ಕಾನ್ಸರ್​ ರೋಗದಿಂದ ಸಾವನ್ನೇ ಗೆದ್ದು ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ ಫೈನಲ್​ಗೆ ಆಯ್ಕೆಯಾಗಿ, ಬೆಂಗಳೂರನ್ನು ಪ್ರತಿನಿಧಿಸಲಿರುವ ಈ ಸುಂದರಿ ಎಲ್ಲರಿಗೂ ಸ್ಪೂರ್ತಿ!!

0
407

ಸಾಧನೆ ಮಾಡುವ ಛಲ ವಿರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಅಡ್ಡಿ-ಆತಂಕಗಳು ಇರುವುದು ಸಾಮಾನ್ಯ, ಹಾಗಂತ ಸಾಧನೆ ಮಾಡಿದ 90 ರಷ್ಟು ಜನರು ಜೀವನದಲ್ಲಿ ಬೆಟ್ಟದಷ್ಟು ಕಷ್ಟವನ್ನು ಸೋಸಿ ಬಂದಿರುತ್ತಾರೆ. ಅದರಲ್ಲಿ ಕೆಲವರಿಗೆ ಆರ್ಥಿಕ ಪರಿಸ್ಥಿತಿ, ಅಡ್ಡಲಾಗಿ ಬಂದರೆ, ಇನ್ನೂ ಕೆಲವರಿಗೆ ಭಯಾನಕ ಖಾಯಿಲೆಗಳು ಸೇರಿಕೊಂಡು ಅವರ ಶ್ರಮವನ್ನೇ ಪೊಳ್ಳು ಮಾಡುತ್ತೇವೆ. ಅದರಂತೆ ಕೆಲವು ಅನುಭವಸ್ಥರು ಹೇಳುವ ಪ್ರಕಾರ. ಹಣ, ತಿನ್ನಲು ಊಟ, ಬಟ್ಟೆ ಇಲ್ಲದೆ ಇದ್ದರು ಹೇಗೋ ಜೀವನ ಮಾಡಬಹುದು ಆದರೆ ದೈಹಿಕವಾಗಿ ಸದೃಡರಿಲ್ಲದೆ ಆರೋಗ್ಯದಲ್ಲಿ ನಾನಾರೀತಿಯ ಕಾಯಿಲೆಗಳು ಸೇರಿದರೆ ಹೇಗೆ ಸಾಧನೆ ಮಾಡಲು ಸಾದ್ಯ ಎಂದು ಹೇಳುತ್ತಾರೆ. ಒಂದು ವೇಳೆ ಇಂತಹ ಕಾಯಿಲೆಗಳನ್ನು ಸೋಸಿ ಸಾಧನೆ ಮಾಡಿದರೆ ಅದು ಬರಿ ಸಾಧನೆಯಲ್ಲ, ವಿಶ್ವ ಸಾಧನೆ ಎಂದು ಹೇಳುತ್ತಾರೆ.

Also read: ಉಪಯುಕ್ತ ಇಲ್ಲದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿ 1 ಲೀಟರ್ ಗೆ 40 ರೂ. ನಂತೆ ಮಾರಾಟ ಮಾಡುತ್ತಿರುವ ಎಂಜಿನಿಯರ್..

