ಸರ್ಕಾರಿ ಆಸ್ಪತ್ರೆ ಎಡವಟ್ಟು; ಗರ್ಭಿಣಿ ಮಹಿಳೆಗೆ ಎಚ್​ಐವಿ ಸೋಂಕಿತ ರಕ್ತ ವರ್ಗಾವಣೆ, ರಕ್ತ ನೀಡಿದ ಎಚ್​ಐವಿ ಸೋಂಕಿತ ಸುಸೈಡ್ ಅಟ್ಟೆಂಪ್ಟ..

0
581

ರಕ್ತದಾನ ಮಾಡುವಾಗ ವ್ಯಕ್ತಿಯಿಂದ ಪಡೆಯುವ ರಕ್ತವನ್ನು ಪರೀಕ್ಷಿಸಿ ನಂತರ ಬೇರೆಯರಿಗೆ ವರ್ಗಾವಣೆ ಮಾಡಬೇಕಾಗುತ್ತದೆ. ಈ ಕ್ರಮವನ್ನು ಅನ್ವಯಿಸದೆ ಎಚ್​ಐವಿ ಸೋಂಕಿತ ವ್ಯಕ್ತಿಯ ರಕ್ತವನ್ನು ಗರ್ಭಿಣಿಗೆ ವರ್ಗಾವಣೆ ಮಾಡಿದ ಪ್ರಕರಣ ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಸತ್ತೂರ್ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದು ಇಡಿ ದೇಶವನ್ನೇ ಬೆಚ್ಚಿಬಿಳೀಸಿದೆ. ಈ ವಿಷಯ ಹರಡುತ್ತಿದಂತೆ ರಕ್ತ ನೀಡಿದ ಎಚ್​ಐವಿ ಸೋಂಕಿತ ಸುಸೈಡ್ ಅಟ್ಟೆಂಪ್ಟ್ ಮಾಡಿಕೊಂಡಿದ್ದಾನೆ.

Also read: ಸರ್ಕಾರಿ ಆಸ್ಪತ್ರೆ ಎಡವಟ್ಟು; ಗರ್ಭಿಣಿ ಮಹಿಳೆಗೆ ಎಚ್​ಐವಿ ಸೋಂಕಿತ ರಕ್ತ ವರ್ಗಾವಣೆ, ರಕ್ತ ನೀಡಿದ ಎಚ್​ಐವಿ ಸೋಂಕಿತ ಸುಸೈಡ್ ಅಟ್ಟೆಂಪ್ಟ.. — Draft

ಏನಿದು ಪ್ರಕರಣ?

ತಮಿಳುನಾಡಿನ ವಿರುಧುನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಗರ್ಭಿಣಿ ಮಹಿಳೆಗೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇತ್ತು. ಹೆಚ್ಚುವರಿ ರಕ್ತ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಆದಕಾರಣ ಮಹಿಳೆಯ ಪತಿ ಸರ್ಕಾರಿ ಆಸ್ಪತ್ರೆ ರಕ್ತನಿಧಿಯಿಂದ ರಕ್ತ ತಂದುಕೊಟ್ಟಿದ್ದರು. ನಂತರ ವೈದ್ಯರು ಅದನ್ನು ವರ್ಗಾವಣೆ ಮಾಡಿದರು ಆ ರಕ್ತ ಎಚ್ಐವಿ ಸೋಂಕಿತ ವ್ಯಕ್ತಿಯ ರಕ್ತವಾಗಿದೇ. ರಕ್ತನಿಧಿ ಘಟಕದವರು ಆತನ ವೈದ್ಯಕೀಯ ವಿವರಗಳು ಮತ್ತು ರಕ್ತದ ಮಾದರಿ ಪರೀಕ್ಷೆ ಮಾಡದೇ ಸಂಗ್ರಹ ಮಾಡಿದ್ದಾರೆ. ಈಗ ಆತನ ಪರೀಕ್ಷೆ ನಡೆಸಿರುವ ವೈದ್ಯರು ಆತ ಎಚ್​ಐವಿ ಸೊಂಕು ಹಾಗೂ ಹೆಪಟೈಟಸ್​ ಬಿಯಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಲ್ಯಾಬ್​ ಟೆಕ್ನಿಶಿಯನ್​ ಅಮಾನತು:

