ಜಿಲ್ಲಾಧಿಕಾರಿಯಾಗಿ ತಮ್ಮ ಮಗಳನ್ನು ಅಂಗನವಾಡಿಗೆ ಸೇರಿಸಿ ಸರಳತೆ ಮೆರೆದ, IAS ಅಧಿಕಾರಿಗಳು ದೇಶಕ್ಕೆ ಮಾದರಿಯಾಗಿ ಮೆಚ್ಚುಗೆ ಪಡೆದಿದ್ದಾರೆ..

0
698

ಎಷ್ಟೇ ಬಡತನ ಇದ್ದರು ಮಕ್ಕಳ ಶಿಕ್ಷಣಕ್ಕೆ ಶ್ರೀಮಂತಿಕೆ ತೋರಿಸಲೇ ಬೇಕು ಎನ್ನುವ ಕಾಲವಿದು, ಏಕೆಂದರೆ ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಅವರು ಮುಂದೆ ಒಳ್ಳೆಯ ಹುದ್ದೆ, ಗೌರವವನ್ನು ಪಡೆಯಲೇಬೇಕು ಎನ್ನುವ ಹಿನ್ನೆಲೆಯಲ್ಲಿ ಪಾಲಕರಿಗೆ ಎಷ್ಟೇ ಕಷ್ಟವಾದರೂ ಲಕ್ಷ- ಲಕ್ಷ ಫೀಜ್ ನೀಡಿ ಬರಿ LKG, UKG ಗೆ ಸೇರಿಸುತ್ತಾರೆ. ಅದರಲ್ಲಿ ಸ್ವಲ್ಪ ಆರ್ಥಿಕವಾಗಿ ಬಲಿಷ್ಠರಾಗಿರುವರಂತು ಇನ್ನೂ ಹೆಚ್ಚಿನ ಹಣ ನೀಡಿ ಶಾಲೆಗೇ ಸೇರಿಸುತ್ತಾರೆ. ಅದರಲ್ಲಿ ದೊಡ್ಡ ಹುದ್ದೆಗಳಾದ IAS-KAS ಅಧಿಕಾರಿಗಳು ಇನ್ನೂ ಎಂತಹ ಶಾಲೆಗೆ ಸೇರಿಸಬಹುದು ಅಲ್ವ?

Also read: ಎರಡು ಮಕ್ಕಳ ತಾಯಿ; ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗಲು ಸಿದ್ದಳಾದ ‘ಪವರ್ ಲಿಫ್ಟರ್’ ಕವಿತಾ ದೇವಿ! ದೇಶಕ್ಕೆ ಮಾದರಿ..

ಹೌದು ದೊಡ್ಡ ಹುದ್ದೆಯಲ್ಲಿರುವರು ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇಲ್ಲೊಬ್ಬರು IAS ಅಧಿಕಾರಿಗಳು ತಮ್ಮ ಮಗಳನ್ನು ಅಂಗನವಾಡಿಗೆ ಸೇರಿಸಿದ್ದಾರೆ. ಮುಂದೆ ತಮ್ಮ ಮಗಳು ಎಲ್ಲರಂತೆ ಸರ್ಕಾರಿ ಶಾಲೆಗಳಲ್ಲಿ ಕಲಿಯಬೇಕು ಎನ್ನುವುದು ಇವರ ಆಸೆಯಂತೆ. ಇಷ್ಟೊಂದು ಸರಳತೆ ಹೊಂದಿರುವ ಐಎಎಸ್ ಅಧಿಕಾರಿಗಳು ಬೇರೆಯಾರಲ್ಲ ಕರ್ನಾಟಕದ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಮೂಲದವರಾದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಅವರು ತಮ್ಮ ಮಗಳನ್ನು ಅಂಗನವಾಡಿಗೆ ಸೇರಿಸಿದ್ದಾರೆ.

Also read: ಮಕ್ಕಳ ದಿನಾಚರಣೆಯಂದು ರೈತರಾಗಿ ಹೊಲದಲ್ಲಿ ದುಡಿದು ಮಕ್ಕಳ ದಿನಾಚರಣೆ ಮಾಡಿಕೊಂಡ ಈ ಶಾಲೆಯ ಮಕ್ಕಳು ದೇಶಕ್ಕೆ ಮಾದರಿಯಾಗಿದ್ದಾರೆ..

