ಮೆಜೆಸ್ಟಿಕ್‌ ಅಂಡರ್‌ ಪಾಸ್‌-ನಲ್ಲಿ ಇನ್ಮುಂದೆ ನಡೆಯಲ್ಲ ವ್ಯಾಪಾರ, ಮತ್ತು ಅನೈತಿಕ ಚಟುವಟಿಕೆಗಳು; ಪೊಲೀಸರಿಂದ ಆಗದ ಕೆಲಸ ಮಾಡಿದ್ದು ಯಾರು ಗೊತ್ತಾ??

0
6719

ಬೆಂಗಳೂರು ಎಂದರೆ ಮೊದಲು ನೆನಪಿಗೆ ಬರೋದೆ ಮೆಜೆಸ್ಟಿಕ್ ಎಲ್ಲಿವೂ ಕಾಣದ ಕೆಲವು ಚಿತ್ರ-ವಿಚಿತ್ರಗಳು ನೋಡಲು ಸಿಗುವ ಸ್ಥಳವಾಗಿದ್ದು, ಕಡಿಮೆ ದರದಲ್ಲಿ ಖರೀದಿಗೆ ಬಂದವರ ಮೇಲೆ ದಬ್ಬಾಳಿಯಿಂದ ಹಿಡಿದು. ಮೈ ಮಾರಿಕೊಳ್ಳುವ ಜನರನ್ನು ಕಾಣುವ ಸ್ಥಳವಾಗಿತ್ತು, ರೈಲ್ವೆ ಸ್ಟೇಷನ್-ನಿಂದ ಅಂಡರ್‌ ಪಾಸ್‌ ಹೋದರೇನೆ ಕೆಲವರಿಗೆ ಸಮಾದಾನ ಎನ್ನುವ ರೀತಿಯಲ್ಲಿತ್ತು. ಇನ್ನೂ ಕೆಲವರು ಮೆಜೆಸ್ಟಿಕ್ ಅಂಡರ್ ಬ್ರಿಜ್ ಎಂದರೇನೆ ಹೆದರಿಕೆ ಬರುವ ರೀತಿಯಲ್ಲಿತ್ತು. ಅದಕ್ಕಾಗಿಯೇ ನಮ್ಮಂತವರಿಗೆ ಮನೆಯಲ್ಲಿ ಒಂದು ಭಾಗವಾಗಿ ಮೆಜೆಸ್ಟಿಕ್-ನಲ್ಲಿ ಹುಷಾರ್ ಅಲ್ಲಿಗೆ ಹೋದರೆ ಏನು ಖರೀದಿಸಬೇಡ ಕಳ್ಳರು, ಕೆಟ್ಟವರು ಇರುವ ಕರ್ನಾಟಕದ ಸ್ಥಳವದು ಎನ್ನುವ ರೀತಿಯಲ್ಲಿತ್ತು. ಈಗ ಆ ಮೆಜೆಸ್ಟಿಕ್ ಹೋಗಿ ಹೊಸ ಮೆಜೆಸ್ಟಿಕ್ ಆಗಿದೆ ಅದು ಹೇಗೆ ಅಂತ ಇಲ್ಲಿದೆ ನೋಡಿ.

Also read: ಕೈಕಾಲು ಇಲ್ಲದ 17 ವರ್ಷದ ಯುವತಿ ಅಂಗವೈಕಲ್ಯವನ್ನು ಮೀರಿ ಸಾಧನೆ ಮಾಡುತ್ತಿರುವ ಸಾಧನೆ, ಪ್ರತಿಭೆ ಎಲ್ಲರಿಗೂ ಮಾದರಿಯಾಗಿದೆ..

ಮೆಜೆಸ್ಟಿಕ್ ಅಲ್ಲಿ ಇನ್ಮುಂದೆ ಇಲ್ಲ ಕಿರೀಕಿರಿ?

ಹೌದು ರಾಜಧಾನಿ ಎಂದರೆ ಭಯ ಹುಟ್ಟಿಸುವ ಮೆಜೆಸ್ಟಿಕ್-ನಲ್ಲಿ ಇನ್ಮುಂದೆ ದಾದಾಗಿರಿ ನಡೆಯುದಿಲ್ಲ, ಅಂಡರ್ ಪಾಸ್‌ ವ್ಯವಹಾರ ನಡೆಯುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣದಿಂದ ಹಿಡಿದು ಕ್ರಾಂತಿ ಸಂಗ್ಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಇರುವ ಅಕ್ರಮ ಅಂಗಡಗಳನ್ನು ತೆರವುಗೊಳಿಸಲಾಗಿದ್ದು, ಇದೀಗ ಫುಲ್ ಕ್ಲೀನ್ ಆಗಿದೆ. ಪೊಲೀಸರಿಂದ ಆಗದ ಕೆಲ್ಸವನ್ನು RTI ಕಾರ್ಯಕರ್ತ ಮಾಡಿ ತೋರಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಪಾದಚಾರಿ ಸುರಂಗ ಮಾರ್ಗಗಳಲ್ಲಿ ವ್ಯಾಪಾರಿಗಳ ಅರಚಾಟ, ಕಿರುಚಾಟ ಪರಿಸ್ಥಿತಿ ಇಲ್ಲ. ಯಾವುದೇ ವ್ಯಾಪಾರಿಗಳ ಕಿರಿಕಿರಿ ಇಲ್ಲದೇ ಸಾರ್ವಜನಿಕರು ಮುಕ್ತವಾಗಿ ಸಂಚರಿಸಬಹುದು.ಇದರಿಂದ ನಿತ್ಯ ಲಕ್ಷಾಂತರ ಮಂದಿ ಬಳಸುವ ಈ ಸುರಂಗ ಮಾರ್ಗಗಳ ಚಿತ್ರಣವೇ ಈಗ ಚಿತ್ರಣವೇ ಬದಲಾಗಿದೆ.

