ತಾಳಗುಂದ ದಲ್ಲಿ ಪತ್ತೆಯಾದ ಶಾಸನ ಕನ್ನಡದ ಅತ್ಯಂತ ಹಳೆಯ ಹಲ್ಮಿಡಿ ಶಾಸನ ಕಿಂತಾ ಹಳೆಯ ಶಾಸನ ಎಂದು ಪರಿಗಣಿಸಲಾಗಿದೆ.

0
2147

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರ ಇರುವ ತಾಳಗುಂದ ದಲ್ಲಿ ಇರುವ ಪ್ರಣವೇಶ್ವರ ದೇವಾಲಯದ ಆವರಣದಲ್ಲಿ ದೊರೆತ ಕಲ್ಲಿನ ಶಾಸನ ಕನ್ನಡದ ಅತ್ಯಂತ ಹಳೆಯ ಹಲ್ಮಿಡಿ ಶಾಸನ ಕ್ಕಿಂತಾ ಹಳೆಯದು.

2013-14ರಲ್ಲಿ ಶಿರಾಳಕೊಪ್ಪ ತಾಲ್ಲೂಕಿನ ತಾಳಗುಂದ ನಲ್ಲಿ ಕಲ್ಲಿನ (370 ಕ್ರಿ.ಶ ಕಾಲದ) ಶಾಸನ ವನ್ನು ಕಂಡುಹಿಡಿದಿತ್ತು ಪುರಾತತ್ವ ಇಲಾಖೆ (ಎಎಸ್ಐ). ಈ ವಿಷಯ ನಿಜಕ್ಕೂ ಶಿಕಾರಿಪುರ ತಾಲ್ಲೂಕನ್ನು ಜಿಲ್ಲೆಯ ಜನರಿಗೆ ಒಂದು ಖುಷಿ ಮತ್ತು ಹೆಮ್ಮೆಪಡುವಂತಹ ವಿಷಯ. ಈಗ ಈ ಕಲ್ಲಿನ ಶಾಸನ ಹಲ್ಮಿಡಿ ಶಾಸನಕ್ಕಿಂತ ಹಳೆಯ ಕಲ್ಲಿನ ಶಾಸನ ಎಂದು ಪರಿಗಣಿಸಲಾಗಿದೆ.

ಹಲ್ಮಿಡಿ ಶಾಸನ – 450 ಕ್ರಿ.ಶ ಮತ್ತು 500 ಕ್ರಿ.ಶ ನಡುವಿನ ಕಾಲದ್ದು ಈ ಶಾಸನ ಹಿಂದಿನ ಅತ್ಯಂತ ಹಳೆಯ ಕನ್ನಡ ಶಾಸನ ಎಂದು ನಂಬಲಾಗಿತ್ತು.

ಭಾರತೀಯ ಆರ್ಕಿಯಾಲಜಿ-2013-14 ವಿಮರ್ಶೆಯ ಪ್ರಕಾರ, 2016 ಎಎಸ್ಐ ನಿರ್ದೇಶಕ ಜನರಲ್ ಪ್ರಕಟಿಸಿದ ಪ್ರಣವೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಕಂಡುಬರುವ ಶಿಲಾ ಶಾಸನವು 370 ಕ್ರಿ.ಶ ಕಾಲದ ಹಳೆಯ ಕನ್ನಡ ಶಾಸನ ಎಂದು ಹೇಳಿದ್ದಾರೆ. ಹಾಗಾದರೆ ಈ ಶಾಸನದಲ್ಲಿ ಎಡದಿಂದ ಬಲಕ್ಕೆ ಬ್ರಾಹ್ಮಿ ಲಿಪಿಯಲ್ಲಿ ಬರೆದದ್ದಾಗಿದೆ, ಕನ್ನಡದ ಜೊತೆಗೆ ಸಂಸ್ಕೃತ ಭಾಷೆಯ ಬಳಕೆಯು ಇರುವುದರಿಂದ ಇದನ್ನು ದ್ವಂದ್ವ ಭಾಷೆಯ ಶಾಸನ ಎಂದು ಹೇಳಲಾಗುತ್ತಿದೆ.

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರ ಇರುವ ತಾಳಗುಂದ ಕನ್ನಡದ ಮೊಟ್ಟ ಮೊದಲ ವಿದ್ಯಾಕೇಂದ್ರ. ಇಲ್ಲಿ ನೆಲೆಸಿರುವ ಪ್ರಣವೇಶ್ವರ ದೇವಾಲಯದ ಆವರಣವೇ ಕನ್ನಡ ಪಾಠ-ಪ್ರವಚನಗಳ ಪ್ರಾಂಗಣ. ದೇವಸ್ಥಾನದ ಪಕ್ಕದಲ್ಲಿರುವ ಪ್ರಣವೇಶ್ವರ ಕೆರೆ ಕರ್ನಾಟಕದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೆರೆ ಎಂದು ಹೇಳಲಾಗುತ್ತದೆ.

ಇತಿಹಾಸದ ಪುಟಗಳನ್ನೂ ತೆರೆದು ನೋಡಿದರೆ ತಾಳಗುಂದ ಪ್ರಣವೇಶ್ವರನ ಸನ್ನಿಧಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಮಯೂರ ಶರ್ಮ, ಪಲ್ಲವರಿಂದ ಆದ ಅವಮಾನದಿಂದ ಕದಂಬ ರಾಜ್ಯ ಕಟ್ಟಿದ. ಕನ್ನಡಿಗರ ಸ್ಫೂರ್ತಿ ಚಿಲುಮೆಯಾಗಬೇಕಿದ್ದ ಮಯೂರ ಶರ್ಮನ ಆರಾಧ್ಯದೈವ ತಾಳಗುಂದದ ಪ್ರಣವೇಶ್ವರ ದೇವಾಲಯ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲಾ ಕ್ರಿ.ಶ. 450ರಲ್ಲಿ ಪ್ರಣವೇಶ್ವರ ದೇವಾಲಯದ ಮುಂದೆ ನೆಟ್ಟಿರುವ ಕಂಬದಲ್ಲಿನ ಶಾಸನವು ಮಯೂರ ವರ್ಮನ ಬಗ್ಗೆ ಬೆಳಕು ಚೆಲ್ಲುತ್ತದೆ.

ಕನ್ನಡಿಗರ ಸ್ವಾಭಿಮಾನದ ಕಿಚ್ಚು, ಹೊಸ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ್ದರ ಬಗ್ಗೆ ಜಾಗೃತಿ ಮೂಡಿಸುವ ಈ ತಾಳಗುಂದ ಊರಿನ ಪ್ರಣವೇಶ್ವರನ ದೇವಾಲಯ ಒಂದು ಐತಿಹಾಸಿಕ ತಾಣ ಎಂದು ಹೇಳಿದರೆ ತಪ್ಪಾಗಲಾರದು.