Tamil Nadu Govt Double Game ನೋಡಿ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ.

0
902

ತಮಿಳುನಾಡಿಗೆ ಸೆಪ್ಟೆಂಬರ್ 21ರಿಂದ 27ರವರೆಗೆ ನಿತ್ಯ 6 ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪ್ರತಿ ನಿತ್ಯ ತಮಿಳುನಾಡಿಗ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಪಾಲಿಸಿದರೆ ಕರ್ನಾಟಕದ ಕುಡಿಯುವ ನೀರಿಗೂ ತೊಂದರೆಯಾಗಲಿದೆ.

ಸುಪ್ರೀಂಕೋರ್ಟ್ ನಲ್ಲಿ ನೆಡೆದಂತಹ ವಾದವಿವಾದದಲ್ಲಿ ತಮಿಳು ನಾಡು, ಕರ್ನಾಟಕಕ್ಕೆ ಕೇಳಿದ ಪ್ರಶ್ನೆ:

ಬೆಂಗಳೂರಿನ ಹೆಚ್ಚಿನ ಭಾಗ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿಲ್ಲಾ. ಅಲ್ಲಿಗೆಲ್ಲಾ ಕಾವೇರಿಯನ್ನ ಯಾಕೆ ಬಳಿಸ ಬೇಕು? ಎಂದು ತಮಿಳು ನಾಡುಪರ ವಕೀಲರು ಪ್ರಶ್ನೆ ಕೇಳಿದಾಗ, ಕರ್ನಾಟಕದ ಪರ ವಕೀಲರು ಕೊಟ್ಟಂತಹ ಉತ್ತರ (ಫ಼ಾಲಿ ನಾರಿಮನ್) “ನಾವೂ, ಚೆನ್ನೈಗೆ ಕೃಷ್ಣೆ ನೀರು ಕೊಟ್ಟಿದ್ದೇವಲ್ಲ, ಅದೂ ಕೃಷ್ಣೆಯ ಅಚ್ಚುಕಟ್ಟು ಪ್ರದೇಶದಲ್ಲಿದೆಯೇ? ಎಂದು ಹೇಳಿದರು.

ಇದನ್ನ ನಾವೆಲ್ಲ ಯೋಚನೆ ಮಾಡಲೇಬೇಕಂದತಹ ವಿಚಾರ ಕರ್ನಾಟಕ ತಮಿಳುನಾಡಿನ ಚೆನ್ನೈ ಗೆ ನಿರಾಸ್ ಬಿಡುತ್ತಿದ್ದೇವೆ ಕಾವೇರಿ ನಮ್ಮ ನಾಡಿನ ಜೀವನಾಡಿ ಅದನ್ನು ಯಾಕ ನಾವ್ ಕೊಡಬೇಕು…?

ಇದೇ ರೀತಿ ಕಾವೇರಿ ನೀರು ಪ್ರತಿ ನಿತ್ಯ ತಮಿಳುನಾಡಿಗೆ ಹರಿಸಿದರೆ ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಇಂತಹ ಸಂದರ್ಭದಲ್ಲಿ ನೀಡಿರುವ ಆದೇಶವನ್ನು ಪ್ರತಿರೋಧಿಸುವಂತಹದ್ದೇ ನಮ್ಮ ಧರ್ಮ. “ಕಾನೂನು ನಮಗೆ ಅನುಪಯುಕ್ತವಾದಾಗ ಅದನ್ನು ಉಲ್ಲಂಘಿಸುವುದೇ ನಮ್ಮ ಧರ್ಮ” ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೇ ಹೇಳಿದ್ದಾರೆ.

“ಕಾವೇರಿ ಕ್ರಿಯಾ ಸಮಿತಿ ಬೇಡ.
ರಾಷ್ಟ್ರೀಯ ಜಲನೀತಿ” ಬೇಕು.

ಸ್ವಲ್ಪ ಗಮನಿಸಿ, ಇದೀಗ ಬಂದ ಭಯಂಕರ ಸುದ್ದಿ “ಕೇಂದ್ರವು ಕಾವೇರಿ ನಿರ್ವಹಣಾ ಮಂಡಳಿ (ಸಮಿತಿ)ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದೆ ಯಂತೆ. ಇದಂತು ಭೂಕಂಪಕ್ಕಿಂತಲೂ ಘೋರ ತೀರ್ಮಾನ. ಕಾವೇರಿ ನಿರ್ವಹಣಾ ಮಂಡಳಿ ಏನಾದರು ಅಸ್ತಿತ್ವಕ್ಕೆ ಬಂದರೆ, ಕನ್ನಡಿಗರ ಬಾಯಿಗೆ ಬರೀ ಮಣ್ಣೇ. ಇದರಿಂದಾಗಿ ನಮ್ಮ ಅಣೆಕಟ್ಟು ಸಂಪೂರ್ಣ ಕೇಂದ್ರದ ವಶವಾಗುತ್ತದೆ. ಪ್ರತಿಭಟನೆ ಮಾಡಿದ್ರು ಅಷ್ಟೇ, ಆತ್ಮಹತ್ಯೆ ಮಾಡಿಕೊಂಡ್ರು ಅಷ್ಟೇ.

ಕಾವೇರಿ ನಿರ್ವಹಣಾ ಮಂಡಳಿ ಬೇಡ. ರಾಷ್ಟ್ರೀಯ ಜಲನೀತಿ ಬೇಕು.

ರಾಷ್ಟ್ರೀಯ ಜಲ ನೀತಿ ಬಂದರೆ ನಮ್ಮ ರಾಜ್ಯದ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರು ನಮ್ಮದು….ದಯವಿಟ್ಟು ಯೋಚನೆ ಮಾಡಿ ಪ್ರಬುದ್ಧರಾಗಿ.