ಇದೆಲ್ಲ ಯಾಕೆ ಹೇಳುತ್ತಿರುವುದು ಎಂದರೆ ಇಡಿ ಮಾನವ ಕುಲವನ್ನೇ ಭಯಕೊಳಿಸಿದ ಕ್ಯಾನ್ಸರ್ ಕಾಯಿಲೆಯಿಂದ ಬದುಕಿ ಈಗ ಮಿಸೆಸ್​ ಇಂಡಿಯಾ ವರ್ಲ್ಡ್​ ವೈಡ್​ ಫೈನಲ್​ಗೆ ಆಯ್ಕೆಯಾದ್ದ ಈ ಸುಂದರಿಯ ಬಗ್ಗೆ ಹೇಳಿದರೆ ಎಂತಹವರಿಗೂ ಸ್ಪೂರ್ತಿಯಾಗುತ್ತೆ. ಹೌದು ನೋಡಲು ಸುರ ಸುಂದರಾಂಗಿ, ನೀಲ ಕಣ್ಣುಗಳ ಚೆಲುವೆ, ಬಳುಕೋ ಬಳ್ಳಿಯಂತಹ ಮೈಮಾಟ. ಈ ಸುಂದರಿಯ ಹೆಸರು ತನಿಷಾ ಡಿ ರಾಯ್. ಇವರ ಸಾಧನೆಯ ಹಿಂದೆ ರೋಚಕ ಕಥೆಯೊಂದಿದೆ. ಕೊನೆಗಾಲದ ಬುದುಕಿನಲ್ಲಿ ಸಾವನ್ನು ಗೆದ್ದು ಸಾಧನೆಯ ಶಿಖರವನ್ನು ಏರುವುದು ಅಂದರೆ ಸಾಮನ್ಯನಾ? ಅಂತಹ ಸಾಧನೆ ಮಾಡಿರುವ ತನಿಷಾ ಹಲವರ ಬದುಕಿಗೆ ಸ್ಪೂರ್ತಿಯಾಗಿದ್ದಾರೆ.​

Also read: ಹಳ್ಳಿಯಿಂದ ಬಂದು ಕಂಪನಿ ಸ್ಥಾಪಿಸಿ; ದೇಶದ ಮೊದಲ ಕನ್ನಡದ ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್..

ಮೂಲತಃ ಪಶ್ಚಿಮ ಬಂಗಾಳದ ತನಿಷಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 2018ರ ಜೂನ್​ನಿಂದ ಕ್ಯಾನ್ಸರ್​ ರೋಗದ ವಿರುದ್ಧ ತನಿಷಾ ಹೋರಾಟ ಆರಂಭವಾಯಿತು. ಟ್ಯೂಮರ್​ ಕಾಣಿಸಿಕೊಂಡು ಚಿಕಿತ್ಸೆಗೆ ಒಳಗಾದ ತನಿಷಾಗೆ ದೇಹದಲ್ಲಿ ಗಡ್ಡೆಯಿದೆಯೆಂದು ಗೊತ್ತಾಯಿತು. ಸಲೈವರಿ ಗ್ಲಾಂಡ್​ನಲ್ಲಿದ್ದ ಗೆಡ್ದೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಯಿತು. ಚಿಕಿತ್ಸೆಯಿಂದ ಸರಿಹೋಗದ ಈ ಕಾಯಿಲೆಗಾಗಿ ಶಸ್ತ್ರಚಿಕಿತ್ಸೆಯೊಂದೆ ದಾರಿಯಾಗಿತ್ತು. ದೇಹದಲ್ಲಿ ಕಾನಿಸಿಕೊಂಡ ಗಡ್ಡೆ ಮುಖದ ನರಭಾಗಗಳಿಗೂ ಹರಡಿಕೊಂಡಿದ್ದರಿಂದ ಶಸ್ತ್ರ ಚಿಕಿತ್ಸೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಪಕ್ಷವಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿತ್ತು. ಇವೆಲ್ಲದಕ್ಕೆ ಧೃತಿಗೆಡದ ತನಿಷಾ ಕಿವಿಯಿಂದ ಕತ್ತಿನವರೆಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡರು.