ಘಟನೆಗೆ ಸಂಬಂಧಿಸಿದಂತೆ ಶಿವಕಾಶಿ ಪಟ್ಟಣದ ಮೂವರು ಲ್ಯಾಬ್​ ಟೆಕ್ನಿಶಿಯನ್​ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಎರಡು ವರ್ಷಗಳ ಹಿಂದೆ ಶೇಖರಿಸಲ್ಪಟ್ಟ ಈ ರಕ್ತವನ್ನು 24 ವರ್ಷದ ಗರ್ಭಿಣಿ ಮಹಿಳೆಗೆ ನೀಡಲಾಗಿದೆ. ಈ ರಕ್ತವನ್ನು ಯಾರಿಂದ ಶೇಖರಿಸಲಾಗಿತ್ತು ಎಂಬ ಮಾಹಿತಿಯನ್ನು ಸಂಗ್ರಹಣೆ ಮಾಡದೆ ನಿರ್ಲಕ್ಷ್ಯ ತೋರಲಾಗದೆ. ಇನ್ನು ಮಹಿಳೆಗೆ ಸರ್ಕಾರದ ವತಿಯಿಂದ ಆರ್ಥಿಕ ಪರಿಹಾರ, ಆಕೆ ಮತ್ತು ಆಕೆಯ ಗಂಡನಿಗೆ ಕೆಲಸವನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ, ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸಹಾಯ ಕೇಳಿದ್ದಾರೆ.

ಸದ್ಯದ ಗರ್ಭಿಣಿ ಮಹಿಳೆಗೆ ಪರಿಸ್ಥಿತಿ:

ಮಹಿಳೆಗೆ ರಕ್ತದ ಸೊಂಕು ತಲುಪಿದ ತಕ್ಷಣ ಪತ್ತೆಯಾಗಿರುವುದರಿಂದ ಆಕೆಗೆ ಆ್ಯಂಟಿರಿಟ್ರೋವಲ್​ ಚಿಕಿತ್ಸೆ ನೀಡಲಾಗುವುದು. ಇದರಿಂದ ಆಕೆ ದೀರ್ಘಕಾಲ ಬದುಕುವ ಸಾಧ್ಯತೆ ಇದೆ. ಇನ್ನು ಆಕೆ ಕುಟುಂಬ ಮಗುವಿಗೆ ಈ ಸೊಂಕು ಅಂಟಿದೆಯಾ ಎಂಬ ಬಗ್ಗೆ ಹೆರಿಗೆಯಾದ ಬಳಿಕವೆ ತಿಳಿಯಬೇಕಾಗಿದೆ ವೈದ್ಯರು ತಿಳಿಸಿದ್ದಾರೆ.

ದೂರು ದಾಖಲು:

ಎಚ್​ಐವಿ ಸೋಂಕಿತ ರಕ್ತ ನೀಡಿರುವ ವೈದ್ಯರು, ನರ್ಸ್​ಗಳು ಮತ್ತು ರಕ್ತಿನಿಧಿ ಸಿಬ್ಬಂದಿಯ ವಿರುದ್ಧ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ. ತಮಿಳುನಾಡು ಸರ್ಕಾರದ ಬೇಜವಾಬ್ದಾರಿ ತೋರಿದೆ. ಪತ್ನಿಗೆ ಸರ್ಕಾರವೇ ಅತ್ಯುತ್ತಮ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಗರ್ಭಿಣಿಯ ಪತಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಮಿಳುನಾಡು ಸರ್ಕಾರ ಭರವಸೆ ನೀಡಿದೆ. ಇದೀಗ ಗರ್ಭಿಣಿ ಎಚ್ಐವಿ ಸೋಂಕಿತೆಯಾಗಿದ್ದು, ಜೀವನ ಪೂರ್ತಿ ನರಕ ಅನುಭವಿಸಬೇಕಾಗಿದೆ. ಆಕೆಯ ಗರ್ಭದಲ್ಲಿರುವ ಶಿಶುವಿಗೂ ಎಚ್ ಐವಿ ತಗುಲುವ ಸಾಧ್ಯತೆ ಇದೆ ಆದಕಾರಣ ಸರ್ಕಾರವೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಿ ಎಂದು ಹೇಳಿದ್ದಾನೆ.