾರ ತಣ್ಣೀರು ಸ್ನಾನು ಮಾಡುವವರಲ್ಲಿ ಬಿಸಿ ನೀರು ಸ್ನಾನ ಮಾಡುವವರಿಗಿಂತ ಹೆಚ್ಚು ಬಿಳಿ ರಕ್ತ ಕಣಗಳು ಇರುತ್ತದೆ ಎಂದು ತಿಳಿದುಬಂದಿದೆ. ಇದರಿಂದ ರೋಗ ನಿರೋಧಕ ಶಕ್ತಿಯು ಅಧಿಕವಾಗುತ್ತದೆ.

೭) ಖಿನ್ನತೆಯನ್ನು ದೂರಮಾಡುತ್ತದೆ:
ತಣ್ಣೇರಿನಿಂದ ಸ್ನಾನ ಮಾಡಿದಾಗ ನಾರ್ ಅಡ್ರಿನಾಲಿನ್ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚಾಗುವುದರಿಂದ ಖಿನ್ನತೆ, ಬೇಸರ, ಆಲಸ್ಯ ದೂರವಾಗುತ್ತದೆ.

೮) ಶ್ವಾಶಕೋಶಗಳ ಕಾರ್ಯದಕ್ಷತೆ ಹೆಚ್ಚಾಗುತ್ತದೆ:
ತಣ್ಣೇರಿನ ಸ್ನಾನ ಉಸಿರಾಟಕ್ಕೆ ಸಂಬಂಧಪಟ್ಟ ಸ್ನಾಯುಗಳ, ಶ್ವಾಸಕೋಶಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಿ ಉಸಿರಾಟವನ್ನು ಧೀರ್ಘವಾಗಿ, ಸರಾಗವಾಗಿರುವಂತೆ ಮಾಡುತ್ತದೆ.

೯) ಒತ್ತಡ ನಿರ್ವಹಣೆಯಲ್ಲಿ ಸಹಾಯಕಾರಿಯಾಗಿದೆ:
ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹದಲ್ಲಿ ಒತ್ತಡ ನಿರ್ವಣೆ ಮಾಡುವ ಹಾರ್ಮೋನ್ ಗಳ ಪ್ರಮಾಣ ಅಧಿಕವಾಗಿ ಮಾನಸಿಕ ಉದ್ವೇಗಗಳು ಕಡಿಮೆಯಾಗುತ್ತವೆ. ಹಾಗೆಯೆ ಹಾರ್ಮೋನ್ ಗಳ ಏರುಪೇರುಗಳು ಕಡಿಮೆಯಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

೧೦) ನಿದ್ರಾಹೀನತೆಗೆ ರಾಮಬಾಣ:
ರಾತ್ರಿ ೧೦ ನಿಮಿಷಗಳ ಕಾಲ ತಣ್ಣೇರಿನ ಶವರ್ ಕೆಳಗೆ ನಿಂತಲ್ಲಿ ಮೆಲಟೋನಿನ್ ಅಂಶಗಳು ಅಧಿಕವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

Also Read: ನಿಮ್ಮ ಮಕ್ಕಳು ಎತ್ತರವಾಗಿ ಬೆಳೆಯಲು ಈ ಟಿಪ್ಸ್ follow ಮಾಡಿ!!