ಈ ವಿಷಯ ಕೇಳಿದ್ರೆ ಜಿಲ್ಲಾಧಿಕಾರಿಗಳಿಗೆ ಮಗಳನ್ನು ಒಳ್ಳೆಯ ಶಾಲೆಗೆ ಸೇರಿಸುವಷ್ಟು ಹಣವಿಲ್ಲವೆ ಅನಿಸಬಹುದು. ಅದು ಶಿಲ್ಪಾ ಅವರಿಗೆ ಕಷ್ಟವೇನಲ್ಲ. ಆದ್ರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಹಾಗೂ ಉತ್ತಮ ಪರಿಸರ ದೊರಕುವಾಗ ದುಬಾರಿ ಶಿಕ್ಷಣದ ಮೊರೆ ಯಾಕೆ ಹೋಗಬೇಕು ಅಂತ ಸರಳವಾಗಿ ತಮ್ಮ ಮಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸಮೀಪವಿರುವ ಪಲಾಯಕಮೊಟ್ಟಿಯ ಅಂಗನವಾಡಿಗೆ ಸೇರಿಸಿದ್ದಾರೆ. ಇದರ ಮೂಲ ಉದ್ದೇಶ, ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆ, ಅಂಗನವಾಡಿ ಅಭಿವೃದಿ ಮಾಡಲು ಮುಂದಾಗುತ್ತಾರೆ, ಮತ್ತು ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಶ್ರಮಿಸುತ್ತಾರೆ, ಆದರೆ ತಮ್ಮ ಮಕ್ಕಳನ್ನು ಇಂತಹ ಶಾಲೆಗೆ ಸೇರಿಸುವುದಿಲ್ಲ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಜಿಲ್ಲಾಧಿಕಾರಿ ಇಷ್ಟೊಂದು ಸರಳತೆ ಮೆರೆದಿದ್ದಾರೆ.

Also read: ಈ ಗ್ರಾಮದ ಹೆಣ್ಣುಮಕ್ಕಳು ಇಡೀ ದೇಶಕ್ಕೆ ಮಾದರಿ, ಅಕ್ರಮ ಹೆಂಡದ ಮಾರಾಟವನ್ನು ತಡೆಯುವುದಕ್ಕೂ ಏನು ಮಾಡಿದ್ರು ಗೊತ್ತಾ??

ಇದರ ಬಗ್ಗೆ ಶಿಲ್ಪಾ ಅವರೆ ಮಾತನಾಡಿ, ಅಂಗನವಾಡಿ ಕೇಂದ್ರಗಳು ಮೊದಲಿನಂತಿಲ್ಲ, ಬಹಳಷ್ಟು ಬದಲಾಗಿವೆ. ಅಲ್ಲಿ ಮಕ್ಕಳಿಗೆ ಸಕಲ ಪೌಷ್ಟಿಕ ಆಹಾರ ನೀಡುತ್ತಾರೆ. ಮಕ್ಕಳ ಸವರ್ತೋಮುಖ ಬೆಳವಣಿಗೆಗೆ ಬೇಕಾಗುವ ಉತ್ತಮ ಪರಿಸರವನ್ನು ಕಲ್ಪಸಿಕೊಡಲಾಗುತ್ತದೆ. ತಮ್ಮ ಮಗಳನ್ನು ಸೇರಿಸಿರುವ ಅಂಗನವಾಡಿ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ, ಅಲ್ಲಿರುವ ಶಿಕ್ಷಕಿಯರು ತುಂಬಾ ಸಕ್ರಿಯರಾಗಿದ್ದಾರೆ. ತಿರುನೆಲ್ವೇಲಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳೂ ಸ್ಮಾರ್ಟ್ ಫೋನ್ ಹೊಂದಿವೆ. ಅಲ್ಲಿ ಮಕ್ಕಳ ಎತ್ತರ – ತೂಕ ಹಾಗೂ ಅವರು ತಿಂದ ಆಹಾರದ ಪ್ರಮಾಣ ಕೂಡ ಅಳತೆ ಮಾಡಲಾಗುತ್ತದೆ. ಆದರಿಂದ ಜಿಲ್ಲೆಯಲ್ಲಿ ಅಂಗನವಾಡಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಾವು ನಿರ್ಧರಿಸಿದ್ದೇವೆ. ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಅಂಗನವಾಡಿಗಳು ಒಳ್ಳೆಯ ಅಡಿಪಾಯ ಹಾಕಿಕೊಡುತ್ತದೆ ಎಂದು ತಿಳಿಸಿದ್ದಾರೆ. ಇಷ್ಟೊಂದು ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿ ಶಿಲ್ಪಾ ಅವರಂತೆ ಎಲ್ಲ ಅಧಿಕಾರಿಗಳಾದರೆ ದೇಶದಲ್ಲಿ ಬಡವ ಶ್ರೀಮಂತರಿಗೆ ಸಮಾನವಾದ ಶಿಕ್ಷಣ ದೊರೆಯುವುದರಲ್ಲಿ ಅನುಮಾನವೇ ಇಲ್ಲ.