ಶಸ್ತ್ರ ಚಿಕಿತ್ಸೆಯಿಂದ ಹೊರತೆಗೆದ ಗೆಡ್ಡೆಯನ್ನು ಬಯೋಸ್ಕೋಪಿ ಪರೀಕ್ಷೆಗೆ ಕಳುಹಿಸಿದಾಗ ಕಾನ್ಸರ್​ ಇರುವುದು ಧೃಡವಾಯಿತು. ಆತ್ಮವಿಶ್ವಾಸವನ್ನು ಯಶಸ್ಸಿಗೆ ದಾರಿಯೆಂದುಕೊಂಡ ತನಿಷಾ ಚಿಕಿತ್ಸೆ ಪಡೆದು ಗುಣಮುಖರಾದರು. ಆರು ತಿಂಗಳ ಕಾಲ ಬೆಡ್​ ರೆಸ್ಟ್​ ತೆಗೆದುಕೊಳ್ಳ ಬೇಕಾಯಿತು. ಹೀಗಾಗಿ, ವರ್ಷದ ಅರ್ಧ ಅವಧಿಯನ್ನು ಬೆಡ್​ ಮೇಲೆಯೇ ಕಳೆದ ತನಿಷಾ ಖಿನ್ನತೆಗೆ ಒಳಗಾದರು. ದೇಹದ ತೂಕವು ಹೆಚ್ಚಾಗತೊಡಗಿತು. ಚಿಕಿತ್ಸೆ ಪೂರ್ಣಗೊಳಿಸಿದ ನಂತರ ಸೌಂದರ್ಯ ಸ್ಪರ್ಧೆಗೆ ತಯಾರಿ ನಡೆಸಿ , ಜಿಮ್​ ಮತ್ತು ವ್ಯಾಯಾಮ ಮಾಡಲು ಮುಂದಾದರು. ಯಾವ ನೋವನ್ನು ಲೆಕ್ಕಿಸದೆ ಪ್ರತಿದಿನ ಮೂರು ಗಂಟೆಗಳ ಕಾಲ ಜಿಮ್​ನಲ್ಲಿ ಕಾಲ ಕಳೆದು. ಸಾವಿನ ಕದತಟ್ಟಿ ಬಂದ ತನಿಷಾ ದೇಹವನ್ನು ಸಹಜ ಸ್ಥಿತಿಗೆ ತರಲು ಹೋರಾಡಿದರು.

Also read: ಒಂದು ದಿನದ ಊಟಕ್ಕೆ ಪರದಾಡುತ್ತಿದ್ದ ರೈತನ ಮಗ ಈಗ 3,415 ಕೋಟಿ ರೂ ಕಂಪನಿಯ ಒಡೆಯನಾದ ಕಥೆ ಕೇಳಿ, ನಿಮಗೂ ಜೀವನದಲ್ಲಿ ಸಾಧನೆ ಮಾಡೋಕ್ಕೆ ಸ್ಪೂರ್ತಿ ಸಿಗುತ್ತೆ!!

ಈ ಕುರಿತು ಮಾತನಾಡಿದ ಅವರು ಈ ಎಲ್ಲಾ ಹೋರಾದ ಹಿಂದಿರುವ ಅವರ ಪತಿ ಶ್ರಮವಿದೆ ಎಂದು ಹೇಳಿದ್ದಾರೆ. ಸದ್ಯ ತನಿಷಾ 20 ದೇಶದ ಸುಮಾರು 30 ಸಾವಿರ ಸುಂದರಿಯರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ತನಿಷಾ ಫೈನಲ್​ಗೆ ಆಯ್ಕೆಯಾಗಿದ್ದಾರೆ. ಆಕ್ಟೋಬರ್​ನಲ್ಲಿ ಗ್ರೀಸ್​ನಲ್ಲಿ ನಡೆಯುವ ಮಿಸೆಸ್​ ಇಂಡಿಯಾ ವರ್ಲ್ಡ್​ ವೈಡ್​ ಫೈನಲ್​ನಲ್ಲಿ ಭಾಗವಹಿಸುವ ಬೆಡಗಿಯರ ಫೈಕಿ ತನಿಷಾ ಬೆಂಗಳೂರನ್ನು ಪ್ರತಿನಿಧಿಸಲಿದ್ದಾರೆ. ಇಂತಹ ದೈರ್ಯ ಪ್ರತಿಯೊಬ್ಬರಿಗೂ ಇದ್ದರೆ ಯಾವ ಸಾಧನೆ ಮಾಡುವುದು ದೊಡ್ಡ ವಿಷಯವಲ್ಲ.