Also read: ಹಾಲು ಮಾರಿ ಜೀವನ ಮಾಡುವ ವ್ಯಕ್ತಿ ಇಂದು 54 ಸಾವಿರ ಕೋಟಿ ಒಡೆಯನಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದು ಹೇಗೆ ಗೊತ್ತಾ??

ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಹೂಡಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಕಾರಣಕ್ಕೆ ದಶಕಗಳ ಕಾಲದ ಅಸಹ್ಯ ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ರವಿಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಅಂಡರ್‌ ಪಾಸ್‌ನಲ್ಲಿ ಹೋಗುತ್ತಿರುವವರಿಗೆ ವ್ಯಾಪಾರಿಗಳು ಹಾಗೂ ತೃತೀಯ ಲಿಂಗಿಗಳು ಪ್ರಯಾಣಿಕರಿಗೆ ಕಿರಿ-ಕಿರಿ ನೀಡುತ್ತಿದ್ದರು. ಇದನ್ನು ಪೊಲೀಸರ ಕಣ್ಣಿಗೆ ಕಂಡರು ಹಗಲು ಕುರುಡರಂತೆ ಇದ್ದರು. ಅಷ್ಟೇ ಅಲ್ಲದೇ ಅಕ್ರಮ ವ್ಯಾಪಾರಿಗಳಿಂದ ಮಾಮೂಲಿ ತೆಗೆದುಕೊಂಡು ತೆಪ್ಪಗೆ ಕುಳಿತ್ತಿದ್ದರು.

Also read: ಸಂಬಳದ ಹಣವನ್ನೆಲ್ಲಾ ಅನಾಥರಿಗೆ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ಸಹಸ್ರಮಾನದ ವ್ಯಕ್ತಿ ಶ್ರೀ ಕಲ್ಯಾಣಸುಂದರಂ ಇಡಿ ಜಗ್ಗತಿಗೆ ಮಾದರಿ..

ಇದಕ್ಕೆ ಏನಾದರು ಮಾಡಿ ಮುಕ್ತಿ ಹಾಡಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ರವಿಕುಮಾರ್ ಕಂಚನಹಳ್ಳಿ ಅರ್ಜಿಯನ್ನು ವಿಚಾರಣೆ ಮಾಡಿದ್ದ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲು ಸೂಚನೆ ನೀಡಿತ್ತು. ‌ಹೈಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ಅಧಿಕಾರಿಗಳು ಉಪ್ಪಾರಪೇಟೆ ಹಾಗೂ ಕಾಟನ್‌ಪೇಟೆ ಠಾಣೆ ಪೊಲೀಸರ ಸಹಾಯದೊಂದಿಗೆ 50ಕ್ಕೂ ಹೆಚ್ಚು ವ್ಯಾಪಾರಿಗಳ ಸರಕು ಸರಂಜಾಮುಗಳನ್ನು ತೆರವುಗೊಳಿಸಿದ್ದಾರೆ. ಇದೀಗ ಅಂಡರ್‌ ಪಾಸ್ ಸುಂದರವಾಗಿ ಕಾಣುತ್ತಿದೆ. ಜತೆಗೆ ಪ್ರಯಾಣಿಕರಿಗೆ ಕಿರಿ-ಕಿರಿ ತಪ್ಪಿದಂತಾಗಿದೆ. ‘ಜನಜಂಗುಳಿ ಇದ್ದರೂ ಈ ಮಾರ್ಗದಲ್ಲಿ ಒಬ್ಬಂಟಿಯಾಗಿ ಓಡಾಡಲು ಮೊದಲು ಭಯ ಆಗುತ್ತಿತ್ತು. ಇಲ್ಲೇ ನಿಂತಿರುತ್ತಿದ್ದ ಕೆಲವರು ಯುವತಿಯರನ್ನು ಚುಡಾಯಿಸುತ್ತಿದ್ದರು. ಕಣ್ಣ ಮುಂದೆಯೇ ಅಹಿತಕರ ಸಂಗತಿಗಳು ನಡೆದರೂ ಕಂಡೂ ಕಾಣದಂತೆ ಹೋಗಬೇಕಿತ್ತು. ವ್ಯಾಪಾರ ನಿರ್ಬಂಧದಿಂದ ಇನ್ನು ಇಲ್ಲಿ ಧೈರ್ಯವಾಗಿ ಸಂಚರಿಸಬಹುದು’ ಎಂದು ನಿತ್ಯ ಈ ಸುರಂಗವನ್ನು ಬಳಸುವ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.