ಮಳೆಗಾಲದಲ್ಲಿ ಈ ಎಂಟು ವಿಷಯಗಳನ್ನು ಅನುಸರಿಸಿದರೆ, ಕೂದಲು ಹಾಳಾಗುವುದಿಲ್ಲ!!

0
885

ಸುರಿಯುವ ಮಳೆಯಲ್ಲಿ ನೆನೆಯಲು ಎಲ್ಲರಿಗೂ ಒಂಥಾರ ಖುಷಿ. ಆದರೆ ಅದರಿಂದ ಶುರುವಾಗುವ ಸಮಸ್ಯೆಗಳಿಂದ ಕಿರಿಕಿರಿ ಉಂಟಾಗುವುದು ಮಾತ್ರ ಅಸಹನೀಯ. ಆದ್ದರಿಂದ ಮಳೆಗಾಲದಲ್ಲಿ ಕೆಲವು ವಿಷಯಗಳ ಬಗ್ಗೆ ಸ್ವಲ ಗಮನ ನೀಡಿದರೆ ಆಗುವಂತಹ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಬಹುದು. ಮಳೆಗಾಲದಲ್ಲಿ ನಿಮ್ಮ ಕೂದಲಿಗೆ ವಿಶೇಷ ಆರೈಕೆಯ ಅವಶ್ಯಕತೆ ಇರುತ್ತದೆ. ಹೆಚ್ಚಿರುವ ಮಾಲಿನ್ಯದೊಂದಿಗೆ ಮಳೆ ನೀರಿನಿಂದ ಕೂದಲು ಒದ್ದೆಯಾದರೆ ಹತ್ತಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮುಂಜಾಗ್ರತೆ ಕೈಗೊಳ್ಳುವುದು ಅವಶ್ಯಕ…

  1. ಕೂದಲನ್ನು ಜಾಸ್ತಿ ಒದ್ದೆಯಾಗಲು ಬೀಡಬೇಡಿ, ಮಳೆನೀರಿನೊಂದಿಗೆ ಕಶ್ಮಲಗಳೂ ಕೂದಲಿನೊಂದಿಗೆ ಸೇರಿ ಬುಡದಲ್ಲಿ ಹಾಗೆಯೇ ಉಳಿಯುತ್ತದೆ. ಇದರಿಂದ ತಲೆಬುಡದಲ್ಲಿ ತುರಿಕೆ ಉಂಟಾಗಬಹುದು.Image result for Hair is wet in rain water

2. ಮಳೆಗಾಲದಲ್ಲಿ ಸೂರ್ಯನ ಬಿಸಿಲು ಹಾಗೂ ಮಳೆಯ ಹನಿ ಇವುಗಳರಡೂ ಜತೆಯಾಗಿ ಕೂದಲನ್ನು ಹಾಳು ಮಾಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ರೇನ್‍ಕೋಟ್ ಅಥವಾ ಛತ್ರಿಯನ್ನು ಬಳಸುವುದು ಸುರಕ್ಷಿತ.Image result for rain with girl umbrella and joker

3.  ಮಳೆ ನೀರಿನಲ್ಲಿ ಕೂದಲು ಒದ್ದೆಯಾಗಿದ್ದರೆ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆದು ಚೆನ್ನಾಗಿ ಒಣಗಿಸಿ, ಬೇಕಿದ್ದರೆ ಕಂಡಿಶನರ್ ಕೂಡ ಬಳಸಬಹುದು.

Image result for Hair is wet in rain water

4.  ಮಳೆಗಾಲದಲ್ಲಿ ಪ್ರವಾಸ ಕೈಗೊಂಡರೆ ಜೊತೆಯಲ್ಲಿ ಹೇರ್‍ಡ್ರಯರ್ ಇಟ್ಟುಕೊಳ್ಳುವುದು ಉತ್ತಮ. ಒಂದು ವೇಳೆ ತಲೆ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಡ್ರಯರ್‍ನಿಂದ ಕೂದಲನ್ನು ನಯವಾಗಿ ಒಣಗಿಸಿಕೊಳ್ಳಬಹುದು. ಇದರಿಂದ ಕೂದಲು ಒದ್ದೆಯಿಂದ ಆಗುವ ವಾಸನೆ ಹಾಗೂ ತುರಿಕೆ ನಿವಾರಿಸಬಹುದು.
Related image
5.  ಹೊಟ್ಟಿನ ಸಮಸ್ಯೆ ಇದ್ದವರು ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಹತ್ತಯಿಂದ ಕೂದಲು ಬುಡಕ್ಕೆ ಹಚ್ಚಿ ಮಸಾಜ್ ಮಾಡಿ ಹರ್ಬಲ್ ಶಾಂಪೂವಿನಿಂದ ತಲೆ ಸ್ನಾನ ಮಾಡಿಕೊಳ್ಳುವುದು ಉತ್ತಮ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಮಾಡುವುದು ಒಳ್ಳೆಯದು. ಮಳೆಗಾಲದಲ್ಲಿ ಕೂದಲು ಶುಷ್ಕವಾಗುವುದರಿಂದ ಈ ರೀತಿ ಎಣ್ಣೆ ಬಳಕೆ ಮಾಡುವ ಅವಶ್ಯಕತೆ ಹೆಚ್ಚಾಗಿರುತ್ತದೆ. ಇದರಿಂದ ಹೊಟ್ಟು ನಿವಾರಣೆ ಮತ್ತು ಕೂದಲು ಮೃದುವಾಗುತ್ತವೆ.

6. ಕೂದಲನ್ನು ಒದ್ದೆಯಾಗಿ ಬಿಡದೇ ತಕ್ಷಣವೇ ಆರಿಸಿಕೊಳ್ಳುವುದು ಒಳ್ಳೆಯದು ಇದರಿಂದ ಕೂದಲು ಉದುರುವುದನ್ನು ತಪ್ಪಿಸಬಹುದು.
7.  ಮನೆಯಿಂದ ಹೊರಗಡೆ ಹೋಗುವಾಗ ಸಿರಮ್ ಅನ್ನು ಕೂದಲಿಗೆ ಹಚ್ಚಿದ್ದರೆ ಕೂದಲಿಗೆ ಆಗುವಂತಹ ಹಾನಿಯನ್ನು ತಪ್ಪಿಸಬಹುದು.( ಸಿರಮ್ ಬಳಸುವಾಗ ಕೂದಲು ಬುಡಕ್ಕೆ ತಾಕದಂತೆ ನೋಡಿಕೊಳ್ಳಬೇಕು)

8. ಹೆಚ್ಚಿನ ಪ್ರಮಾಣದ ನೀರು ಹಾಗೂ ಹಣ್ಣುಗಳ ಸೇವನೆ ಕೂದಲಿನ ಸಂರಕ್ಷಣೆಗೆ ಸಹಕಾರಿ.