ಕಾವೇರಿ ನೀರು ಕೊಡದಿದ್ರು ಪರವಾಗಿಲ್ಲ, ಕನ್ನಡಿಗರು ಒಂದು ಲೋಟ ನೀರಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಲಿ: ತಮಿಳು ನಟ ಸಿಂಬು!!

0
1201

ಮಾತು ಗಾರಿಕೆ ಬರೀ ರಾಜಕಾರಣಿಗಳ ಬಂಡವಾಳ ಅಲ್ಲವೇ ಅಲ್ಲ. ಸಾಮಜೀಕ ಜೀವನದಲ್ಲಿ ಬಾಳು ನಡೆಸುವ ಅದೆಷ್ಟೋ ಜನರ ಬಂಡವಾಳ. ತಮ್ಮ ಬಣ್ಣ ಬಣ್ಣದ ಮಾತುಗಳಿಂದಲೇ ಜನರನ್ನು ಮರಳು ಮಾಡುವ ಕಲಾವಿದರು ಇದ್ದಾರೆ. ಇನ್ನು ಪ್ರಿತಿಯಿಂದ ಮಾತನಾಡಿಸಿ ನಮ್ಮಲಿಂದ ಕೆಲಸ ಪಡೆಯವರು ಇದ್ದಾರೆ. ಹೊಡೆದಾಟ ಬಡೆದಾಟದಿಂದ ಕೆಲಸ ಅಸಾಧ್ಯ ಎನ್ನೋರು ಸಾಕಷ್ಟ.

ಗಾಂಧಿನಾಡಿನಲ್ಲಿ ಹಿಂಸೆಯಿಂದ ಕೆಲಸ ಮಾಡಲು ಸಾಧ್ಯವೇ ಇಲ್ಲ. ಶಾಂತಿ ಮಂತ್ರದಮೂಲಕ ಕೆಲಸ ಮಾಡಬಹುದು. ಕರ್ನಾಟಕದಲ್ಲಿ ಕುಡಿಯಲೇ ನೀರು ಇಲ್ಲ. ಇನ್ನು ನಮಗೆ ಎಲ್ಲಿಂದ ಕೊಡ್ತಾರೆ ಎಂದು ಖ್ಯಾತ ನಟ ಸಿಂಬು ಕಾವೇರಿ ಹೋರಾಟದ ಬಗ್ಗೆ ತಿಳಿಸಿದ್ದಾರೆ.

ತಮ್ಮ ಭಾಷಣದ ಉದ್ದಕ್ಕೂ ಕರ್ನಾಟಕವನ್ನು ಹಾಡಿ ಹೊಗಳಿದ ಸಿಂಬು. ಕರ್ನಾಟಕದಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ನೀರು ಕೊಡಿ ಎಂದ್ರೆ ಎಲ್ಲಿಂದ ಕೊಡ್ತಾರೆ. ಪರಸ್ಪರ ಜಗಳವಾಡುವುದರಿಂದ ಸಮಸ್ಯೆ ಬಗೆಹರಿಯದು ಪ್ರೀತಿಯಿಂದ ಮಾತನಾಡಿಸಬೇಕು ಎಂದಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಿಟ್ಟುರು ಸಿಂಬು, ನೀವು ಕುಡಿದು ದಣಿವು ಆರಿಸಿಕೊಂಡ ಬಳಿಕ ನಮಗೆ ನೀರನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ. ಗಾಂಧಿ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಶಾಂತಿಯ ಹೋರಾಟ ನಡೆಸಬೇಕು ಎಂದಿದ್ದಾರೆ.

ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ನಮ್ಮಲ್ಲಿ ಮತಬೇಧ ಮಾಡ್ತಾ ಇದ್ದಾರೆ. ಇನ್ನು ನೀರು ತಡೆಗೆ ನೀವು ಆಣೆ ಕಟ್ಟು ಕಟ್ಟಿದ್ರು ಸಹ, ಹೆಚ್ಚು ನೀರು ಬಂದ್ರೆ, ಆಣೆಕಟ್ಟೆಯ ಬಾಗಿಲು ತೆರೆಯುತ್ತೀರಲ್ಲಾ, ಆಗ ನೀರು ಪಡೆಯುತ್ತೇವೆ. ಇನ್ನು ನೀರು ಕೊಡಲು ಆಗದು ಎಂದು ತಾಯಂದ್ರು ಅತ್ರೆ ಅದು ಸಹ ಅವರ ಕಣ್ಣೀರಿನ ಕಟ್ಟೆ ಒಡೆದ ಹಾಗೆಯೆ ಎಂದಿದ್ದಾರೆ.

ನೀವು ನೀರು ಕೋಡೋದಾದ್ರೆ, ಬುಧವಾರ ಮಧ್ಯಾಹ್ಮ 3 ಗಂಟೆಯಿಂದ ಸಂಜೆ 6 ಗಂಟೆಯೊಳಗೆ ಲೋಟಾದಲ್ಲಿ ನೀರು ತುಂಬಿಕೊಂಡಿರುವ ದೃಶ್ಯವನ್ನು ಸಾಮಾಜಿಕ ತಾಣದಲ್ಲಿ ಹಾಕಿ. ನೀವು ಏನು ಹಾಕದೇ ಇದಲ್ಲಿ ನಿಮಗೆ ನೀರು ಕೊಡುವ ಮನಸ್ಸು ಇಲ್ಲ ಎಂದು ತಿಳಿಯುತ್ತೇನೆ ಎಂದಿದ್ದಾರೆ.